ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಹಾಲಿವುಡ್ » ಬಾಲಿವುಡ್‌ನಲ್ಲಿ ಕೈಲಿ ಮಿನಾಗ್
ಹಾಲಿವುಡ್
Feedback Print Bookmark and Share
 
ಆಸ್ಟ್ರೇಲಿಯಾದ ಗಾಯಕಿ ಕೈಲಿ ಮಿನಾಗ್ ಬಾಲಿವುಡ್‌ ಚಿತ್ರವೊಂದರಲ್ಲಿ ಹಾಡಲಿದ್ದು, ನಿರ್ಮಾಪಕ ಆಂಟನಿ 'ಡಿ'ಸೋಜಾರ ಚಿತ್ರ 'ಬ್ಲೂ' ಚಿತ್ರಕ್ಕಾಗಿ ತನ್ನ ಮಧುರವಾದ ಕಂಠ ಬಿಡಿಸಲಿದ್ದಾರೆ. 'ಬ್ಲೂ' ಚಿತ್ರದ ಹಾಡುಗಾರಿಕೆಗಾಗಿ ಮಿನಾಗ್ ಪಡೆಯುವ ಸಂಪಾದನೆ ಬರೋಬ್ಬರಿ 10 ಲಕ್ಷ ಅಮೆರಿಕನ್ ಡಾಲರ್!. ಬಾಲಿವುಡ್‌ನಲ್ಲಿ ಇದುವರೆಗೆ ಯಾವನೇ ಒಬ್ಬ ವಿದೇಶಿ ಕಲಾವಿದ ಇಷ್ಟು ಹೆಚ್ಚು ಸಂಭಾವನೆ ಪಡೆದಿರಲಿಲ್ಲ. ಆದುದರಿಂದ ಮಿನಾಗ್‌ಗೆ ಲಾಟರಿ ಹೊಡೆದಂತಾಗಿದೆ. ಇಷ್ಟೇ ಅಲ್ಲದೆ ಚಿತ್ರದ ಹಾಡೊಂದರಲ್ಲಿ ಮಿನಾಗ್ ಬಾಲಿವುಡ್ ನಟ ಅಕ್ಷಯ್ ಕುಮಾರ್‌ರೊಂದಿಗೆ ಕಾಣಿಸಕೊಳ್ಳಲಿದ್ದಾರೆ. ಇದೀಗಲೇ ಹಾಡಿನ ರಿರ್ಕಾಂಡಿಗ್ ಲಂಡನ್‌ನಲ್ಲಿ ಪೂರ್ತಿಗೊಂಡಿದ್ದು, ಚಿತ್ರೀಕರಣವು ಭಾರತದಲ್ಲಿ ನಡೆದಿದೆ. 'ಬ್ಲೂ' ಅಕ್ಷಯ್ ಜತೆ ಬಾಲಿವುಡ್ ಸ್ಟಾರ್‌ಗಳಾದ ಸಂಜಯ್ ದತ್, ಜಾವೇದ್ ಖಾನ್ ಹಾಗೂ ನಟಿ ಲಾರಾ ದತ್ತ ಕೂಡಾ ಕಾಣಿಸಿಕೊಳ್ಳಲಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಲಿವುಡ್ನಲ್ಲಿ ಕೈಲಿ ಮಿನಾಗ್