ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಶೋಲೆ ಖ್ಯಾತಿಯ ಜಿ.ಪಿ.ಸಿಪ್ಪಿ ನಿಧನ
ಸುದ್ದಿ/ಗಾಸಿಪ್
Feedback Print Bookmark and Share
 
1975ರ ಭರ್ಜರಿ ಯಶಸ್ವೀ ಚಿತ್ರ "ಶೋಲೆ"ಯಿಂದಾಗಿ ಮನೆಮಾತಾಗಿದ್ದ ಬಾಲಿವುಡ್‌ನ ಹಿರಿಯ ನಿರ್ಮಾಪಕ, ನಿರ್ದೇಶಕ, ಜಿ.ಪಿ. ಸಿಪ್ಪಿ ಅವರು ದೀರ್ಘಕಾಲದ ಅನಾರೋಗ್ಯ ಬಳಿಕ ಮಂಗಳವಾರ ರಾತ್ರಿ ನಿಧನರಾದರು.

93ರ ವರ್ಷದವರಾಗಿದ್ದ ಅವರು, ವೃದ್ಧಾಪ್ಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದರು.

ಶ್ರೀಮಂತ ಸಿಂಧಿಯಾ ಕುಟುಂಬದವರಾಗಿದ್ದ ಸಿಪ್ಪಿ, 1955ರಲ್ಲಿ "ಮರೀನ್ ಡ್ರೈವ್" ಚಿತ್ರದ ಮೂಲಕ ಬಾಲಿವುಡ್‌ಗೆ ಅಬ್ಬರದಿಂದಲೇ ಪ್ರವೇಶಿಸಿದರು. ಅದೇ ವರ್ಷ ಅವರು ಪ್ರದೀಪ್ ಕುಮಾರ್, ಮೀನಾ ಕುಮಾರಿ ಮತ್ತು ದುರ್ಗಾ ಖೋತೆ ತಾರಾಗಣವಿದ್ದ "ಅದಲ್ ಎ ಜಹಾಂಗೀರ್" ನಿರ್ಮಿಸಿದ್ದರು.

50 ಮತ್ತು 60ರ ದಶಕಗಳು ಸಿಪ್ಪಿಯವರ ಅವಿರತ ಚಟುವಟಿಕೆಯ ವರ್ಷಗಳಾಗಿದ್ದವು. ಅವರ ಬ್ಯಾನರುಗಳು ಹಲವಾರು ಸ್ಮರಣೀಯ ಚಿತ್ರಗಳನ್ನು ನೀಡಿದ್ದು, ಅವುಗಳಲ್ಲಿ ಶ್ರೀಮತಿ 420, ಚಂದ್ರಕಾಂತ, ಲೈಟ್ ಹೌಸ್, ಭಾಯಿ ಬೆಹನ್ ಮತ್ತು ಅಂದಾಜ್ ಪ್ರಮುಖವಾದವು. ಈ ಚಿತ್ರಗಳನ್ನು ಅವರು ನಿರ್ಮಿಸಿದ್ದು ಮಾತ್ರವೇ ಅಲ್ಲ, ನಿರ್ದೇಶನವೂ ಅವರದು ಎಂಬ ಹೆಗ್ಗಳಿಕೆಯಿದೆ.

1972ರಲ್ಲಿ ತಮ್ಮ ಪುತ್ರ ರಮೇಶ್ ಸಿಪ್ಪಿ ಜತೆ ಸೇರಿಕೊಂಡು ಜಿ.ಪಿ.ಸಿಪ್ಪಿ ಅವರು ಸೀತಾ ಔರ್ ಗೀತಾ ಚಿತ್ರ ನಿರ್ಮಿಸಿದ್ದರು. ಅದರಲ್ಲಿ ಹೇಮಾ ಮಾಲಿನಿಯವರದು ದ್ವಿಪಾತ್ರಾಭಿನಯ, ಧರ್ಮೇಂದ್ರ ಮತ್ತು ಸಂಜೀವ್ ಕುಮಾರ್ ಅವರಂತಹ ದೊಡ್ಡ ತಾರಾಗಣವೇ ಇತ್ತು.

ಸಿಪ್ಪಿಯವರಿಗೆ ಅದ್ಭುತ ಹೆಸರು, ಯಶಸ್ಸು, ಗಳಿಕೆ ತಂದುಕೊಟ್ಟದ್ದು 1975ರ ಶೋಲೆ. ಅದರಲ್ಲಿ ಧರ್ಮೇಂದ್ರ, ಅಮಿತಾಭ್, ಹೇಮಾ ಮಾಲಿನಿ, ಸಂಜೀವ್ ಕುಮಾರ್ ಮತ್ತು ಅಮ್ಜದ್ ಖಾನ್ ಕೂಡ ಸಾಕಷ್ಟು ಹೆಸರು ಮಾಡಿದರು. ಇದಲ್ಲದೆ 1985ರಲ್ಲಿ ಸಾಗರ್, 1992ರಲ್ಲಿ ರಾಜು ಬನ್ ಗಯಾ ಜೆಂಟಲ್‌ಮನ್ ಹಾದೂ 1995ರಲ್ಲಿ ಜಮಾನಾ ದೀವಾನಾ ಮೊದಲಾದ ಚಿತ್ರಗಳನ್ನೂ ಸಿಪ್ಪಿ ನಿರ್ಮಿಸಿದ್ದರು.

70, 80 ಹಾಗೂ 990ರ ದಶಕಗಳಲ್ಲಿ ಸಿಪ್ಪಿ ಅವರು ನಾಲ್ಕು ಬಾರಿ ಭಾರತೀಯ ಚಲನಚಿತ್ರ ಮತ್ತು ಟಿವಿ ನಿರ್ಮಾಪಕರ ಗಿಲ್ಡ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 1968 ಹಾಗೂ 1982ರಲ್ಲಿ ಎರಡು ಬಾರಿ ಅವರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.