ಎಂಟು ವರ್ಷಗಳ ಸಿನೆಮಾ ಜೀವನದ ಯಶಸ್ಸಿನ ನಂತರ ಅಭಿಷೇಕ್ ಬಚ್ಚನ್ ಫೆಬ್ರವರಿ 5ರಂದು 33ನೇ ವಯಸ್ಸಿಗೆ ಕಾಲಿರಿಸಿದರು. ಅಭಿಷೇಕ್ ಹೇಳುವ ಪ್ರಕಾರ ಅಭಿನಯದ ವಿಚಾರದಲ್ಲಿ ತಂದೆ ಅಮಿತಾಬ್‌ಕ್ಕಿಂತಲೂ ತಾಯಿ ಜಯ ಬಚ್ಚನ್‌ರನ್ನು ಹೆಚ್ಚು ಹೋಲುತ್ತಿದ್ದೇನೆ.
ವಿಶ್ವದಲ್ಲಿಯೇ ನಟನೆ ಇಷ್ಟಪಡುವ ಎಲ್ಲರಿಗೂ ತಂದೆ ಪ್ರೇರಣೆಯಾಗಿದ್ದು, ಅವರ ನಡತೆ, ಸಮರ್ಪಣಾಭಾವ ಹಾದೂ ಕಠಿಣ ಪ್ರಯತ್ನಕ್ಕೆ ಸಾಟಿಯೇ ಇಲ್ಲ. ಆದರೆ ನನ್ನ ಅಭಿನಯ ತಂದೆಗಿಂತ ತಾಯಿಯನ್ನೇ ಹೆಚ್ಚು ಹೋಲುತ್ತದೆ ಎಂದು ಅಭಿಷೇಕ್ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತು ಹೇಳಿದ ಅಭಿಷೇಕ್ ತಂದೆ ತಾಯಿ ಇಬ್ಬರ ನಟನಾ ಕೌಶಲ್ಯ ನನ್ನಲ್ಲಿ ಬೆಳೆಸಬೇಕು ಎಂದಿದ್ದಾರೆ.
ತನ್ನ ಮುಂದಿನ ಚಿತ್ರ 'ದಿಲ್ಲಿ 6' ಕುರಿತು ಮಾತಾನಾಡಿದ ಅಭಿಷೇಕ್, ಈ ಚಿತ್ರದಲ್ಲಿ ಬಾಲಿವುಡ್‌ನ ಹಲವು ಪ್ರಮುಖ ನಟರೊಂದಿಗೆ ಅಭಿನಯಿಸಲು ಅವಕಾಶ ದೊರಕಿದ್ದು, ಇದೊಂದು ಶ್ರೇಷ್ಠವಾದ ಅನುಭವ ಎಂದಿದ್ದಾರೆ. ರಾಕ್ಯೇಶ್ ಓಂಪ್ರಕಾಶ್ ಮೆಹ್ರಾರ ನಿರ್ದೇಶನದ 'ದಿಲ್ಲಿ6'ರಲ್ಲಿ ಅಭಿಷೇಕ್‌ರೊಂದಿಗೆ ಸೋನಮ್ ಕಪೂರ್, ವಾಹಿದಾ ರಹಮಾನ್, ಅತುಲ್ ಕುಲಕರ್ಣಿ, ರಿಷಿ ಕಪೂರ್ ಹಾಗೂ ಓಂಪುರಿ ಪ್ರಮುಖ ಪಾತ್ರದಲ್ಲಿದ್ದಾರೆ.
ಕಳೆದ ವರ್ಷ ತೆರೆಕಂಡ ಚಿತ್ರ 'ದೋಸ್ತನಾ' ಮತ್ತು 'ಸರ್ಕಾರ್ ರಾಜ್' ಹಿಟ್ ಆದರೆ 'ದ್ರೋಣ್' ನೆಳಕಚ್ಚಿತ್ತು. ಆದರೆ ಈ ಮೂರು ಚಿತ್ರಗಳ ಅನುಭವವು ಶ್ರೇಷ್ಠವಾದುದು ಎಂದು ಅಭಿಷೇಕ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಸಾಲಿನ ಸಿನೆಮಾ ಜೀವನದಲ್ಲಿ ಹಲವು ಏರಿಳಿತವನ್ನು ಕಂಡಿದ್ದೇನೆ ಆದರೆ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಲು ನಾನು ಆಯ್ಕೆಯಾದುದಕ್ಕೆ ದೇವರಲ್ಲಿ ಧನ್ಯವಾದ ಸಲ್ಲಿಸುತ್ತೇನೆ. ಯಾಕೆಂದರೆ ಒಳ್ಳೆಯ ಸಿನೆಮಾ ಯಶಸ್ಸು ಕಾಣುವುದೇ ಹೊರತು ಕೆಟ್ಟದಲ್ಲ ಎಂದು ಅಭಿಷೇಕ್ ಅಭಿಪ್ರಾಯಪಟ್ಟಿದ್ದಾರೆ.