ಭಾರತೀಯ 2ಡಿ ಆನಿಮೇಶನ್ ಚಿತ್ರ ರಿಟರ್ನ್ ಆಫ್ ಹನುಮಾನ್ ನ್ನು ಟೂನ್ಸ್ ಆನಿಮೇಶನ್ ಇಂಡಿಯಾ ಪ್ರೈ.ಲಿ. ಶುಕ್ರವಾರ ಬಿಡುಗಡೆ ಮಾಡಿದೆ.
ಈ ಚಿತ್ರವು ಭಾರತದ ಮೊದಲ 2ಡಿ ಆನಿಮೇಟೆಡ್ ಚಿತ್ರದ ಉತ್ತರಭಾಗವಾಗಿದೆ. 90 ನಿಮಿಷದ ಈ ಚಿತ್ರವನ್ನು ಟೂನ್ಸ್ ಆನಿಮೇಶನ್ ಮತ್ತು ಪರ್ಸೆಪ್ಟ್ ಪಿಕ್ಚರ್ ಕಂಪನಿ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.
ಈ ಚಿತ್ರವು ದೇಶದಾದ್ಯಂತ ಸುಮಾರು 370 ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.ಅನುರಾಗ್ ಕಶ್ಯಪ್ ನಿರ್ದೇಶನದ ಪ್ರಸಕ್ತ ಹಿಂದಿ ಆವೃತ್ತಿಯಲ್ಲಿರುವ ಚಿತ್ರವನ್ನು ಭಾರತದ ಇತರ ಪ್ರಾದೇಶಿಕ ಭಾಷೆಗಳಿಗೆ ಶೀಘ್ರದಲ್ಲಿ ಡಬ್ಬಿಂಗ್ ಮಾಡಲಾಗುತ್ತದೆ ಎಂದು ಹೇಳಲಾಗಿದೆ.
ಇಂದಿನ ಜಗತ್ತಿನಲ್ಲಿ ಭಾರತೀಯ ಪುರಾಣ ಕಥೆಗಳು ಹೆಚ್ಚಿನ ಉತ್ತಮ ಅಂಶಗಳನ್ನು ಒಳಗೊಂಡಿದ್ದು, ಸಂಸ್ಕೃತಿಯ ಅಗತ್ಯತೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಟೂನ್ಸ್ ಆನಿಮೇಶನ್‌ನ ಮುಖ್ಯ ಕಾರ್ಯ ನಿರ್ವಾಹಕ ಪಿ.ಜಯಕುಮಾರ್ ತಿಳಿಸಿದ್ದಾರೆ.
ಹನುಮಾನ್ 3 ಎಂಬ 3ಡಿ ಆನಿಮೇಶನ್ ಚಿತ್ರವನ್ನು ನಿರ್ಮಿಸಲು ಟೂನ್ಸ್ ಮತ್ತು ಪಿಪಿಸಿ ಮತ್ತೊಮ್ಮೆ ಕೈಜೋಡಿಸಲಿದೆ.