ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಆಸ್ಕರ್ ನಿರೀಕ್ಷೆಯಲ್ಲಿ 'ಸ್ಲಮ್‌ಡಾಗ್'
ಹಾಲಿವುಡ್
Feedback Print Bookmark and Share
 
ಪ್ರತಿಷ್ಠಿತ 81ನೇ ಆಸ್ಕರ್ ಪ್ರಶಸ್ತಿ ಸಮಾರಂಭ ಫೆಬ್ರವರಿ 22 ಭಾನುವಾರದಂದು ಘೋಷಿಸಲಾಗುತ್ತಿದ್ದು, ಬ್ರಿಟಿಷ್ ನಿರ್ದೇಶಕ ಡ್ಯಾನಿ ಬೋಯ್ಲೆ ನಿರ್ದೇಶಿತ 'ಸ್ಲಮ್ ಡಾಗ್ ಮಿಲಿಯನೇರ್' ಬಹುನಿರೀಕ್ಷಿತ ಚಿತ್ರವಾಗಿದೆ. ನಾಲ್ಕು ಗೋಲ್ಡನ್ ಗ್ಲೋಬ್ ಪ್ರಶಸ್ತಿ ವಿಜೇತ 'ಸ್ಲಮ್ ಡಾಗ್' ಹತ್ತು ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗೆ ನಾಮ ನಿರ್ದೇಶನವನ್ನು ಪಡೆದಿದೆ. ಕ್ಯಾಲಿಫೋರ್ನಿಯಾದ ಕೊಡಕ್ ಥಿಯಟರ್‌ನಲ್ಲಿ ವರ್ಣರಂಜಿತ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಜರಗಲಿದೆ.

ಸ್ಲಮ್‌ಡಾಗ್ ಮಿಲಿಯನೇರ್ ಅಲ್ಲದೆ ಅತ್ಯುತ್ತಮ ಚಿತ್ರಗಳ ಪ್ರಶಸ್ತಿ ಸಾಲಿನಲ್ಲಿರುವ ಇತರ ಚಿತ್ರಗಳೆಂದರೆ 'ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್', 'ಫ್ರಾಸ್ಟ್/ನಿಕ್ಸನ್', 'ಮಿಲ್ಕ್', 'ದಿ ರೀಡರ್' ಚಿತ್ರಗಳು.

ಭಾರತೀಯರು ಹೆಮ್ಮೆಪಡುವ ರೀತಿಯಲ್ಲಿ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರದ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಆಸ್ಕರ್ ಅಕಾಡೆಮಿ ಪ್ರಶಸ್ತಿಗಾಗಿ ಮ‌ೂರು ನಾಮನಿರ್ದೇಶನಗಳನ್ನು ಗಿಟ್ಟಿಸಿಕೊಂಡಿದ್ದಾರೆ. 'ಜೈ ಹೋ' ಒರಿಜಿನಲ್ ಹಾಡಿಗಾಗಿ ಗುಲ್ಜಾರ್ ಅವರೊಂದಿಗೆ ಮತ್ತು 'ಓ ಸಾಯಾ' ಹಾಡಿಗಾಗಿ ಮಾಯಾ ಅರುಳ್‌ಪ್ರಕಾಶಮ್‌ರೊಂದಿಗೆ ಹಾಗೂ ಉತ್ತಮ ಸಂಗೀತಕ್ಕಾಗಿ ಎ.ಆರ್. ರೆಹಮಾನ್ ಒಟ್ಟು ಮ‌ೂರು ನಾಮನಿರ್ದೇಶನಗಳನ್ನು ಪಡೆದಿದ್ದಾರೆ.

ಉತ್ತಮ ಚಿತ್ರ, ಉತ್ತಮ ನಿರ್ದೇಶಕ (ಡ್ಯಾನಿ ಬೋಯ್ಲೆ), ಉತ್ತಮ ಚಿತ್ರಕಥೆ (ಸೈಮನ್ ಬೇಪಾಯ್), ಉತ್ತಮ ಛಾಯಾಗ್ರಹಣ, ಉತ್ತಮ ಸೌಂಡ್ ಮಿಕ್ಸಿಂಗ್, ಉತ್ತಮ ಸೌಂಡ್ ಎಡಿಟಿಂಗ್ ಹಾಗೂ ಉತ್ತಮ ಸಂಕಲನಕ್ಕಾಗಿ ಕೂಡ 'ಸ್ಲಮ್‌ಡಾಗ್ ಮಿಲಿಯನೇರ್' ಚಿತ್ರ ನಾಮನಿರ್ದೇಶನಗೊಂಡಿದೆ. ಒಟ್ಟಾರೆ ಈ ಚಿತ್ರವು 10 ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ. 'ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್' ಚಿತ್ರ ಆಸ್ಕರ್ ಪ್ರಶಸ್ತಿ ವಿಭಾಗದಲ್ಲಿ ಅತಿ ಹೆಚ್ಚಿನ ಅಂದರೆ 13 ನಾಮನಿರ್ದೇಶನಗಳನ್ನು ಪಡೆದುಕೊಂಡಿದೆ.



ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆಸ್ಕರ್ ಪ್ರಶಸ್ತಿ, ಸ್ಲಮ್ಡಾಗ್, ಎಆರ್ರಹಮಾನ್