ಸುಭಾಶ್ ಘಾಯ್ ಅವರ ಯುವರಾಜ್ ಚಿತ್ರದ ಸೆಟ್ನಲ್ಲಿ ಬಾಲಿವುಡ್ ಜೋಡಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೊತೆಯಾಗಿ ಸಂದರ್ಶನ ನೀಡಿದರು.
ನೀವು ಪ್ರಥಮ ಬಾರಿಗೆ ಪ್ರಣಯಿಗಳಾಗಿ ನಟಿಸಿರುವ ಯುವರಾಜ್ ಚಿತ್ರದ ಬಗ್ಗೆ ಕಾತುರಗೊಂಡಿದ್ದೀರಾ ? ಸಲ್ಮಾನ್:ಖಂಡಿತಾ ಇಲ್ಲ. ಅವರು ನನ್ನ ಉತ್ತಮ ಗೆಳತಿ ಮತ್ತುಈ ಚಿತ್ರದಲ್ಲಿ ನನ್ನ ಸಹನಟಿ. ನಮ್ಮ ಸೂಕ್ಷ್ಮವಾಗಿ ಗಮನಿಸಲಾಗುತ್ತದೆ ಎಂಬುದು ತಿಳಿದಿದೆ, ಆದರೆ ಈ ಬಗ್ಗೆ ನನಗೇನು ಚಿಂತೆಯಿಲ್ಲ. ಕತ್ರಿನಾ:ನಾನು ಮತ್ತು ಸಲ್ಮಾನ್ ಈ ಮೊದಲು ಸಹ ಹಿಟ್ ಚಿತ್ರಗಳನ್ನು ನೀಡಿದ್ದೇವೆ ಮತ್ತು ಪ್ರೇಕ್ಷಕರು ನಮ್ಮನ್ನು ಮೆಚ್ಚಿದ್ದಾರೆ. ಆದರೆ ಈ ಚಿತ್ರದಲ್ಲಿ ನಾವಿಬ್ಬರು ಪ್ರೇಮಿಗಳಾಗಿ ನಟಿಸುತ್ತಿದ್ದೇವೆ, ಯಾಕೆಂದು ತಿಳಿದಿಲ್ಲ, ಆದರೆ ನಾನು ನರ್ವಸ್ ಆಗಿದ್ದೇನೆ.
ಸಲ್ಮಾನ್ ಒಬ್ಬ ರೊಮ್ಯಾಂಟಿಕ್ ಬಾಯ್ಫ್ರೆಂಡ್ ಆಗಿದ್ದಾರೆಯೇ ? ಕತ್ರಿನಾ:ಇಲ್ಲ, ಇಲ್ಲ! ಅವರು ಸಲ್ಪಾನೂ ರೊಮ್ಯಾಂಟಿಕ್ ಅಲ್ಲ. ಅವರು ಇದನ್ನೆಲ್ಲಾ ತೆರೆಗಷ್ಟೇ ಸಿಮೀತಗೊಳಿಸಿದ್ದಾರೆ. ನಾನು ರಜೆಯಲ್ಲಿ ಹೊರಗೆ ಹೋಗಲು ಇಷ್ಟಪಡುತ್ತೇನೆ, ಆದರೆ ಅವರು ಇಬ್ಬರೇ ಏಕಾಂತದಲ್ಲಿರುವುದು ತುಂಬಾ ಬೇಸರ ತರಿಸುತ್ತದೆ ಎನ್ನುತ್ತಾರೆ. ಅವರು ಕ್ಯಾಂಡಲ್ ಲೈಟ್ ಡಿನ್ನರ್ಗಳನ್ನು ಇಷ್ಟಪಡುವುದಿಲ್ಲ. ನನಗನಿಸುವಂತೆ ಅವರಿಗೆ ಯಾವಾಗಲೂ ಜನರ ನಡುವೆಯೇ ಇರಲು ಇಷ್ಟ. ಅವರು ತುಂಬಾ ಅನ್ ರೊಮ್ಯಾಂಟಿಕ್!.
ಕತ್ರಿನಾ, ಹಾಟ್ ಅಥವಾ ಕ್ಯೂಟ್ ? ಸಲ್ಮಾನ್: ನೈಸ್...
ನೀವು ಕತ್ರಿನಾರಿಗೆ ನಟನೆಯ ಟಿಪ್ಸ್ಗಳನ್ನು ನೀಡುತ್ತೀರಾ? ಸಲ್ಮಾನ್:ಅದು ನನ್ನ ಕೆಲಸವಲ್ಲ. ನಿರ್ದೇಶಕರು ಆ ಕೆಲಸ ಮಾಡುತ್ತಾರೆ.
ಸಹನಟಿಯಾಗಿ ಅವರ ಬಗ್ಗೆ ಏನನಿಸುತ್ತದೆ ? ಸಲ್ಮಾನ್:ನೀವು 'ಪರಿಶ್ರಮಕ್ಕೆ ತಕ್ಕ ಫಲ' ಎಂಬುದಕ್ಕೆ ಅವರು ಅದ್ಭುತ ಉದಾಹರಣೆ. ಅವರು ಬಹಳ ಪರಿಶ್ರಮ ಪಡುತ್ತಾರೆ.
ಒಬ್ಬ ವ್ಯಕ್ತಿಯಾಗಿ ಸಲ್ಮಾನ್ ಬಗ್ಗೆ ಏನನಿಸುತ್ತದೆ ? ಕತ್ರಿನಾ:ನಾಳೆಯ ಮಡಿಲಲ್ಲಿ ನಮ್ಮಿಬ್ಬರ ಪಾಲಿಗೆ ಏನಿದೆ ಎಂಬುದು ನನಗೆ ತಿಳಿದಿಲ್ಲ, ಆದರೆ ಯಾವಾಗಲೂ ಸಲ್ಮಾನ್ ನನ್ನ ಪಾಲಿಗಿರುತ್ತಾರೆ ಎಂಬುದು ನನಗೆ ಖಂಡಿತವಾಗಿಯೂ ತಿಳಿದಿದೆ. ಅವರು ತುಂಬಾ ವಿಶ್ವಾಸಾರ್ಹರು.
ನಿಮ್ಮಿಬ್ಬರ ಪಾಲಿಗೆ ಅತ್ಯುತ್ತಮ ಸಹನಟರು ಯಾರು? ಸಲ್ಮಾನ್:ಪ್ರೀತಿ ಜಿಂಟಾ. ಅವರ ಚೈತನ್ಯದ ಮಟ್ಟವನ್ನು ನಾನು ಇಷ್ಟ ಪಡುತ್ತೇನೆ. ನಾವು ಸ್ನೇಹಿತರು ಮತ್ತು ನಮ್ಮಲ್ಲಿರುವ ಗಾಢಸ್ನೇಹ ತೆರೆಯ ಮೇಲೆಯೂ ಬಿಂಬಿಸಲ್ಪಡುತ್ತದೆ. ಕತ್ರಿನಾ:(ನಗುತ್ತಾರೆ) ಸಲ್ಮಾನ್ ನನ್ನನ್ನು ಬಿಟ್ಟು ಹಾಕಿದರು. ಅದೇನೇ ಇದ್ದರೂ, ವೃತ್ತಿನಿರತೆಯ ವಿಷಯಕ್ಕೆ ಸಂಬಂಧಿಸಿದಂತೆ, ಅಕ್ಷಯ್ ಉತ್ತಮ ಸಹನಟ. ಅವರ ಜೊತೆ ದುಡಿಯುವುದು ಬಹಳ ಸುಲಭ, ಅವರು ಯಾವಾಗಲೂ ತಮಾಷೆಯಾಗಿರುತ್ತಾರೆ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಕತ್ರಿನಾರಿಗೆ ಸಲ್ಮಾನ್ರಲ್ಲಿ ತಮ್ಮ ಕನಸಿನರಸ ಕಾಣಿಸಿದ್ದಾರೆಯೇ ? ಕತ್ರಿನಾ:ನಾನು ಇದನ್ನೆಲ್ಲಾ ನಂಬುವುದಿಲ್ಲ. ನನ್ನ 24ನೇ ವಯಸ್ಸಿನಲ್ಲಿ, ಎಲ್ಲಾ ಜನರಲ್ಲಿಯೂ ನ್ಯೂನತೆಗಳಿರುತ್ತವೆ ಎಂಬುದನ್ನು ಒಪ್ಪಿಕೊಳ್ಳಲು ಆರಂಭಿಸಿದ್ದೇನೆ. ಯಾರು ಪರಿಪೂರ್ಣರಾಗಿರುವುದು ಸಾಧ್ಯವಿಲ್ಲ. ಆದರೆ ನಾನು ಸಂಬಂಧಗಳ ಮೇಲೆ ನಂಬಿಕೆಯಿರಿಸಿದ್ದೇನೆ ಮತ್ತು ಗೌರವಿಸುತ್ತೇನೆ. ನನ್ನವನು ನಾನು ನಗುವಂತೆ ಮಾಡಲು ಸಮರ್ಥನಾಗಿರಬೇಕು ಮತ್ತು ವಿಶ್ವಾಸ ಎಂಬುದು ಮುಖ್ಯವಾದ ಅಂಶ. ನಾನು ನಂಬಿಕೆಯನ್ನು ಕೊನೆಯಲ್ಲಿಟ್ಟಿದ್ದೇನೆ ಏಕೆಂದರೆ ಇಂದಿನ ದಿನಗಳಲ್ಲಿ ಯಾರೂ ನಂಬಿಕೆಯ ಮೇಲೆ ಪೂರ್ಣವಾಗಿ ಅಧರಿತವಾಗುವಂತಿಲ್ಲ.
ಸಲ್ಮಾನ್ರ ಪಾಲಿಗೆ ಅತೀ ಸುಂದರ ಮಹಿಳೆ ಯಾರು ? ಸಲ್ಮಾನ್:ನಾನು ಬೇರೆ ಬೇರೆ ಸಂದರ್ಭಗಳಲ್ಲಿ ವಿವಿಧ ಸುಂದರಿಯರನ್ನು ಭೇಟಿಯಾಗಿದ್ದೇನೆ. ನಾನು ಹೊರಗೆ ಸುತ್ತಾಡುತ್ತಿದ್ದ ಅಥವಾ ಈಗ ಸುತ್ತಾಡುತ್ತಿರುವ ಹುಡುಗಿಯೇ ಅಂತ್ಯಂತ ಸುಂದರಿ.
ಕತ್ರಿನಾರಿಗೆ ಸುಂದಾರಾಂಗ ಪುರುಷ? ಕತ್ರಿನಾ:ಈ ಮೊದಲು ನಾನು ಮಾಡೆಲ್ಗಳು ಅತ್ಯಂತ ಸುಂದರವಾಗಿರುತ್ತಾರೆ ಎಂದು ಯೋಚಿಸುತ್ತಿದ್ದೆ. ಆದರೆ ಇಂದು ನಾನು ಸಂಪೂರ್ಣ ವ್ಯಕ್ತಿತ್ವಕ್ಕೆ ಬೆಲೆ ಕೊಡುತ್ತೇನೆ. ಸಲ್ಮಾನ್ ಮತ್ತು ನಾನು ಭೇಟಿಯಾದಾಗ ನಮ್ಮಿಬ್ಬರ ನಡುವೆ ತಕ್ಷಣದ ಸಂಬಂಧ ಉಂಟಾಗಿತ್ತು ಎಂಬುದನ್ನು ನಾನು ನಿರಾಕರಿಸುವುದಿಲ್ಲ. ನನಗೆ ಅವರು ಆಕರ್ಷಕ ವ್ಯಕ್ತಿತ್ವ ಹೊಂದಿದ್ದಾರೆ ಅನಿಸಿತ್ತು.
ಸಲ್ಮಾನ್ರ ಜೀವನಕ್ರಮ ಮತ್ತು ಅವರಿಗಿರುವ ಹವ್ಯಾಸಗಳಿಂದ ಸಲ್ಮಾನ್ರಿಗೆ ತಾವೊಬ್ಬ ರಾಜಕುಮಾರ(ಫ್ರಿನ್ಸ್) ಎಂದೆನಿಸುತ್ತದೆಯೇ ? ಸಲ್ಮಾನ್:ಹೌದು, ನಾನು ರಾಜಕುಮಾರನಂತೆ ಎಂದು ನನಗನಿಸುತ್ತದೆ, ಆದರೆ ನಾನು ಕೆಟ್ಟಹೋದ ರಾಜಕುಮಾರನಲ್ಲ.