ಕುಟುಂಬ ಹಿನ್ನಲೆ ಬಗ್ಗೆ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿ ಸಾಕಾಗಿ ಹೋದ ಬಾಲಿವುಡ್ ನಟಿ ಪ್ರೀತಿ ಜಿಂಟಾ ಕೊನೆಗೂ ತನ್ನ ಕುಟುಂಬದ ಹಿನ್ನಲೆಯನ್ನು ಬಹಿರಂಗ ಪಡಿಸಿದ್ದಾಳೆ. ಇದರ ಕುರಿತಂತೆ ಪ್ರೀತಿ ಮಾತುಗಳು ಈ ರೀತಿಯಿತ್ತು.
"ಕೆಲವು ಜನರು ವಿಚಾರ ನಾನು ದಕ್ಷಿಣ ಭಾರತೀಯ ಮೂಲದವಳು, ಇನ್ನೂ ಕೆಲವರು ಮುಸ್ಲಿಮ್ ಮೂಲದವಳೆಂದು ತಿಳಿದುಕೊಂಡಿದ್ದಾರೆ. ಕೆಲವು ಅಭಿಮಾನಿಗಳು ನೀವು ಹಿಮಾಚಲ ಪ್ರದೇಶದವರಲ್ಲವೇ ಎಂದೂ ಕೇಳಿದ್ದಾರೆ" ಎಂದ ಜಿಂಟಾ, "18ನೇ ಶತಮಾನದಲ್ಲಿ ರಜಪೂತರು ಹಾಗೂ ಬ್ರಿಟೀಷರ ನಡುವೆ ಮದುವೆ ಸಾಮಾನ್ಯವಾಗಿತ್ತು. ನಾನು ಬ್ರಿಟನ್ ಮತ್ತು ರಜಪೂತ ಕುಟುಂಬ ಅಪರೂಪದ ಹುಡುಗಿ" ಎಂದು ತಿಳಿಸಿದ್ದಾಳೆ.
ಇದೀಗ ಪ್ರೀತಿ ಜಿಂಟಾ 'ದಿಲ್ ಚಾಹ್‌ತಾ ಹೈ' ನಾಯಕ ಅಮೀರ್ ಖಾನ್ ಜತೆಗಿನ ಯಶ್ ಚೋಪ್ರಾ ಚಿತ್ರವೊಂದಕ್ಕೆ ಸಹಿ ಹಾಕಿದ್ದಾಳೆ.