ತಾರೆ ಜಮೀನ್ ಪರ್ ತೆರಿಗೆಮುಕ್ತ ಚಿತ್ರ
ಮುಂಬೈ, ಶುಕ್ರವಾರ, 28 ಡಿಸೆಂಬರ್ 2007( 12:06 IST )
'ತಾರೆ ಜಮೀನ್ ಪರ್' ಚಿತ್ರವು ಸುದ್ದಿಯಲ್ಲಿರಲು ಅಮೀರ್ ಖಾನ್ ಅವರ ಪ್ರಥಮ ಅಧಿಕೃತ ನಿರ್ದೇಶನ ಚಿತ್ರ ಎಂಬ ಒಂದೇ ಕಾರಣವಲ್ಲ. ಬಿಡುಗಡೆಯಾದ ಐದೇ ದಿನದಲ್ಲಿ ತೆರಿಗೆ ಮುಕ್ತ ಚಿತ್ರವೆಂದು ಘೋಷಿತವಾದ ಏಕೈಕ ಚಿತ್ರವಾಗಿದೆ.
ಅನೇಕ ಮಕ್ಕಳು ಬಳಲುತ್ತಿರುವ ಕಾಯಿಲೆ ಪದಕುರುಡು(ಡಿಸ್ಲೆಕ್ಸಿಯಾ) ಎಂಬ ಅಸಂಪ್ರದಾಯಿಕ ವಿಷಯವನ್ನು ಒಳಗೊಂಡಿರುವುದರೊಂದಿಗೆ ತಾರೆ ಜಮೀನ್ ಪರ್ ಚಿತ್ರವು ಬಾಕ್ಸ್ ಆಫೀಸಿನಲ್ಲಿ ಭರ್ಜರಿಯಾಗಿ ಸಾಗುತ್ತಿದೆ.
ಬಲವಾದ ಸಾಮಾಜಿಕ ಮತ್ತು ರಾಷ್ಟ್ರೀಯ ಸಂದೇಶವನ್ನು ಸಾರುವ ಚಿತ್ರಗಳು ತೆರಿಗೆ ಮುಕ್ತ ಚಿತ್ರವಾಗುತ್ತಿರುವುದು ಇತ್ತೀಚಿನ ಟ್ರೆಂಡ್ ಆಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಸಂದೇಶ ನೀಡಿದ ಕಾರಣಕ್ಕಾಗಿ ಚಕ್ ದೇ ಇಂಡಿಯಾ ಚಿತ್ರವು ಕೂಡಾ ತೆರಿಗೆ ಮುಕ್ತವಾಗಿತ್ತು.
ಅಲ್ಲದೆ ಲಗೇ ರಹೋ ಮುನ್ನಾಭಾಯ್, ಗುರು, ಪೂಜಾ ಭಟ್ ಅವರ ಧೋಕಾ, ರಂಗ್ ದೆ ಬಸಂತಿ, ಲಕ್ಷ್ಯ, ಕೋಯಿ ಮಿಲ್ ಗಯಾ ಮುಂತಾದ ಚಿತ್ರಗಳು ಕೂಡಾ ತೆರಿಗೆ ರಹಿತ ಚಿತ್ರಗಳೆಂದು ಘೋಷಿಸಲ್ಪಟ್ಟಿದ್ದವು.ಅಲ್ಲದೆ ಅನುರಾಗ್ ಕಶ್ಯಪ್ ಅವರ ಹನುಮಾನ್ ರಿಟರ್ನ್ಸ್ ಬಿಡುಗಡೆ ಮುನ್ನವೇ ತೆರಿಗೆಮುಕ್ತ ಚಿತ್ರವೆಂದು ಘೋಷಿಸಲ್ಪಟ್ಟಿದೆ.