ಪ್ರಾಚಿಗೆ ಜಲಕ್ ದಿಕ್ಲಾಜಾ ಪ್ರಶಸ್ತಿ
ಮುಂಬಯಿ, ಸೋಮವಾರ, 17 ಡಿಸೆಂಬರ್ 2007( 12:29 IST )
ತನ್ನ ಪ್ರತಿಸ್ಪರ್ಧಿಗಳನ್ನು ಸೋಲಿಸುವ ಮೂಲಕ ಪ್ರಸಿದ್ಧ ತೆಲಿವಿಶನ್ ತಾರೆ ಪ್ರಾಚಿ ದೇಸಾಯಿ ಸೆಲೆಬ್ರಿತಿ ನೃತ್ಯ ಪ್ರದರ್ಶನ 'ಜಲಕ್ ದಿಕ್ಲಾಜಾ'ದಲ್ಲಿ ವಿಜೇತರಾಗುವ ಮೂಲಕ ಉತ್ತಮ ನೃತ್ಯಗಾರ್ತಿ ಎಂಬ ಪಟ್ಟವನ್ನು ಪಡೆದುಕೊಂಡಿದ್ದಾರೆ.
ಈ ಕಠಿಣ ಸ್ಪರ್ಧೆಯಲ್ಲಿ ಪ್ರಾಚಿ ಮತ್ತು ಅವರ ನೃತ್ಯನಿರ್ದೇಶಕ ದೀಪಕ್ ಸಿಂಗ್ , ಪ್ರತಿಸ್ಪರ್ಧಿಗಳಾದ ಸಂಧ್ಯಾ ಮೃದುಲ್ ಮತ್ತದು ಜಯಾ ಭಾನುಶಾಲಿ ಅವರನ್ನು ಸೋಲಿಸಿ ಐದು ಮಿಲಿಯನ್ ಮೊತ್ತದ ಬಹುಮಾನ ಮತ್ತು ಟ್ರೋಫಿಯನ್ನು ಪಡೆದುಕೊಂಡಿದ್ದಾರೆ.
ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ, ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್, ವಿಜೇತರಿಗೆ ಬಹುಮಾನ ನೀಡಿ ಅಭಿನಂದಿಸಿದರು.ತನ್ನ ಆಕರ್ಷಕವಾದ ನಿರ್ವಹಣೆಯ ಮೂಲಕ ಪ್ರಾಚಿ ಪ್ರೇಕ್ಷಕರನ್ನು ಮತ್ತಚು ನಿರ್ಣಾಯಕರನ್ನು ರಂಜಿಸಿದ್ದರು.
ಈ ಯುವ ನಟಿ ತನ್ನ 17ನೇ ವಯಸ್ಸಿನಲ್ಲಿ ಹಿಂದಿ ದಾರಾವಾಹಿಯೊಂದರಲ್ಲಿ ನಟಿಸಿದ್ದ ಪ್ರಾಚಿಗೆ ಈಗ ಅನೇಕ ಬಾಲಿವುಡ್ ಆಫರ್‌ಗಳು ಬರುತ್ತಿದ್ದು, ನಿರ್ದೇಶಕ ಫರಾಹ್ ಅಕ್ತರ್ ಅವರೊಂದಿಗೆ ತನ್ನ ಚೊಚ್ಚಲ ಚಿತ್ರದ ಬಗ್ಗೆ ನಿರ್ಧರಿತರಾಗಿದ್ದಾರೆ.