ಫ್ಯಾಷನ್‌ನಲ್ಲಿ ಅರ್ಬಾಜ್ ಪ್ರಿಯಾಂಕಾ ಜೋಡಿ
ಮುಂಬಯಿ, ಸೋಮವಾರ, 24 ಡಿಸೆಂಬರ್ 2007( 13:10 IST )
ಸಣ್ಣ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಅರ್ಬಾಜ್ ಖಾನ್ ಮೊದಲ ಬಾರಿಗೆ ಮಧುರ್ ಭಂಡಾರಕರ್ ಅವರ ಫ್ಯಾಷನ್ ಚಿತ್ರದ ಹೀರೋ. ಇನ್ನೊಂದು ಪ್ಲಸ್ ಪಾಯಿಂಟ್ ಫ್ಯಾಷನ್‌ಗೆ ನಾಯಕಿಯಾಗಿರುವುದು ಪ್ರಿಯಾಂಕಾ ಚೋಪ್ರಾ. ಅಂತೂ ಕೊನೆಗೂ ಅರ್ಬಾಜ್‌ನ ಖರಾಬ್ ನಸೀಬ್ ಹಳಿ ತಪ್ಪುವ ಹಾದಿಯಲ್ಲಿದೆ ಅಂತಾಯಿತು.
ಮಧುರ್ ಅವರು ನನಗೆ ಪಾತ್ರದ ಬಗ್ಗೆ ಹೇಳಿದಾಗ, ಚಿತ್ರದ ಅವಧಿಯ ಬಗ್ಗೆ ನಾನು ಸ್ವಲ್ಪ ಬೇಸರಗೊಂಡಿದ್ದೆ. ಅತ್ಯಂತ ಸುಂದರಿಯರಾದ ಪ್ರಿಯಾಂಕ ಮತ್ತು ಕಂಗಾನಾ ಅವರು ಈಗಾಗಲೇ ಸಹಿ ಹಾಕಿದ ಮೇಲೆ ಈ ಪಾತ್ರದಲ್ಲಿ ಅಭಿನಯಿಸಲು ನನ್ನಂತಹ ಸುಂದರ ನಟ ಸಾಕು ಎಂದು ಮಾತಿಗೆ ಹಾಸ್ಯದ ಲೇಪ ಸೇರಿಸಿದರು.
ಮೊದಲ ಬಾರಿಗೆ ಇಬ್ಬರು ನಟಿಯರೊಂದಿಗೆ ನಟಿಸುವ ಅವಕಾಶ ಪಡೆದಿದ್ದೇನೆ. ನನ್ನ ಸಹೋದರ ಸಲ್ಮಾನ್ ಅವರ ಅನೇಕ ಚಿತ್ರಗಳಲ್ಲಿ ಪ್ರಿಯಾಂಕಾ ನಟಿಸಿದ್ದು, ಅವರ ಬಗ್ಗೆ ಹೆಚ್ಚು ತಿಳಿದಿದೆ. ಆದರೆ ಕಂಗಾನಾ ಅವರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೆ.ಎಂದು ಅವರು ಹೇಳಿದರು.