ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » 'ಆಸ್ಕರ್' ಗಳಿಸುವ ವಿಶ್ವಾಸ: ರಹಮಾನ್
ಹಾಲಿವುಡ್
Feedback Print Bookmark and Share
 
'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ದೇಶನಕ್ಕಾಗಿ 'ಬ್ರಿಟಿಷ್ ಅಕಾಡಮೆ ಪ್ರಶಸ್ತಿ(ಬಫ್ತಾ)' 'ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ'ಯನ್ನು ಗೆದ್ದುಕೊಂಡ ಎ. ಆರ್. ರಹಮಾನ್ ಪ್ರತಿಷ್ಠೆಯ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲುವ ವಿಶ್ವಾಸವನ್ನಿರಿಸಿಕೊಂಡಿದ್ದಾರೆ. ಬಫ್ತಾ ಪ್ರಶಸ್ತಿ ಲಭಿಸಿದುದಕ್ಕೆ ಸಂತೋಷ ವ್ಯಕ್ತಪಡಿಸಿದ ರಹಮಾನ್ ತನ್ನೊಂದಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಕೇವಲ 80 ವರ್ಷಗಳ ಆಸ್ಕರ್ ಚರಿತ್ರೆಯಲ್ಲಿ ಇಬ್ಬರು ಭಾರತೀಯರು ಆಸ್ಕರ್ ಪ್ರಶಸ್ತಿ ಜಯಿಸುವಲ್ಲಿ ಸಫಲರಾಗಿದ್ದಾರೆ. 1992ರಲ್ಲಿ 'ಲೈಫ್ ಟೈಮ್ ಸಾಧನೆ'ಗಾಗಿ ಸತ್ಯಜೀತ್ ರೇ ಅವರನ್ನು ಆಸ್ಕರ್ ಪ್ರಶಸ್ತಿ ನೀಡಿ ಗೌರವಿಸಿದರೆ 1982ರಲ್ಲಿ 'ಗಾಂಧಿ' ಚಿತ್ರಕ್ಕಾಗಿ ಬಾನು ಅಥಯ್ಯಾ 'ಬೆಸ್ಟ್ ಕೋಸ್ಟೂಮ್ ಡಿಸೈನ್‌'ಗಾಗಿನ ಆಸ್ಕರ್ ಪ್ರಶಸ್ತಿಯನ್ನು ಜಯಿಸಿದ್ದರು.

ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಗಳಿಸುವ ವಿಶ್ವಾಸ ರಹಮಾನ್