ಅಭಿನಯ ಜೀವನದಿಂದ ನಿರ್ಮಾಪಕ ವೃತ್ತಿಗೆ ಸೇರಿದ ಬಾಲಿವುಡ್ ನಟ ಸಂಜಯ್ ಕಪೂರ್ ನಿರ್ಮಿಸಲಿರುವ ನೂತನ ಚಿತ್ರ 'ಇಟ್ಸ್ ಮೈ ಲೈಫ್'. ಪ್ರಸ್ತುತ ಚಿತ್ರಕ್ಕಾಗಿ ನಟ ಹರ್ಮಾನ್ ಬೇವಾಜಾ ಅವರನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಅಭಿಪ್ರಾಯಪಟ್ಟ ಸಂಜಯ್ ಚಿತ್ರದ ನಾಯಕನ ಪಾತ್ರವು ಹದಿಹರೆಯದವ ಯುವಕನಾದ್ದಗಿದೆ. ಆದುದರಿಂದ ಅಮೀರ್ ಖಾನ್ಗಿಂತ ಹೆಚ್ಚು ಯೋಗ್ಯ ಹರ್ಮಾನ್ ಆಗಿದ್ದಾನೆ ಎಂದಿದ್ದಾನೆ.
ಸಂಜಯ್ ಹೇಳುವ ಪ್ರಕಾರ ಯಾವುದೇ ಒಂದು ಚಿತ್ರದಲ್ಲಿ ಜನರು ಏನ್ನನ್ನು ನೋಡಲು ಬಯಸುತ್ತಾರೆಯೋ ಅದನ್ನು ನೀಡಲು ಚಿತ್ರ ನಿರ್ಮಾಪಕರು ಗಮನ ಹರಿಸಬೇಕಾಗುತ್ತದೆ. ಅದೇ ರೀತಿ ನನ್ನ ಹೊಸ ಚಿತ್ರ 'ಇಟ್ಸ್ ಮೈ ಲೈಫ್'ನಲ್ಲಿ ಪ್ರಮುಖ ಪಾತ್ರ ಒಬ್ಬ ಹದಿಹರೆಯ ಯುವಕನಾಗಿದ್ದಾನೆ. ಈ ಕಾರಣಕ್ಕಾಗಿ ಅಮೀರ್ಗಿಂತ ಹೆಚ್ಚು ಯೋಗ್ಯ ಹರ್ಮಾನ್ ಎಂದಿದ್ದಾನೆ.
'ಇಟ್ಸ್ ಮೈ ಲೈಫ್' ತೆಲುಗಿನಲ್ಲಿ ಸಿದ್ಧಾರ್ಥ್ ಹಾಗೂ ಜೆನಿಲಿಯಾ ಅಭಿನಯಿಸಿದ 'ಬೊಮ್ಮರಿಲ್ಲು' ಚಿತ್ರದ ರಿಮೇಕ್ ಆಗಿದೆ.
ಹರ್ಮಾನ್ ಇತ್ತೀಚೆಗೆ ಅಭಿನಯಿಸಿದ 'ವಿಕ್ಟರಿ' ಮತ್ತು 'ಲವ್ ಸ್ಟೋರಿ-2050' ಚಿತ್ರಗಳು ಫ್ಲಾಪ್ ಆಗಿದ್ದು, ಆದರೂ ನಿರ್ಮಾಪಕ ಸಂಜಯ್ ಕಪೂರ್ಗೆ ಈ ಯುವ ನಾಯಕ ಮೇಲೆ ಅಪಾರ ವಿಶ್ವಾಸವಿರಿಸಿಕೊಂಡಿದ್ದಾನೆ. ವಿಶೇಷ ಎಂದರೆ ಈ ಎರಡು ಚಿತ್ರಗಳು ತೆರೆಕಾಣುವ ಮೊದಲೇ ಪ್ರಸ್ತುತ ಚಿತ್ರಕ್ಕಾಗಿ ಹರ್ಮಾನೊಂದಿಗೆ ಹಸ್ತಾಕ್ಷರ ಮಾಡಲಾಗಿತ್ತು.