ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಮರಣಶಯ್ಯೆಯಲ್ಲಿರುವ ಜೇಡ್ ಮನೆಗೆ
ಹಾಲಿವುಡ್
Feedback Print Bookmark and Share
 
ಕಾನ್ಸರ್ ರೋಗಕ್ಕೆ ತುತ್ತಾಗಿರುವ ಬ್ರಿಟಿಷ್ ರಿಯಾಲಿಟಿ ಶೋ ಟಿ.ವಿ ಸ್ಟಾರ್ ನಟಿ ಜೇಡ್ ಗೂಡಿ ಮರಣ ಶಯ್ಯೆಯಲ್ಲಿದ್ದು, ಕಡೆಯದಿನಗಳನ್ನು ಮಕ್ಕಳು ಹಾಗೂ ಕುಟುಂಬದ ಜತೆ ಕಳೆಯಲು ಇಚ್ಛಿಸಿದ ಅವರನ್ನು ಅಂಬುಲೆನ್ಸ್‌ನ ಮ‌ೂಲಕ ಮನೆಗೆ ಕರೆದೊಯ್ಯಲಾಗಿದೆ. ಎರಡೂ ಕಣ್ಣುಗಳ ದೃಷ್ಟಿಯನ್ನು ಕಳಕೊಂಡ ಗೂಡಿ ತನ್ನ ಐದು ವರ್ಷದ ಮಗ ಬಾಬ್ಬಿ ಮತ್ತು ನಾಲ್ಕು ವರ್ಷದ ಫ್ರೆಡ್ಡಿಯನ್ನು ಮತ್ತೆ ನೋಡಲು ಸಾಧ್ಯವಾಗದಿದ್ದರೂ ಕಡೆದಿನಗಳನ್ನು ಮಕ್ಕಳೊಂದಿಗೆ ಕಳೆಯಲು ಇಷ್ಟಪಟ್ಟಿದ್ದಾರೆ. ಜೇಡ್‌ರನ್ನು ಉಪಚರಿಸಲು ಶುಶ್ರೂಕಿಯನ್ನು ನೇಮಕ ಮಾಡಲಾಗಿದೆ. 27 ವರ್ಷದ ಗೂಡಿ ಗರ್ಭಕೋಶದ ಕಾನ್ಸರ್ ರೋಗಕ್ಕೆ ತುತ್ತಾಗಿದ್ದು ರೋಗ ದೇಹಕ್ಕೆಲ್ಲ ವ್ಯಾಪಿಸಿದ್ದು, ಇನ್ನೂ ಹೆಚ್ಚೆಂದರೆ ಒಂದು ವಾರ ಕಾಲ ಮಾತ್ರ ಬದುಕುಳಿಯಲಿದ್ದಾರೆ ಎಂಬ ಸತ್ಯವನ್ನು ವೈದ್ಯರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮರಣಶಯ್ಯೆಯಲ್ಲಿರುವ ಜೇಡ್ ಮನೆಗೆ