ಮುಖ್ಯ ಪುಟಮನರಂಜನೆ » ಬಾಲಿವುಡ್ » ಸಂದರ್ಶನ » ಶಾರುಖ್ ಖಾನ್‌ಗೆ 'ಬ್ಲೂ ಫಿಲಂ'ಗಳಲ್ಲಿ ನಟಿಸುವಾಸೆ!!! (Shah Rukh Khan | The Badshah of Bollywood | Porn Star | Blue Film)
ಬಾಲಿವುಡ್ಡಿನಲ್ಲಿ ಅಮಿತಾಬ್ ಬಚ್ಚನ್ ಎಂಬ ಬಿಗ್ ನಟನಿಗೆ ಎಂಥ ಅತ್ಯುನ್ನತ ಸ್ಥಾನವಿದೆಯೋ ಹಾಗೆಯೇ ಶಾರುಖ್ ಖಾನ್ ಎಂಬ ಕಿಂಗ್‌ಗೂ ಬಾಲಿವುಡ್ಡಿನಲ್ಲಿ ಅವರದೇ ಆದ ಅಂಥದ್ದೇ ಸ್ಥಾನ ದಕ್ಕಿದೆ. ಯಾರೊಬ್ಬರೂ ಈ ಬಾಲಿವುಡ್ ಬಾದ್‌ಶಾಹ್ ಆದ ಶಾರುಖ್‌ಖಾನ್ ಅವರನ್ನು ಮೀರಿಸಲು ಸಾಧ್ಯವಿಲ್ಲ, ಶಾರುಖ್ ಎಂದಿಗೂ ಶಾರುಖ್ ಖಾನೇ! ಭಾರತವೂ ಸೇರಿದಂತೆ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿರುವ ಈ ಬಾಲಿವುಡ್ ನಟ ಕಿಂಗ್ ಖಾನ್‌ಗೆ ಬ್ಲೂ ಫಿಲಂಗಳಲ್ಲಿ ಕಾಮಪ್ರಚೋದಕ ದೃಶ್ಯಗಳಲ್ಲಿ ನಟಿಸುವ ಆಸೆಯಿತ್ತಂತೆ!
ಅಬ್ಬಬ್ಬಾ!!! ನಂಬಿದರೆ ನಂಬಿ ಬಿಟ್ಟರೆ ಬಿಡಿ. ಇದು ಸ್ವತಃ ಶಾರುಖ್ ಖಾನ್ ಅವರೇ ಇತ್ತೀಚೆಗೆ ನೀಡಿದ ಹೇಳಿಕೆ!
ನಾನು ಯಾವಾಗಲೂ ಒಬ್ಬ ಬ್ಲೂ ಫಿಲಂ ನಟನಾಗಬೇಕೆಂದು ಬಯಸಿದ್ದೆ. ಹಾಗೂ ನಾನು ಈ ದಿಸೆಯಲ್ಲಿ ತುಂಬ ಪಾಸಿಟಿವ್ ಆಗಿ ಯೋಚಿಸಿದ್ದೆ ಎಂದು ಶಾರುಖ್ ಹೇಳಿದ್ದಾರೆ. ಇತ್ತಿಚೆಗೆ ಅರಿಂದಮ್ ಚೌಧರಿ ಅವರ ಪುಸ್ತಕ 'ಡಿಸ್ಕವರ್ ದಿ ಡೈಮಂಡ್ ಇನ್ ಯು' ಬಿಡುಗಡೆ ಮಾಡಿದ ಸಂದರ್ಭ ತಮ್ಮ ಈ ಹುಚ್ಚು ಬಯಕೆಯನ್ನು ಹೊರಹಾಕಿದರು ಶಾರುಖ್.
IFM
ಕಾಮ ಪ್ರಚೋದಕ ಪಾತ್ರದಲ್ಲೇ ಅಭಿನಯಿಸಬೇಕೆಂಬ ಪ್ರಚೋದನೆಯಾದರೂ ಶಾರುಖ್‌ಗೆ ಎಲ್ಲಿಂದ ಬಂತು ಎಂದರೆ ಶಾರುಖ್ ಹೇಳೋದು ಹೀಗೆ, ನಾನು ಸಿಲ್ವೆಸ್ಟರ್ ಸ್ಟಾಲೋನ್‌ನ ಅತ್ಯಂತ ದೊಡ್ಡ ಅಭಿಮಾನಿ. ಆತ ಇಂಥ ಕಾಮಪ್ರಚೋದಕ ಸಿನಿಮಾಗಳಲ್ಲಿ ನಟಿಸಿದ ಮೇಲೆಯೇ ಅಮೆರಿಕಾದಲ್ಲಿ ಮನೆಮಾತಾಗಿದ್ದು. ಹಾಗಾಗಿ ನಾನೂ ಇಂಥ ಚಿತ್ರಗಳಲ್ಲಿ ನಟಿಸುವ ಮೂಲಕ ವಿಶ್ವದ ಅತಿ ಶ್ರೇಷ್ಠ ಕಾಮಪ್ರಚೋದಕ ನಟ ಎಂಬ ಕೀರ್ತಿ ಪತಾಕೆ ಹಾರಿಸಬೇಕೆಂದಿದ್ದೆ ಎಂದು ನಕ್ಕರು.
ಶಾರುಖ್ ಹೀಗೆ ಹೇಳಿದ್ದು ನಿಜಕ್ಕೂ ತಮಗೆ ಬ್ಲೂ ಫಿಲಂಗಳಲ್ಲಿ ನಟಿಸುವ ಆಸೆಯನ್ನು ಹೊಂದಿಯೋ, ಅಥವಾ ತಮಾಷೆಗೆ ಹೇಳಿದ್ದೋ ಎಂದು ಇನ್ನೂ ಹಲವರಿಗೆ ಅರ್ಥವಾಗಿಲ್ಲವಂತೆ. ಶಾರುಖ್ ಹೀಗೆ ಹೇಳಿದ್ದು ಕನಸೋ ನನಸೋ ಎಂಬಂತೆ ಅಭಿಮಾನಿಗಳು ಮೈಯೆಲ್ಲಾ ಪರಪರ ಕೆರೆದು ನೋಡಿಕೊಳ್ಳುತ್ತಿದ್ದಾರಂತೆ. ಯಾಕೆಂದರೆ, ಶಾರುಖ್ ಯಾವಾಗಲೂ ಕೌಟುಂಬಿಕ ಚಿತ್ರಗಳಲ್ಲೇ ಹೆಚ್ಚು ನಟಿಸಿದ್ದರು. ಅಲ್ಲದೆ, ಶಾರುಖ್ ಸಿನಿಮಾಗಳೆಂದರೆ ಸಾಮಾನ್ಯವಾಗಿ ಇಡೀ ಕುಟುಂಬ ಸಮೇತರಾಗಿ ಬಂದು ವೀಕ್ಷಿಸಬಲ್ಲ ಸಿನಿಮಾಗಳೆಂದೇ ಪ್ರಸಿದ್ಧಿ. ಆದರೂ, ಕೆಲವು ವರ್ಷಗಳ ಹಿಂದೆ ಶಾರುಖ್ ತನ್ನ ಇಮೇಜ್ ಬದಲಾಯಿಸಿ ಅಶೋಕ ಚಿತ್ರದಲ್ಲಿ ಕರೀನಾ ಜೊತೆಗೆ ಖುಲ್ಲಂಖುಲ್ಲಾ ಆಗಿ ಶರ್ಟು ಬಿಚ್ಚಿ ಬಿಂದಾಸ್ ಆಗಿ ನಟಿಸಿದ್ದಕ್ಕೇ ಶಾರುಖ್ ಬಗ್ಗೆ ಅಭಿಮಾನಿಗಳಿಂದ ಸಾಕಷ್ಟು ಆಕ್ಷೇಪ ವ್ಯಕ್ತವಾಗಿತ್ತು. ಈಗ ಶಾರುಖ್ ಇಂಥ ಹೇಳಿಕೆಯನ್ನು ನೀಡಿದ್ದು ಅಭಿಮಾನಿಗಳಿಗೆ ದೊಡ್ಡ ಶಾಕ್ ಕೊಟ್ಟಂತಾಗಿದೆ. ಹೇಳಿಕೆಯನ್ನು ನೀಡಿ ಶಾರುಖ್ ಅಂತೂ ತಮಾಷೆಯಾಗಿ ಓಡಾಡುತ್ತಾ ಮುಸಿ ಮುಸಿ ನಗುತ್ತಿದ್ದಾರೋ ಗೊತ್ತಿಲ್ಲ!
ಒಟ್ಟಾರೆ, ಈಗಂತೂ ಬಾಲಿವುಡ್ ಸೂಪರ್ ಸ್ಟಾರ್ ಆಗಿದ್ದಾಗಿದೆ. ಬಾದ್‌ಶಾಹ್ ಅಂತ ಕರೆಸಿಕೊಂಡೂ ಆಗಿದೆ. ಕಿಂಗ್ ಖಾನ್ ಕೂಡಾ ಆಗಿದ್ದಾರೆ. ಇಷ್ಟೆಲ್ಲಾ ಪ್ರಸಿದ್ಧಿಯ ಶಿಖರಕ್ಕೇರಿದ ನಂತರ ಇನ್ನು ಈ ಕಿಂಗ್ ಖಾನ್ ಬ್ಲೂ ಫಿಲಂ ಕಡೆ ತಲೆಯೆತ್ತಿ ನೋಡುವ ಇರಾದೆ ಹೊಂದಿರಲಿಕ್ಕಿಲ್ಲ ಅಂತ ಮಾತಾಡಿಕೊಳ್ಳುತ್ತಿದ್ದಾರೆ ಬಾಲಿವುಡ್ಡಿಗರು.