ಶಾರುಖ್ಗೆ ಬೆದರಿಕೆ ಕರೆಗಳು ಬಂದಿಲ್ಲ
ಮುಂಬೈ, ಗುರುವಾರ, 13 ಡಿಸೆಂಬರ್ 2007( 11:04 IST )
ಎರಡು ಕೋಟಿ ರೂಪಾಯಿ ನೀಡುವಂತೆ ಗ್ಯಾಂಗ್ಸ್ಟರ್ ಬಂಟೀ ಪ್ಯಾಂಡಿಯಿಂದ ಶಾರುಖ್ ಖಾನ್ ಅವರಿಗೆ ಬೆದರಿಕೆ ಕರೆಗಳು ಬಂದಿದ್ದವು ಎಂಬ ವರದಿಯನ್ನು ಪೊಲೀಸರು ನಿರಾಕರಿಸಿದ್ದಾರೆ.
ಶಾರುಖ್ ಅವರಿಗೆ ಅಂತಹ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ ಎಂಬುದಾಗಿ ಕ್ರೈಮ್ ಶಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ತಾನು ಅತಿದೊಡ್ಡ ಭೂಗತ ದೊರೆಯಾಗುವ ಸಲುವಾಗಿ ಅಗ್ಗದ ಪ್ರಚಾರಕ್ಕಾಗಿ ಅವನು ಈ ರೀತಿ ಮಾಡಿರಬಹುದು. ಇದಕ್ಕೆ ಮಾಧ್ಯಮವನ್ನು ಅನಗತ್ಯವಾಗಿ ಉಪಯೋಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಈ ವರದಿಗಳ ಕುರಿತಾಗಿ ಪ್ರತಿಕ್ರಯಿಸಿದ್ದಾರೆ.
ಬಂಟೀ ಪ್ಯಾಂಡಿ ಈ ಮೊದಲು ಚೋಟಾ ರಾಜನ್ ಅವರೊಂದಿಗಿದ್ದು, ನಂತರ ಭಾರತ್ ನೇಪಾಳಿ ಮತ್ತು ಅಜಯ್ ಮೋಹಿತ್ ಅವರೊಂದಿಗೆ ತನ್ನ ಸ್ವಂತ ತಂಡವನ್ನು ನಿರ್ಮಿಸಿಕೊಂಡರು.
ನವಿ ಮುಂಬಯಿಯ ಸಮೀಪದ ನಗರದ ಎನ್ಸಿಪಿ ಕಾರ್ಪೊರೇಟರ್ ದೇವಿದಾಸ್ ಚೌಗುಲ್ ಅವರ ಹತ್ಯೆಗೆ ತಾನೇ ಕಾರಣ ಎಂದು ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಸಮಯದಲ್ಲಿ ಪ್ಯಾಂಡಿಯವರು ಸುದ್ದಿಯಲ್ಲಿದ್ದರು.