ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸಂದರ್ಶನ » ಪದ್ಮಶ್ರೀ ಪಡೆದವರ್ಯಾರೂ ನ್ಯೂಕ್ಲಿಯರ್ ಬಾಂಬ್ ಸೃಷ್ಟಿಸಿಲ್ಲ: ಸೈಫ್! (Bollywood, Saif Ali Khan, Padma Shri)
ಸಂದರ್ಶನ
Bookmark and Share Feedback Print
 
IFM
ನನಗೆ ಪದ್ಮಶ್ರೀ ದಕ್ಕುವ ಎಲ್ಲ ಅರ್ಹತೆಗಳೂ ಇವೆ. ಹೀಗೆಂದವರು ಸೈಫ್ ಅಲಿ ಖಾನ್. ಈ ಬಾರಿ ಪದ್ಮ ಪ್ರಶಸ್ತಿ ಬಿಡುಗಡೆಯಾದಾಗ ಎಲ್ಲರ ಹುಬ್ಬೇರಿದ್ದು ಒಂದೇ ಕಾರಣಕ್ಕೆ. ಅದು ಸೈಫ್ ಅಲಿ ಖಾನ್ ಎಂಬ ನಟನಿಗೆ ಪದ್ಮಶ್ರೀ ದಕ್ಕಿದ್ದಕ್ಕೆ.

ಹಲವರು ಸೈಫ್ ಆಲಿ ಖಾನ್ ಪದ್ಮಶ್ರೀ ದಕ್ಕುವಂಥ ಮಹಾನ್ ಸಾಧನೆ ಏನು ಮಾಡಿದ್ದಾನಪ್ಪಾ ಎಂದು ಮೂಗು ಮುರಿದರು ಇನ್ನು ಕೆಲವರು, ಸೈಫ್‌ಗೆ ಪದ್ಮಶ್ರೀ ದಕ್ಕಿದ್ದು ಪದ್ಮಶ್ರೀ ಪ್ರಶಸ್ತಿಗೆ ದಕ್ಕಿದ ಅವಮಾನ ಎಂದರು. ಇನ್ನೂ ಹಲವರು ತಮಾಷೆಯಾಗಿ ಸೈಫ್ ಮಾಡಿದ ಸಾಧನೆ ಎಂದರೆ ಕರೀನಾಳ ಝೀರೋ ಫಿಗರ್ ಎಂದು ಕುಹಕವಾಡಿದರು. ಆದರೆ ಇವೆಲ್ಲವಕ್ಕೂ ಸೈಫ್ ತಲೆಕೆಡಿಸಿಕೊಳ್ಳಲಿಲ್ಲ. ತನ್ನ ಮನೆಯಲ್ಲಿ ಎಲ್ಲರೊಂದಿಗೆ ಪದ್ಮಶ್ರೀ ಬಂದ ಸಂತಹ ಹಂಚಿಕೊಳ್ಳಲು ಪಾರ್ಟಿ ಮಾಡೋದರಲ್ಲೇ ಬ್ಯುಸಿಯಾಗಿದ್ದರು.

ಈಗಷ್ಟೆ ಪಾರ್ಟಿ ಗೀರ್ಟಿ ಎಲ್ಲ ಮುಗಿಸಿ ಸೈಫ್ ಬಿಡುವಾಗಿದ್ದಾರೆ. ಹಾಗಾಗಿ ತನ್ನ ಟೀಕಾಕರರ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ನನಗೆ ಪದ್ಮಶ್ರೀ ದಕ್ಕಲು ಎಲ್ಲ ಅರ್ಹತೆಗಳೂ ಇವೆ. ನನ್ನ ಜೊತೆ ಪದ್ಮಶ್ರೀ ಪಡೆದವರೆಲ್ಲ ನ್ಯೂಕ್ಲಿಯರ್ ಬಾಂಬನ್ನೇನೂ ಸೃಷ್ಟಿಸಿಲ್ಲ. ಅವರೂ ನನ್ನಂತೆಯೇ ಒಂದು ಕ್ಷೇತ್ರಗಳಲ್ಲಿ ಸಾಧನೆ ಮೆರೆದವರು ಅಷ್ಟೆ ಎಂದು ಸೈಫ್ ಹೇಳಿದ್ದಾರೆ.

ಆದರೂ, ನನ್ನ ಹಾಗೆಯೇ ಸಾಧನೆ ಮಾಡಿದವರು ಇನ್ನೂ ಅನೇಕರಿದ್ದಾರೆ ಎಂಬುದನ್ನು ನಾನು ಬಲ್ಲೆ. ನನಗೆ ಇನ್ನೂ ಸಣ್ಣ ವಯಸ್ಸು. ನನಗಿಂತ ವಯಸ್ಸಾದವರಲ್ಲೂ ಸಾಧಕರಿದ್ದಾರೆ ಎಂಬ ಕಾರಣಕ್ಕೆ ಹಲವರಿಗೆ ನ್ನ ಪ್ರಶಸ್ತಿಯ ಬಗ್ಗೆ ಬೇಸರ ತರಿಸಿರಬಹುದು. ಆದರೆ ಅವರ ಬೇಸರ ನಾನು ಪ್ರಶಸ್ತಿಗೆ ಅರ್ಹನಲ್ಲ ಎಂಬ ಕಾರಣಕ್ಕಲ್ಲ ಎಂದು ಸೈಫ್ ವಿವರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೈಫ್ ಅಲಿ ಖಾನ್, ಪದ್ಮಶ್ರೀ, ಬಾಲಿವುಡ್