ಖಾನ್‌ಗಳಿಬ್ಬರ ನಡುವೆ ಪ್ರಾರಂಭವಾದ ಪೈಪೋಟಿ
ಮುಂಬಯಿ, ಸೋಮವಾರ, 24 ಡಿಸೆಂಬರ್ 2007( 13:08 IST )
ಸುದ್ದಿ ಮೂಲಗಳನ್ನೆ ನಂಬಿದ್ದೆ ಆದಲ್ಲಿ, ಶಾರುಖ್ ಖಾನ್ ಮತ್ತು ಅಮೀರ್ ಖಾನ್ ದಕ್ಷಿಣದ ಖ್ಯಾತ ನಿರ್ದೇಶಕರಿಬ್ಬರ ಚಿತ್ರಗಳಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದು ಮುಂದಿನ ವರ್ಷ ಏಕಕಾಲದಲ್ಲಿ ಖಾನ್‌ಗಳಿಬ್ಬರ ಚಿತ್ರಗಳು ಬಿಡುಗಡೆಯಾಗಲಿದೆ. ಇದರಲ್ಲಿ ಚೇತನ್ ಭಗತ್ ಅವರ ಫೈವ್ ಪಾಯಿಂಟ್ ಸಮ ಓನ್ ಕಾದಂಬರಿಯನ್ನು ಬೆಳ್ಳಿ ತೆರೆಗೆ ತರಲು ರಾಜಕುಮಾರ್ ಹೀರಾನಿ ಸಿದ್ದತೆ ನಡೆಸಿದ್ದು, ಈ ಚಿತ್ರದಲ್ಲಿ ಅಮೀರ್ ಖಾನ್ ನಾಯಕನಾಗಿ ನಟಿಸಲಿದ್ದಾರೆ. ಅಂತೂ ಕೊನೆಗೂ ಖಾನ್‌ಗಳಿಬ್ಬರ ನಡುವೆ ಪೈಪೋಟಿ ಶುರುವಾಗಿದೆ.
ರಾಜ್ ಕುಮಾರ್ ಹೀರಾನಿ ಅವರ ಹಿಂದೆಯೇ ಕಾಲಿವುಡ್ ಜಗತ್ತಿನ ಖ್ಯಾತ ನಿರ್ದೇಶಕ ಶಂಕರ್ ಕೂಡ ಅಮೀರ್ ಖಾನ್ ಹಿಂದೆ ಬಿದಿದ್ದಾರೆ ಎಂದು ವರದಿಯಾಗಿದೆ.
ಅಮೀರ್ ಅವರಿಗೆ ತನ್ನ ಇಮೇಜ್‌ನಲ್ಲಿ ಬದಲಾವಣೆ ಬೇಕಾಗಿದ್ದು, "ಗಜನಿ" ಮುಗಿದ ಕೂಡಲೇ, ಹಿರಾನಿಯವರ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಶಂಕರ್ ನಿರ್ಧೇಶನದ ರೋಬೊಟ್ ಚಿತ್ರೀಕರಣ ಪ್ರಾರಂಭವಾಗುವ ಸಾಧ್ಯತೆ ಇದೆ.
ಗಜನಿ ಚಿತ್ರದ ನಿರ್ದೇಶಕ ಮುರುಗದಾಸ್, ಶಂಕರ್ ಮತ್ತು ಅಮೀರ್ ಖಾನ್ ನಡುವೆ ಭಾಂಧವ್ಯ ಬೆಳೆಸಲು ಕಾರಣರಾಗಿದ್ದು ಈಗ ಇತಿಹಾಸ.
ತನ್ನ ಮುಂದಿನ ಚಿತ್ರದಲ್ಲಿ ನಟಿಸುವಂತೆ ಮಣಿರತ್ನಂ ಅವರು ಶಾರುಖ್‌ಖಾನ್‌ಗೆ ಒತ್ತಾಯಿಸುತ್ತಿದ್ದಾರೆ. ಗುರು ಚಿತ್ರದ ನಂತರ, ಅಮೀರ್ ಖಾನ್ ಮತ್ತು ಕರೀನಾ ಅವರೊಂದಿಗೆ ಲಜ್ಜೋ ಚಿತ್ರದಲ್ಲಿ ನಟಿಸಬೇಕಿತ್ತು. ಲಜ್ಜೊ ಚಿತ್ರದ ಪ್ರಾರಂಭದ ಮುನ್ನವೆ ಮಣ್ಣು ಮುಕ್ಕಿದೆ.
ದಿಲ್ ಸೆ ಸಮಯದಲ್ಲಿ ಶಾರುಖ್‌ಗಾಗಿ ಮಣಿ ಅವರು ಎರಡು ಸಾಹಿತ್ಯವನ್ನು ಬರೆದಿದ್ದರು. ಅದರಲ್ಲಿ ಒಂದು ಶಾರುಖ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದ ಸಾಥಿಯಾ. ಇನ್ನೊಂದು ಶಾರುಖ್ ಮುಖ್ಯಪಾತ್ರದಲ್ಲಿ ನಟಿಸುವ ಮೂಲಕ ತಾನು ಈಗ ಪ್ರಾರಂಭಮಾಡಲು ಹೊರಟಿರುವ ನೂತನ ಚಿತ್ರ.
ಎಲ್ಲಾ ಕೆಲಸಗಳು ಪೂರ್ಣವಾದಲ್ಲಿ ಮಣಿ ಅವರ ಚಿತ್ರವನ್ನು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭಿಸಲಾಗುವುದು ಎಂದು ಮೂಲಗಳು ತಿಳಿಸಿವೆ.