ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಎಡ್ವಿನ್ ಎ ಸಾಲ್ಟ್ ಚಿತ್ರದಲ್ಲಿ ಎಂಜಾಲೀನಾ
ಹಾಲಿವುಡ್
Feedback Print Bookmark and Share
 
ಎಡ್ವಿನ್ ಎ ಸಾಲ್ಟ್ ಚಿತ್ರದಲ್ಲಿ ಟಾಮ್ ಕ್ರೂಸಿ ಅವರ ಬದಲಿಗೆ ತಾವು ನಟಿಸುತ್ತಿರುವುದಾಗಿ ಹಾಲಿವುಡ್ ನಟಿ ಎಂಜಾಲೀನಾ ಜೊಲಿ ಸ್ಪಷ್ಟಪಡಿಸಿದ್ದಾರೆ.

ಬಿಬಿಸಿ ಬಾನುಲಿಗೆ ನೀಡಿದ ಸಂದರ್ಶನದಲ್ಲಿ, "ನಾನು ಸಾಲ್ಟ್ ಎಂಬ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಈ ಚಿತ್ರದಲ್ಲಿ ಬೋನ್ ಕಲೆಕ್ಟರ್ ನಿರ್ದೇಶಕ ಪಿಲಿಪ್ ನಾಯೈಸ್ ಅವರೊಂದಿಗೆ ದುಡಿಯಲಿದ್ದೇನೆ" ಎಂದು ಅವರು ಹೇಳಿದ್ದಾರೆ.

ಈ ಮೊದಲು, ಕಳೆದ ವಾರ ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ, ಪೆಬ್ರವರಿಯಲ್ಲಿ ನಟನೆಗೆ ಮರಳುತ್ತೇನೆ ಎಂದು ತಿಳಿಸಿದ್ದ ಎಂಜಲೀನಾ ತದನಂತರ ಒಂದು ವರ್ಷದ ಕಾಲ ಯಾವುದೇ ಚಿತ್ರದಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು.

"ಮನೆಯಲ್ಲೇ ಇರುವುದೆಂದರೆ ನನಗೆ ಬಹಳ ಇಷ್ಟ. ಅಲ್ಲದೆ, ನನಗೆ ಬಹಳಷ್ಟು ಮಕ್ಕಳಿದ್ದಾರೆ, ಅವರೆಲ್ಲಾ ಸರಿಯಾದ ರೀತಿಯಲ್ಲಿ ಬೆಳೆಯುವಂತೆ ನಾನು ನೋಡಿಕೊಳ್ಳಬೇಕಾಗುತ್ತದೆ" ಎಂದು ಆರು ಮಕ್ಕಳ ತಾಯಿ ಜೊಲಿ ಹೇಳಿದ್ದಾರೆ.

ಮುಂಬರುವ ವರ್ಷಗಳಲ್ಲಿ ನಟನೆಯಿಂದ ದೂರಾಗುವ ಇಚ್ಛೆಯನ್ನು ಅವರು ವ್ಯಕ್ತಪಡಿಸಿದರು.

"ನಾನು ಇದೇ ವೇಗವನ್ನು ಉಳಿಸಿಕೊಳ್ಳಬೇಕೆಂದು ಬಯಸುವುದಿಲ್ಲ ಅಥವಾ ನಾನು ಸಲೆಬ್ರಿಟಿಯಾಗಿಯೇ ಉಳಿಯಬೇಕೆಂದು ಬಯಸುವುದಿಲ್ಲವೆಂದು" ಸ್ಟಾರ್ ನಟಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಡ್ವಿನ್ ಎ ಸಾಲ್ಟ್ ಎಂಜಾಲೀನಾ ಜೊಲಿ