ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಹಾಲಿವುಡ್‌ನಲ್ಲಿ ಬಿರುಕು ಮೂಡಿಸಿದ 'ಮೆಕೇನ್' ಬೆಂಬಲ
ಹಾಲಿವುಡ್
Feedback Print Bookmark and Share
 
ಹಾಲಿವುಡ್ ನಟಿ ಎಂಜಾಲೀನಾ ಜೊಲಿ ಮತ್ತು ಅವರ ತಂದೆ ಜಾನ್ ವಾಯೈಟ್ ಅವರ ನಡುವಿನ ಸಂಬಂಧ ಹದಗೆಟ್ಟಿತ್ತು, ಜೊಲಿ ತಂದೆ ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದ ಜಾನ್ ಮೆಕೇನ್ ಅವರಿಗೆ ತಮ್ಮ ಬೆಂಬಲ ಘೋಷಿಸಿದ ಮೇಲೆ ತಂದೆ ಮಗಳ ಸಂಬಂಧ ಇನ್ನಷ್ಟು ಹಳಸಿದೆ.

ರಿಪಬ್ಲಿಕನ್ ನಾಶನಲ್ ಕನ್‌ವೆನ್ಶನ್‌ನಲ್ಲಿ ದುರದೃಷ್ಟವಂತ ಮೆಕೇನ್‌ರನ್ನು ಬೆಂಬಲಿಸಿದ ಕೆಲವೇ ಕೆಲವು ಸೆಲೆಬ್ರಿಟಿಗಳಲ್ಲಿ ತಮ್ಮ ತಂದೆಯು ಸೇರಿದ್ದುದು, ಸ್ಟಾರ್ ನಟಿಗೆ ಮುಜುಗರದ ವಿಷಯವಾಗಿತ್ತು.

ಜೊಲಿ ಮತ್ತು ಅವರ ಜೊತೆಗಾರ ಬ್ರಾಡ್ ಪಿಟ್, ಬರಾಕ್ ಒಬಾಮರ ಬೆಂಬಲಿಗರು. ಪಿಟ್‌ರ ಪ್ರಯತ್ನದಿಂದಾಗಿ ಜೊಲಿ ಮತ್ತು ತಂದೆಯ ನಡುವಿನ ಸಂಬಂಧ ಸುಧಾರಿಸಿದೆ ಎಂಬ ವದಂತಿಗಳಿದ್ದವು.

ವಾಯೈಟ್‌ರ ರಾಜಕೀಯ ನಿಲುವು ಮಗಳೊಂದಿಗಿನ ಮರು ಹೊಂದಾಣಿಕೆಯ ಮೇಲೆ ಪ್ರಭಾವ ಬೀರಿತೆಂದು ಜೊಲಿಯ ಆಪ್ತರು ಚಿಂತಿತರಾಗಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಂಜಾಲೀನಾ ಜೊಲಿ, ಜಾನ್ ವಾಯೈಟ್, ಮಾಕ್ ಕೈನ್, ಬರಾಕ್ ಒಬಾಮ