ತಂದೆಯ ಚಿತ್ರದಲ್ಲಿ ಶಾಹಿದ್ ನಟನೆ
ಮುಂಬೈ, ಮಂಗಳವಾರ, 25 ಡಿಸೆಂಬರ್ 2007( 11:25 IST )
ತನ್ನ ಪುತ್ರನ ಬಗ್ಗೆ ಹೆಚ್ಚು ಪ್ರತಿಕ್ರಿಯೆ ನೀಡದ ಪಂಕಜ್ ಕಪೂರ್ ಈ ಬಾರಿ ಸ್ವಲ್ಪ ಬದಲಾವಣೆಯಾಗಿದ್ದಾರೆ. ವಿವಾಹ್ ಮತ್ತು ಜಬ್ ವಿ ಮೆಟ್ ಚಿತ್ರದಲ್ಲಿ ಶಾಹಿದ್ ಅಭಿನಯಕ್ಕೆ ಪಂಕಜ್ ಮೆಚ್ಚುಗೆ ಸೂಚಿಸಿದ್ದಾರೆ.
ಶಾಹಿದ್ ಒಬ್ಬ ಯಶಸ್ವೀ ನಟನಾಗುತ್ತಾನೆ ಎಂದು ನನಗೆ ಭರವಸೆ ಇತ್ತು ಎಂದು ಪಂಕಜ್ ಅವರು ಹೇಳಿದ್ದಾರೆ.
ಇತ್ತೀಚಿನ ವಿಷಯವೇನೆಂದರೆ ಶಾಹಿದ್ ತನ್ನ ಅಪ್ಪನಿಂದ ನಿರ್ದೇಶಿಸಲ್ಪಡಲಿದ್ದಾರೆ. ಪಂಕಜ್ ಕಪೂರ್ ಅವರ ಮುಂಬರುವ ಚಿತ್ರದಲ್ಲಿ ಶಾಹಿದ್ ನಟಿಸಲಿದ್ದಾರೆ.
ನನ್ನ ತಂದೆಯ ಚಿತ್ರದಲ್ಲಿ ನಟಿಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳುವ ಶಾಹಿದ್, ಅಂತಹ ನಟನೊಂದಿಗೆ ನಟಿಸುವುದು ನಿಜಕ್ಕೂ ಹೆಮ್ಮೆಯ ವಿಷಯ ಎಂದು ಹೇಳುತ್ತಾರೆ.