ಪ್ರೀತಂ ಸಂಗೀತಕ್ಕೆ ಭರ್ಜರಿ ಬೇಡಿಕೆ
ಮುಂಬೈ, ಶುಕ್ರವಾರ, 14 ಡಿಸೆಂಬರ್ 2007( 13:01 IST )
ಭೂಲ್ ಭುಲೈಯಾ ಚಿತ್ರದ ಹಿಟ್ ಹಾಡು 'ಹರೇ ರಾಮ' ಮತ್ತು ಧನ್ ಧನಾ ಧನ್ ಗೋಲ್ ಚಿತ್ರದ 'ಇಷ್ಕ್ ಕಾ ಕಲ್ಮಾ' ಈ ಎರಡು ಹಾಡುಗಳಿಗೂ ಪ್ರೀತಂ ಸಂಗೀತ ನೀಡಿದ್ದರು. ಆದರೆ ಈ ಎರಡೂ ಹಾಡುಗಳ ಸಂಗೀತವು ಸಮಾನವಾಗಿರುವಂತೆ ಭಾಸವಾಗುತ್ತದೆ. ಅಲ್ಲದೇ ಈ ಎರಡೂ ಹಾಡುಗಳನ್ನು ಬಾಂಬೇ ವಿಂಕಿಂಗ್ಸ್ನ ನೀರಜ್ ಶ್ರೀಧರ್ ಹಾಡಿದ್ದಾರೆ.
ಈ ಕುರಿತು ಪ್ರತಿಕ್ರಯಿಸಿದ ಪ್ರೀತಂ, ಹಾಡುಗಳನ್ನು ಕಂಪೋಸ್ ಮಾಡುವ ಸಮಯದಲ್ಲಿ ಅವುಗಳು ಸಮಾನವಾಗಿರುವುದನ್ನು ನಾನು ಗಮನಿಸಿರಲಿಲ್ಲ. ನನ್ನ ಪತ್ನಿಯು ಅದನ್ನು ಗುರುತಿಸಿದ್ದಳು. ಆದರೆ ಆಗ ಸಮಯ ಮೀರಿತ್ತು. ನನಗೆ ತಿಳಿದ ಕೂಡಲೇ 'ಇಷ್ಕ ಕಾ ಕಲ್ಮಾ'ಹಾಡನ್ನು ನೀರಜ್ ಬದಲು ಮಿಕಾ ಅವರು ಹಾಡುವಂತೆ ಸಲಹೆ ನೀಡಿದ್ದೆ ಎಂದರು.
ಒಂದು ಹಾಡು ಭಜನ್ ಆಗಿದ್ದು ಮತ್ತೊಂದು ಪ್ರೇಮದ ಕುರಿತಾದ ಹಾಡಾದ ಕಾರಣ ಇದೇನು ದೊಡ್ಡ ಸಮಸ್ಯೆಯಲ್ಲಾ ಎಂದು ಅವರು ಹೇಳಿದರು.
ಈ ಎರಡೂ ಹಾಡುಗಳ ಸಂಯೋಜನೆಯನ್ನು ಒಂದೇ ವ್ಯಕ್ತಿ ಮಾಡಿದ್ದಾರೆ ಇಲ್ಲದಿದ್ದರೆ ಎರಡರ ಸಂಗೀತವು ಸಮರೂಪವಾಗಿರುತ್ತಿರಲಿಲ್ಲ. 'ಥೋಡಾಸಾ ಪ್ಯಾರ್ ಹುವಾ ಹೈ' ಮತ್ತು "ಕುಚ್ ಕುಚ್ ಹೋತಾ ಹೈ' ಹಾಡುಗಳು ಕೂಡ ಒಂದೇ ತೆರನಾಗಿದ್ದವು. ಹರೇ ರಾಮ ಹಾಡಿನ ನಂತರ ಪ್ರಖ್ಯಾತಿಯನ್ನು ಪಡೆದ ನೀರಜ್. ಈಗ ಅನೇಕ ಅವಕಾಶಗಳನ್ನು ಪಡೆಯುತ್ತಿದ್ದಾರೆ ಎಂದು ಟಿ ಸಿರೀಸ್ನ ಭೂಷಣ ಕುಮಾರ್ ಹೇಳಿದ್ದಾರೆ.