ಬಹಳ ವರ್ಷಗಳ ನಂತರ ಸಲ್ಮಾನ್ ಖಾನ್ ಕೊನೆಗೂ ಮೌನ ಮುರಿದಿದ್ದಾನೆ. ತನ್ನ ಹಳೆಯ ಕನಸಿನ ಪ್ರೇಮಸೌಧದ ರಾಣಿಯಾಗಿ ಮೆರೆದಿದ್ದ ಬಚ್ಚನ್ ಸೊಸೆ ಐಶ್ವರ್ಯಾ ರೈ ಬಗ್ಗೆ ತುಟಿ ಬಿಚ್ಚಿದ್ದಾನೆ. ಆ ಮೂಲಕ ಭಾವುಕನಾಗಿ, ಐಶ್‌ಳನ್ನು ನಾನು ನಿಜಕ್ಕೂ ತುಂಬ ಪ್ರೀತಿಸುತ್ತಿದ್ದೆ. ಆಕೆಗೆ ನಾನು ಹೊಡೆದೇ ಇಲ್ಲ ಎಂದು ಹೇಳಿದ್ದಾನೆ.
ಹೌದು. ಸಲ್ಮಾನ್ ಖಾನ್‌ಗೆ ಸಂದರ್ಶನಗಳಲ್ಲಿ ಗಂಭೀರವಾಗಿ ಮಾತನಾಡುವ ಜಾಯಮಾನವೇ ಇಲ್ಲ. ಸಂದರ್ಶನಕಾರರ ಪ್ರಶ್ನೆಗಳಿಗೆಲ್ಲ ಉಡಾಫೆಯ ಉತ್ತರ ನೀಡಿ ನುಣುಚಿಕೊಳ್ಳುವ ಅಭ್ಯಾಸ ಆತನಿಗೆ ಕರಗತವಾಗಿದೆ. ಆದರೆ ಮೊನ್ನೆ ಮೊನ್ನೆ ಸಂದರ್ಶನವೊಂದರಲ್ಲಿ ಗಂಭೀರವಾಗಿ ಮಾತಾಡಿದ್ದಾನೆ. ತನ್ನ ಬ್ಯಾಡ್ ಬಾಯ್ ಇಮೇಜಿಗೆ ಕಾರಣವೇ ನನಗೆ ಹೊಳೆಯುತ್ತಿಲ್ಲ. ಹೋಗಲಿ ಬಿಡಿ ಎಂದು ಮಾತಾಡಿದ್ದಾನೆ. ಮಾತಿನಲ್ಲಿ ವಿಷಾದವೂ ಬೆರೆತಿದ್ದುದು ವಿಶೇಷ.
ಜೋಧಪುರದಲ್ಲಿ ಜಿಂಕೆಮರಿಯನ್ನು ಬೇಟೆಯಾಡಿದ ಕೇಸು ಇನ್ನೂ ಬಗೆಹರಿದಿಲ್ಲ. ನಿಜವಾಗಿಯೂ ಜಿಂಕೆ ಮರಿ ವೃತ್ತಾಂತವೇನು? ಒಂದು ದಿನ ಶೂಟಿಂಗ್ ಮುಗಿಸಿ ನಾನು ಮರಳಿ ಬರುತ್ತಿದ್ದೆ. ನನ್ನ ಜತೆಯಲ್ಲಿ ಸೈಫ್ ಆಲಿ ಖಾನ್, ಟಬು, ಸೋನಾಲಿ ಬೇಂದ್ರೆ ಇದ್ದರು. ಕಾಡಿನ ಮಧ್ಯದಲ್ಲಿ ವಾಹನ ಚಲಾಯಿಸಿಕೊಂಡು ನಾವು ಬರುತ್ತಿದ್ದಾಗ ಹಾದಿಯಲ್ಲಿ ಒಂದು ಪುಟ್ಟ ಪೊದೆಯಲ್ಲಿ ಜಿಂಕೆಯ ಮರಿ ನಮಗೆ ಕಾಣಿಸಿತು. ಅದು ಪೊದೆಯಲ್ಲಿ ಸಿಕ್ಕಿಹಾಕಿಕೊಂಡಿತ್ತು. ಅದನ್ನು ಕಂಡು ನಾವು ಕಾರು ನಿಲ್ಲಿಸಿದೆವು. ಪೊದೆಯಿಂದ ಅದನ್ನು ಹೊರತೆಗೆದೆವು.
IFM
ಆ ಜಿಂಕೆ ಮರಿ ನಮ್ಮನ್ನು ನೋಡಿ ಹೆದರಿ ನಡುಗುತ್ತಿತ್ತು. ನಮ್ಮನ್ನು ನೋಡಿ ಪೂರ್ತಿ ಹೆದರಿಬಿಟ್ಟಿದ್ದ ಅದಕ್ಕೆ ನಾವು ನೀರು ಕುಡಿಸಿದೆವು. ಬಿಸ್ಕೆಟ್ ಕೊಟ್ಟೆವು. ನಾವು ಕೊಟ್ಟ ಬಿಸ್ಕೆಟ್ ತಿಂದ ಅದು ಸ್ವಲ್ಪ ಹೊತ್ತಿನ ಬಳಿಕ ಸಾವರಿಸಿಕೊಂಡಿತು. ನಮ್ಮ ಜತೆ ಸ್ವಲ್ಪ ಹೊತ್ತಿದ್ದ ಅದು ನಂತರ ಹೊರಟುಹೋಯಿತು. ನಾವು ನಮ್ಮ ದಾರಿ ಹಿಡಿದೆವು. ಆದುದು ಇಷ್ಟೆ. ಜಿಂಕೆಮರಿಯ ವಿಷಯದಲ್ಲಿ ನನ್ನ ಜೀವನದಲ್ಲಿ ನಡೆದುದು ಇಷ್ಟೇ. ಬಹುಷಃ ಇದೇ ಮುಂದೆ ನಾನು ಜಿಂಕೆ ಮರಿಯ್ನು ಬೇಟೆಯಾಡಿದೆ ಎಂದು ಕೇಸು ದಾಖಲಾಗಿದದ್ದಿರಬಹುದು ಎಂದು ನಾನು ಅಂದುಕೊಂಡಿದ್ದೇನೆ.
ನೀವೊಬ್ಬ ಬ್ಯಾಡ್ ಬಾಯ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದೀರಿ. ಕೆಲವು ವರ್ಷಗಳ ಹಿಂದೆ ನಿಮ್ಮ ನಡತೆಯೇ ಮ್ಯಾಗಝಿನ್‌ಗಳ ಮುಖಪುಟಗಳ ಸುದ್ದಿಯಾಯಿತು. ನಿಮ್ಮ- ಐಶ್ ನಡುವಿನ ಸಂಬಂಧದಲ್ಲೂ ಆಕೆಯನ್ನು ನೀವು ಪೀಡಿಸಿದ್ರಿ ಎಂದು ಸುದ್ದಿಯಾಯ್ತು. ಆ ಮೂಲಕ ನೀವು ಸಂಪೂರ್ಣ ಕೆಟ್ಟವನಾಗಿ ಹೆಸರು ಪಡೆದ್ರಿ. ನೀವು ನಿಜಕ್ಕೂ ನಿಮ್ಮ ಜೀವಮಾನದಲ್ಲಿ ಮಹಿಳೆಯರಿಗೆ ಹೊಡೆದಿದ್ದೀರಾ? ನಿಜವಾಗಿಯೂ ಹೇಳಬೇಕೆಂದರೆ, ನನಗೆ ತುಂಬ ಬೇಗ ಸಿಟ್ಟು ಬರುತ್ತದೆ. ಜಗಳವಾದರೆ ನನ್ನ ಸಿಟ್ಟು ತಾರಕಕ್ಕೇರುತ್ತದೆ. ಎದುರಾಳಿಗೆ ಚೆನ್ನಾಗಿ ಹೊಡೆಯುತ್ತೇನೆ. ಅದೂ ಭರ್ಜರಿಯಾಗಿ. ನಾನು ಹಾಗೆ ಹೊಡೆದ್ರೆ ಮುಂದಿರುವ ಎದುರಾಳಿ ಖಂಡಿತ ಮೇಲೇಳುವುದಿಲ್ಲ. ನಾನು ಐಶ್ವರ್ಯಾ ರೈಗೆ ಎಂದೂ ಹೊಡೆದಿಲ್ಲ. ಹೊಡೆದಿದ್ದರೂ ಖಂಡಿತ ಆಕೆ ಈಗ ಮೇಲೇಳಲು ಸಾಧ್ಯವಾಗುತ್ತಿರಲಿಲ್ಲ. ಐಶ್ ಏಕೆ, ನನ್ನ ಜೀವಮಾನದಲ್ಲಿ ಎಂದಿಗೂ ನಾನು ಯಾವ ಮಹಿಳೆಯ ಮೇಲೂ ಕೈಮಾಡಿಲ್ಲ. ಹೊಡೆದಿಲ್ಲ. ಇದ್ಯಾಕೆ ಹೀಗೆ ಸುದ್ದಿಯಾಯ್ತೋ ಗೊತ್ತಿಲ್ಲ. ಇರಲಿ ಬಿಡಿ. (ಇತ್ತೀಚೆಗೆ ಎರಡು ಬಾರಿ ಸಾರ್ವಜನಿಕವಾಗಿ ಸಲ್ಮಾನ್ ತನ್ನ ಹಾಲಿ ಗೆಳತಿ ಕತ್ರಿನಾ ಕೈಫ್ ಕೆನ್ನೆಗೂ ಬಾರಿಸಿದ್ದು ಸುದ್ದಿಯಾಗಿತ್ತು!)
IFM
ನೀವು ಮದುವೆಯಾಗದಿದ್ದರಿಂದ ಇನ್ನೂ ಯುವನಟರ ಜತೆಯಲ್ಲಿ 'ಮೋಸ್ಟ್ ವಾಂಟೆಂಡ್ ಹ್ಯಾಂಡ್‌ಸಂ ನಟ'ರ ಪಟ್ಟಿಯಲ್ಲಿದ್ದೀರಿ. ಮದ್ವೆಯಾದ್ರೆ ರಾಜಸ್ತಾನದ ಅರಮನೆಯಲ್ಲೇ ಆಗಬೇಕೆಂಬ ನಿಮ್ಮ ಕನಸಿಗೇನಾಯ್ತು? ಮದುವೆ ಯಾವಾಗ? ಮದುವೆ ಎಂಬುದು ಒಂದು ಸಂಸ್ಥೆ. ಕೆಲವರಿಗೆ ಈ ಸಂಸ್ಥೆ ಹಿಡಿಸುತ್ತೆ. ಕೆಲವರಿಗೆ ಹಿಡಿಸಲ್ಲ. ಅದು ಅವರವರಿಗೆ ಬಿಟ್ಟ ವಿಚಾರ. ನನ್ನ ಅಪ್ಪನ ಪಾಲಿಗೆ ಮದುವೆಯೆಂಬ ಸಂಸ್ಥೆ ಹಿಡಿಸಿತು. ನನ್ನ ಸಹೋದರರಿಗೂ ಹಿಡಿಸಿದೆ. ನನಗೂ ಮುಂದೆ ಹಿಡಿಸಲಿದೆ ಅಂತ ಅನಿಸುತ್ತೆ. ನಿಮಗೊಂದು ವಿಷಯ ಗೊತ್ತಾ? ಸಣ್ಣ ವಯಸ್ಸಿನಲ್ಲಿ ನಾವು ಪ್ರೀತಿಸುವಾಗ ನಮ್ಮ ಹುಡುಗಿಯನ್ನು ಹುಡುಗಿಯಾಗಿ ಪ್ರೀತಿಸುತ್ತೇವೆ. ಆಗಿರುವ ಎಕ್ಸೈಟ್‌ಮೆಂಟ್ ಬೇರೆಯೇ ತೆರನಾದುದು. ಆದರೆ ವಯಸ್ಸಾಗುತ್ತಾ ಆಗುತ್ತಾ ನಾವು ಒಂದು ಹುಡುಗಿಯನ್ನು ಪ್ರೀತಿಸುವುದು ಆಕೆಯನ್ನು ಒಬ್ಬ ಅಮ್ಮನಾಗಿ. ಆಕೆ ನಮ್ಮ ಮಕ್ಕಳಿಗೆ ಹೇಗೆ ಅದ್ಭುತ ಅಮ್ಮನಾಗಿದ್ದಾಳೆ ಎಂಬುದು ನಮ್ಮಿಂದ ಪ್ರೀತಿಸಲ್ಪಡುತ್ತದೆ. ಇನ್ನು ನನ್ನ ಮಟ್ಟಿಗೆ ಹೇಳೋದಾದ್ರೆ, ನನಗೆ ಮದುವೆ ಆಗಿ ಹೋದಂತೆ. ಕಾಗದ ಪತ್ರದಲ್ಲಿಯಾಗಲೀ, ಸಮಾರಂಭದಲ್ಲಿಯಾಗಲೀ ಮದುವೆಯಾಗಿಲ್ಲ ನಿಜ. ಎಲ್ಲರ ಸಮ್ಮುಖದಲ್ಲಿ ಮದುವೆಯಾಗುವುದು ಹಾಗೂ ಅಧಿಕೃತವಾಗಿ ಡೈವೋರ್ಸ್ ನೀಡಿ ಬೇರೆಬೇರೆಯಾಗುವುದು ಸಾಮಾನ್ಯವೋ ಹಾಗೆಯೇ ನಾನು ಕೂಡಾ ಕೆಲವು ಹುಡುಗಿಯರನ್ನು ಲವ್ ಮಾಡಿ ಕೊನೆಗೆ ಅವರಿಂದ ದೂರವಾಗಿದ್ದೇನೆ. ಇದು ಮದುವೆ, ಡೈವೋರ್ಸ್‌ನ ಹಾಗೆಯೇ ಅಲ್ಲವೇ?
ನೀವೊಬ್ಬ ಪೊಸೆಸಿವ್ ಬಾಯ್‌ಫ್ರೆಂಡ್ ಎಂಬ ಹಣೆಪಟ್ಟಿ ಇದೆ. ನಿಮ್ಮ ಗೆಳತಿ ಕತ್ರಿನಾಳ ಖಾಸಗಿ ವಿಷಯದ್ಲಲೂ ನೀವು ಮೂಗು ತೂರಿಸುತ್ತೀರಿ ಎಂಬ ಆರೋಪ ನಿಮ್ಮ ಮೇಲಿದೆಯಲ್ಲಾ? ನಿಮಗೆ ಆಗದವರ ಜತೆಗೆ ಅಂದರೆ ಶಾರುಖ್, ಜಾನ್ ಅಬ್ರಹಾಂ ಜತೆಗೆ ನಟಿಸಲು ಆಕೆಯನ್ನು ಬಿಡೋದಿಲ್ಲ ಎಂಬ ಸುದ್ದಿಯಿತ್ತು. ನಿಜವೇ? ಆರೋಪ ಇರೋದು ನಿಜ ಬಿಡಿ. ಆದರೆ ನಾನು ಕತ್ರಿನಾಳ ವಿಷಯದಲ್ಲಿ ಮೂಗು ತೂರಿಸಲ್ಲ. ಆಕೆಯ ಖಾಸಗಿ ವಿಚಾರ ಆಕೆಗೆ. ಆಕೆಯ ಸಿನಿಮಾ ಆಯ್ಕೆಯೂ ಆಕೆಯದ್ದೇ. ನಾನು ಆ ವಿಷಯದಲ್ಲಿ ಎಂದಿಗೂ ಆಕೆಯ ಜತೆಗೆ ವಾಗ್ವಾದ ಮಾಡಿಲ್ಲ. ಜಾನ್ ಅಬ್ರಹಾಂ ಆಗಲಿ, ಶಾರುಖ್ ಆಗಲೀ, ಯಾರ ಜತೆಗೂ ಆಕೆ ನಟಿಸಬಾರದು ಎಂದು ಹೇಳಿಲ್ಲ. ಆಕೆ ನಟಿಸಿದ್ದಾಳೆ ಕೂಡಾ. ಆದರೆ ಒಬ್ಬ ಈಡಿಯಟ್ ನಟನ ಜತೆಗೆ ನಟಿಸುವುದು ಬೇಡ ಎಂದು ಆಕೆಗೆ ನಾನು ಮೊದಲೇ ತಾಕೀತು ಮಾಡಿದ್ದೇನೆ.
ಯಾರು ಆ ನಟ? ವಿವೇಕ್ ಒಬೆರಾಯ್! ಆತನೊಬ್ಬ ... ....!! ಆತ ನನಗೇನು ಮಾಡಿದ ಗೊತ್ತೇ? .... (ಸಲ್ಮಾನ್ ಖಾನ್ ರೋಷಾಗ್ನಿ ಉರಿದುದನ್ನು ಕಂಡು ಸಂದರ್ಶಕರೇ ಆತನಿಗೆ ಸಮಾಧಾನ ಮಾಡಿ ಕೂರಿಸಿದರಂತೆ. ಸ್ವಲ್ಪ ಹೊತ್ತು ಕೂಲ್ ಆಗಲು ಹೇಳಿ ವಿಷಯ ಬದಲಾಯಿಸಿದರು.