ರಾಖಿ ಸಾವಂತ್ ಎನ್‌ಡಿಟಿವಿ ಇಮ್ಯಾಜಿನ್‌ನಲ್ಲಿ ಕೆನಡಾ ಮೂಲದ ಭಾರತೀಯ ಇಲೇಶ್ ಪರುಜನ್‌ವಾಲಾ ಜತೆಗೆ ಸ್ವಯಂವರ ಮಾಡಿಕೊಂಡ ಕಥೆ ಗೊತ್ತೇ ಇದೆ. ಅಷ್ಟೇ ಅಲ್ಲ, ಆತನ ಜತೆಗೆ ಸ್ವಯಂವರದಲ್ಲಿ ಬೇಕಾದಷ್ಟು ರೊಮ್ಯಾನ್ಸ್ ಮಾಡಿ ನಾನಾ ವಿಧದಲ್ಲಿ ಪರೀಕ್ಷೆ ಮಾಡಿದ್ದನ್ನು ಎಲ್ಲರೂ ಕಣ್ಣಾರೆ ನೋಡಿದ್ದಾಗಿದೆ. ನಂತರ ಅದೇ ಇಲೇಶ್ ಜತೆಗೆ ಒಂದು ಪುಟಾಣಿ ಮಗುವಿನೊಂದಿಗೆ 'ಪತಿ ಪತ್ನಿ ಔರ್ ವೋ' ಎಂಬ ರಿಯಾಲಿಟಿ ಶೋನಲ್ಲಿ ಪತಿ,ಪತ್ನಿಯರಾಗಿ ನಟಿಸುತ್ತಿರೋದೂ ಗೊತ್ತಿದೆ. ಈ ನಡುವೆ ರಾಖಿ, 'ಇಲೇಶ್ ಕೈಯಲ್ಲಿ ದುಡ್ಡಿಲ್ಲ. ಆತ ಮುಂಬೈಯಲ್ಲಿರೋದು ಬಾಡಿಗೆ ರೂಂನಲ್ಲಿ. ಆತ ಸುಮ್ಮನೆ ತನ್ನನ್ನು ತಾನು ಶೋನಲ್ಲಿ ಹೈಪ್ ಮಾಡಿಕೊಂಡ' ಎಂದು ಮೈಯೆಲ್ಲಾ ಪರಚಿಕೊಂಡದ್ದೂ ಜಗಜ್ಜಾಹೀರಾಗಿದೆ. ಹೀಗೆ ಹೇಳಿಕೆ ಕೊಟ್ಟ ಬೆನ್ನಲ್ಲೇ ರಿಯಾಲಿಟಿ ಶೋನಲ್ಲಿ ಇಲೇಶ್ ತುಟಿಗೆ ತುಟಿ ಸೇರಿಸಿ ಮುತ್ತಿಕ್ಕಿ ಪ್ರೀತಿ ಪ್ರದರ್ಶಿಸಿದ್ದೂ ಆಗಿದೆ. ರಾಖಿ ಇಷ್ಟೆಲ್ಲಾ ಮಾಡಿದ್ದು ಕಣ್ಣೆದುರೇ ಇರುವಾಗಲೂ ಒಂದು ದಿವ್ಯ ಮೌನ ವಹಿಸಿ ಕೂತಿದ್ದು ಮಾತ್ರ ಅದೇ ರಾಖಿಯ ಭಾವೀ ಗಂಡನಾಗುವ ಅದೇ ಇಲೇಶ್.
ಇಲೇಶ್ ಅಂತೂ ಮೌನ ಮುರಿದಿದ್ದಾನೆ. ರಾಖಿಯ ಜೊತೆಗೆ ತನಗಾದ ನೋವನ್ನೆಲ್ಲಾ ಬಿಚ್ಚಿಟ್ಟಿದ್ದಾನೆ. ಇಷ್ಟು ದಿನ ವಹಿಸಿದ್ದ ಮೌನದ ಕಟ್ಟೆಯೊಳಗೆ ಇದ್ದ ದುಃಖವೆಲ್ಲ ಆತನ ಮಾತುಗಳಲ್ಲಿ ಹೊರಬಿದ್ದಿದೆ. ಇಲ್ಲಿವೆ ಆತನದೇ ಮಾತುಗಳು...
''ನಾನು ಸ್ವಯಂವರದ ನಂತರ ನಮ್ಮಿಬ್ಬರ ಸಂಬಂಧವನ್ನು ಗಟ್ಟಿಗೊಳಿಸಲು ಇನ್ನಿಲ್ಲದ ಪ್ರಯತ್ನಪಟ್ಟೆ. ನನ್ನ ಶಕ್ತಿ ಮೀರಿ ರಾಖಿಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದೆ. ಆದರೆ ನಿಜಕ್ಕೂ ನಾನು ಸೋತೆ. ಆಕೆಯ ಹಳೆಯ ದಿನಗಳನ್ನು ಅರ್ಥ ಮಾಡಿಕೊಳ್ಳಲ ಪ್ರಯತ್ನಿಸಿದೆ. ಆಕೆಯ ಮುಂದಿನ ನಡೆಯನ್ನೆಲ್ಲಾ ಅರ್ಥ ಮಾಡಲು ಪ್ರಯತ್ನಿಸಿದೆ. ಎಲ್ಲವನ್ನೂ ಅರ್ಥೈಸಲು ಕಷ್ಟಪಟ್ಟೆ, ಆದರೂ ಸೋತೆ. ಆದರೆ, ರಾಖಿ ಎಂದೂ ನನ್ನನ್ನು, ನನ್ನ ಹಿನ್ನೆಲೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ. ಎನ್ಆರ್ಐಗಳ ಬಗ್ಗೆ ಆಕೆಗೆ ತುಂಬ ಕೀಳು ನೋಟವಿದೆ. ಆಕೆಯ ಆ ಯೋಚನೆ ಬಂದಿದ್ದು ಟಿವಿಗಳಿಂದ, ಸಿನಿಮಾಗಳಲ್ಲಿ ಎನ್‌ಆರ್ಐಗಳನ್ನು ಬಿಂಬಿಸಿದ ರೀತಿಯಿಂದ ಅನ್ನೋದು ನನಗೆ ಸರಿಯಾಗಿ ಗೊತ್ತಿದೆ. ರೀಲ್ ಲೈಫ್‌ಗಿಂತ ರಿಯಲ್ ಲೈಫ್ ತುಂಬಾ ಭಿನ್ನ ಎಂಬುದನ್ನು ರಾಖಿ ಅರ್ಥೈಸಬೇಕಾಗಿದೆ.''
IFM
''ಪ್ರಾಮಾಣಿಕವಾಗಿ ಹೇಳೋದಾದ್ರೆ, ನಾನು ಎಂದಿಗೂ ಆಕೆಯಲ್ಲಿ ಮದುವೆಯ ನಂತರ ಮುಂಬೈ ಬಿಟ್ಟು ಕೆನಡಾಕ್ಕೆ ಬಂದು ನೆಲೆಸು ಎಂದು ಒತ್ತಡ ಹಾಕಿಲ್ಲ. ನಿನ್ನಿಷ್ಟ ಮಾಡು ಅಂದೆ. ಆಕೆಗೆ ಕೆನಡಾಕ್ಕೆ ಬಂದು ನೆಲೆಸಲು ಇಷ್ಟವೇ ಇಲ್ಲ. ಹೋಗಲಿ, ಆಗೀಗ ಕೆನಡಾಕ್ಕೆ ಬರುತ್ತಾ, ಮುಂಬೈಯಲ್ಲೇ ಇರಬಹುದು ಎಂದೆ. ಇದು ತಪ್ಪೇ? ನನ್ನ ಅಪ್ಪ, ಅಮ್ಮ ಕೆನಡಾದಲ್ಲಿದ್ದಾರೆ. ಅವರನ್ನು ನಾನು ತುಂಬ ಪ್ರೀತಿಸುತ್ತೇನೆ. ಅವರು ನನ್ನ-ರಾಖಿ ದಾಂಪತ್ಯಕ್ಕೆ ಸಪೋರ್ಟ್ ಆಗಿದ್ದರೆ ಅದರಲ್ಲೇನು ತಪ್ಪಿದೆ? ನನ್ನ-ರಾಖಿಯ ಮಗು ಕೆನಡಾದಲ್ಲೇ ಜನಿಸಲಿ ಎಂದು ನಾನು ಆಸೆಪಟ್ಟರೆ ಅದರಲ್ಲೇನು ತಪ್ಪಿದೆ?''
''ರಾಖಿ ನನ್ನ ಬಳಿ ಹಣವಿಲ್ಲವೆಂದು ಸಾರ್ವಜನಿಕವಾಗಿ ಜರಿದಳು. ಇದು ಪಕ್ಕಾ ಸ್ಟುಪಿಡಿಟಿಯಲ್ಲದೆ ಬೇರೇನಲ್ಲ. ನಾನು ಓದುತ್ತಿದ್ದೆ. ನಂತರ ನಾನು ನನ್ನ ಕಾಲ ಮೇಲೆಯೇ ನಿಲ್ಲಲು ಪ್ರಯತ್ನಿಸುತ್ತಿದ್ದೇನೆ. ಅಪ್ಪನ ಹಣ ತೆಗೆದುಕೊಳ್ಳದೆ ನನ್ನದೇ ಹಣ ಸಂಪಾದಿಸಬೇಕೆಂದಿರುವೆ. ಹೀಗೆ ನಾನೊಬ್ಬ ಇಂಡಿಪೆಂಡೆಟ್ ಆಗಲು ಪ್ರಯತ್ನ ಪಟ್ಟರೆ ಅದು ತಪ್ಪಾ? ''
IFM
''ಪ್ರಾಮಾಣಿಕವಾಗಿ ಸತ್ಯ ಹೇಳುತ್ತೇನೆ ಕೇಳಿ. ನಾನು ನಿಜಕ್ಕೂ ಆಕೆ ನನ್ನ ಬಗ್ಗೆ ಹೇಳಿದ ಆರೋಪಗಳಿಂದ ಶಾಕ್ ಆಗಿದ್ದೇನೆ. ನನ್ನ ಜಾಗದಲ್ಲಿ ಇನ್ಯಾರಾದರೂ ಇದ್ದಿದ್ದರೆ ಖಂಡಿತ ಡಿಪ್ರೆಶನ್‌ನಿಂದ ಹೊರಬರಲಾಗುತ್ತಿರಲಿಲ್ಲ. ಅಷ್ಟು ಬೇಸರವಾಗಿ ಮನಸ್ಸಿಗೆ. ಆದರೆ ನನ್ನ ಅಪ್ಪ- ಅಮ್ಮ ನನ್ನ ಸಪೋರ್ಟ್. ಅವರ ಮಾರ್ಗದರ್ಶನದಿಂದ ನಾನು ಮಾನಸಿಕವಾಗಿ ಗಟ್ಟಿಗೊಳ್ಳುತ್ತಿದ್ದೇನೆ. ಚೇತರಿಸಿಕೊಂಡಿದ್ದೇನೆ. ನನಗೇನಾಗಿದೆಯೋ ನನಗೇ ಗೊತ್ತಿಲ್ಲ. ಆದರೆ ನನಗರ್ಥವಾಗುತ್ತಿದೆ. ಕೆಲವು ಮನುಷ್ಯರು ಇನ್ನೊಬ್ಬ ಮನುಷ್ಯನನ್ನು ತುಂಬಾ ಚೀಪ್ ಆಗಿ ಬಿಂಬಿಸಿ, ಜನತೆಯ ಕಣ್ಣಲ್ಲೂ ಹಾಗೆಯೇ ಚಿತ್ರಿಸಿ ತಾವು ಪ್ರಪಂಚದ ಕರುಣೆಯನ್ನು ಪಡೆದುಕೊಳ್ಳುತ್ತಾರೆ. ಬಹುಶಃ ನನಗನಿಸುತ್ತದೆ, ಬಾಲಿವುಡ್‌ನಂತಹ ಸುಂದರ ಜಗತ್ತಿನಲ್ಲಿ ಇದು ಅನಿವಾರ್ಯವಿರಬಹುದು. ಆದರೆ ಆಕೆಯ ಇಂತಹ ಪಬ್ಲಿಕ್ ಮಾತುಗಳಿಂದ, ನನ್ನ ತೇಜೋವಧೆಯಿಂದ ನನಗೆ ಅತೀವ ವೇದನೆಯಾಗಿದೆ. ಅಷ್ಟೇ ಅಲ್ಲ, ನನ್ನ ಕುಟುಂಬಕ್ಕೂ ಇದರಿಂದ ತುಂಬ ವೇದನೆಯಾಗಿದೆ.''
ಇದು ರಾಖಿಯನ್ನು ಮದುವೆಯಾಗಲು ಹೊರಟ ಇಲೇಶ್‌ನ ಹೃದಯಾಂತರಾಳದ ಮಾತುಗಳು. ಇದು ಕಾಂಟ್ರಾವರ್ಸಿ ಕ್ವೀನ್ ರಾಖಿಗೆ ಹೇಗೆ ಕೇಳಿಸೀತು...?