ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪತ್ನಿ ಚಿತ್ರದಲ್ಲಿ ಅಮೀರ್ ನಟನೆ?
ಸುದ್ದಿ/ಗಾಸಿಪ್
Feedback Print Bookmark and Share
 
ಅಮೀರ್ ಖಾನ್ ತುಂಬಾ ಖುಷಿಯಲ್ಲಿದ್ದಾರೆ ಇದಕ್ಕೆ ಕಾರಣ 'ತಾರೆ ಜಮೀನ್ ಪರ್' ಚಿತ್ರಕ್ಕೆ ಪ್ರೇಕ್ಷಕರಿಂದ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ.

ನಟ, ನಿರ್ದೇಶಕ ಅಮೀರ್ ಖಾನ್ ಅವರ ಸಿನಿಮಾ ಸ್ನೇಹಿತ ಹಾಗೂ ಸಹೋದ್ಯೋಗಿಗಳಾದ ವಿದು ವಿನೋದ್ ಛೋಪ್ರಾ, ರಾಕೇಶ್ ಓಪ್ರಕಾಶ್ ಮೆಹ್ರಾ, ರಾಜ್‌ಕುಮಾರ್ ಹಿರಾನಿ ಜಾನ್ ಮ್ಯಾಥ್ಯೂ ಮತಾನ್ ಮತ್ತು ಆದಿತ್ಯ ಛೋಪ್ರಾ ಮುಂತಾದವರೆಲ್ಲರಿಗೂ ಅಮೀರ್ ಅವರ ಮೇಲೆ ಒಳ್ಳೆಯ ಅಭಿಪ್ರಾಯವಿದೆ. ಅಮೀರ್ ಅವರ ಮಹೋನ್ನತ ಸಾಧನೆಗೆ ಆದಿತ್ಯ ಆವರು ಅಮೀರ್‌ಗೆ ಅಭಿನಂದನಾ ಸಂದೇಶವನ್ನು ಕೂಡಾ ಕಳುಹಿಸಿದ್ದರು.

ಯಾವುದೇ ಸಾಹಿತ್ಯವು ನನಗೆ ಪ್ರಚೋದನೆಯುಂಟುಮಾಡಿದರೆ ನನ್ನ ನಿರ್ದೇಶನ ಮತ್ತು ನಟನೆಯನ್ನು ಖಂಡಿತವಾಗಿಯೂ ಮುಂದುವರಿಸುತ್ತೇನೆ, ಅದು ಮುಂದಿನ ವರ್ಷವೂ ಆಗಿರಬಹುದು ಅಥವಾ ಹತ್ತು ವರ್ಷಗಳ ಬಳಿಕವೂ ಆಗಬಹುದು ಆದರೆ ಸಾಹಿತ್ಯವು ಉತ್ತಮವಾಗಿರಬೇಕು ಎನ್ನುತ್ತಾರೆ ಅಮೀರ್.

ಏತನ್ಮಧ್ಯೆ ಅಮೀರ್ ಪತ್ನಿಯು ಚೊಚ್ಚಲ ನಿರ್ದೇಶನವೊಂದನ್ನು ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ.ಈ ಚಿತ್ರದಲ್ಲಿ ತನ್ನ ಅಭಿನಯದ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಯಿಸಿದ ಅಮೀರ್, ನನಗೆ ಅಭಿನಯಿಸಲು ಇಷ್ಟವಿದೆ . ಅದರ ಸಾಹಿತ್ಯವೂ ಕೂಡಾ ತುಂಬಾ ಸೊಗಸಾಗಿದೆ. ಯಾವುದಕ್ಕೂ ನಾನು ಅದರಲ್ಲಿ ಅಭಿನಯಿಸುವುದು ಆಕೆಗೆ ಇಷ್ಟವಿದೆಯೋ ಇಲ್ಲವೋ ಎಂಬುದರ ಬಗ್ಗೆ ತಿಳಿದ ನಂತರವೇ ಇದರ ಕುರಿತು ಹೇಳಬಹುದು ಎಂದರು.

ಎಸ್ಆರ್‌ಕೆ ಅವರೊಂದಿಗೆ ಮಾಡಲು ಯೋಜಿಸಲಾದ ರೋಬೋಟ್ ಚಿತ್ರದಲ್ಲಿ ಶಂಕರ್ ಅವರು ತನ್ನನ್ನು ನಾಯಕನಾಗಿ ನಟಿಸುವಂತೆ ಒತ್ತಾಯಿಸಿದ್ದರು ಎಂಬ ವದಂತಿಗಳನ್ನು ತಳ್ಳಿಹಾಕಿದ ಅಮೀರ್, ಧೂಮ್ 3 ಕುರಿತಾದ ವಿವಾದಗಳನ್ನು ಕೇವಲ ಗಾಳಿಸುದ್ದಿ ಎಂಬುದಾಗಿ ಸ್ಪಷ್ಟಪಡಿಸಿದರು.