ವಿವಾದದ ಸುಳಿಯಲ್ಲಿ ತಾರೇ ಜಮೀನ್ ಪರ್
ವಡೋದರಾ , ಶುಕ್ರವಾರ, 21 ಡಿಸೆಂಬರ್ 2007( 15:00 IST )
ವಡೋದರಾದಲ್ಲಿ ಕೆಲ ಯುವ ಸಂಘಟನೆಯ ಕಾರ್ಯಕರ್ತರು ಅಮೀರ್ ಖಾನ್ ಅಭಿನಯ ಮತ್ತು ನಿರ್ದೇಶನದ ತಾರೇ ಜಮೀನ್ ಪರ್ ಚಿತ್ರದ ಪ್ರದರ್ಶನದ ವಿರುದ್ಧ ಪ್ರತಿಭಟನೆ ನಡೆಸಿ, ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡಲಿಲ್ಲ.
ನರ್ಮದಾ ಆಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಅಮೀರ್ ಖಾನ್ ವ್ಯಕ್ತಪಡಿಸಿದ ಟೀಕೆಗಳಿಗೆ ಕ್ಷಮೆ ಕೇಳಬೇಕು ಎಂದು ಹಿಂದ್ ರಕ್ಷಕ್ ಸಮಿತಿಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಅಮೀರ್ ಖಾನ್ ಕ್ಷಮೆ ಕೇಳುವವರೆಗೆ ತಮ್ಮ ಪ್ರತಿಭಟನೆ ಮುಂದುವರಿಯುವುದು ಎಂದು ಕಾರ್ಯಕರ್ತರು ಘೋಷಿಸಿದ್ದಾರೆ.
ಚಿತ್ರದ ಬಿಡುಗಡೆ ಮತ್ತು ಪ್ರದರ್ಶನಕ್ಕೆ ಸಂಬಂಧಿಸಿದಂತೆ ಗುಜರಾತ್ನ ವಿವಿದ ಸ್ಥಳಗಳಲ್ಲಿ ಪ್ರತಿಭಟನೆ ಮಾಡಲಾಗಿದ್ದು, ಕೆಲ ಸಿನಿಮಾ ಥಿಯೇಟರುಗಳು ಕೂಡ ಅಮೀರ್ ಖಾನ್ ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ.