ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಪೋಕರ್' ಚಟ ಬಿಡಿಸಲು ಜೆನಿಫರ್ ಹರಸಾಹಸ...
ಹಾಲಿವುಡ್
Feedback Print Bookmark and Share
 
ಗಂಡನ ಪೋಕರ್ ಆಟದ 'ಹುಚ್ಚು' ಬಿಡಿಸುವ ತಯಾರಿ ನಡೆಸಿರುವ ಜೆನಿಫರ್ ಗಾರ್ನರ್ ತಮ್ಮ ಪತಿ ಬೆನ್ ಅಫ್ಲೆಕ್‌ರಿಗಾಗಿ ಸೊಗಸಾದ ಸರಪ್ರೈಸ್ ಅನ್ನು ನೀಡುವುದಾಗಿ ಘೋಷಿಸಿದ್ದು, ಇದರಲ್ಲಿ ಪತ್ನಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕು.

ಅಫ್ಲಕ್‌ರಿಗೆ ಪೋಕರ್ ಆಡುವುದೆಂದರೆ ಬಲು ಪ್ರೀತಿ, ಅಲ್ಲದೇ ಪ್ರಮುಖ ಪಂದ್ಯಾವಳಿಯಾದ ಕ್ಯಾಲಿಫೊರ್ನಿಯಾ ಸ್ಟೇಟ್ ಪೋಕರ್ ಚಾಂಪಿಯನ್‌ಶಿಪ್(2004) ಅನ್ನು ಜಯಿಸಿ 356,400 ಡಾಲರ್ ಬಹುಮಾನದ ಮೊತ್ತವನ್ನು ಜೇಬಿಗಿಳಿಸಿದ ಪ್ರಥಮ ಸೆಲಿಬ್ರಿಟಿ ಅಫ್ಲೆಕ್.

ಅಫ್ಲೆಕ್‌ರ ಪೋಕರ್ ಹುಚ್ಚು ಬಿಡಿಸಲು ಪಾಡು ಪಟ್ಟ ಅವರ ಪತ್ನಿ ಈಗ ತಮ್ಮ ಪ್ರಯತ್ನವನ್ನೇ ಕೈ ಬಿಟ್ಟಿದ್ದಾರಂತೆ.

ಬೆನ್ ಪೋಕರ್ ಆಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಬಿಡಬೇಕೆಂದು ಜೆನ್ ಬಯಸಿದ್ದರು, ಆದರೆ ಇದು ಸಾಧ್ಯವಿಲ್ಲದ ಮಾತು ಎಂದು ಅವರಿಗೆ ತಿಳಿದಿತ್ತು. ಆದ್ದರಿಂದ ಅವರು ಮನೆಯೊಳಗೆಯೇ ಒಂದು ಕೊಠಡಿ ನಿರ್ಮಿಸಿ ಅದರಲ್ಲಿ ಬೆನ್ ವಾರಕ್ಕೊಮ್ಮೆ ಹುಡುಗರನ್ನು ಒಟ್ಟುಗೂಡಿಸಿಕೊಂಡು ಪೋಕರ್ ಆಡುವಂತೆ ಮಾಡಲು ಬಯಸಿದ್ದಾರೆ ಎಂದು ಮೂಲವೊಂದು ತಿಳಿಸಿದ್ದಾಗಿ ವರದಿಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜೆನಿಫರ್ ಗಾರ್ನರ್, ಬೆನ್ ಅಫ್ಲೆಕ್, ಪೋಕರ್