'ರೇಸ್'ನಲ್ಲಿ ಆಕ್ಷನ್ ಕಿಂಗ್ ಸೈಫ್
ಮುಂಬೈ, ಶನಿವಾರ, 5 ಜನವರಿ 2008( 12:03 IST )
ತನ್ನ ಮುಂಬರುವ ಚಿತ್ರ ರೇಸ್ನಲ್ಲಿ ಸೈಫ್ ಅಲಿ ಖಾನ್, ಆಕ್ಷನ್ ಕಿಂಗ್ ಆಗಿ ಬದಲಾಗಿದ್ದು, ಅತ್ಯಂತ ಅಪಾಯಕಾರಿ ಮತ್ತು ಸಾಹಸ ಪ್ರದರ್ಶನಗಳನ್ನು ತಾನೇ ಮಾಡುವುದಾಗಿ ಚೋಟಾ ನವಾಬ್ ಹೇಳಿದ್ದಾರೆ.
ರೇಸ್ ಚಿತ್ರವು ಅನೇಕ ಅಪಾಯಕಾರಿ ಸ್ಟಂಟ್ಗಳನ್ನು ಹೊಂದಿದ್ದು, ಇವುಗಳೆಲ್ಲವನ್ನೂ ಅತ್ಯಂತ ಅಪಾಯಕಾರಿ ಹಾಗೂ ನೈಜತೆ ಇರುವಂತೆ ಚಿತ್ರೀಕರಣ ಮಾಡಬೇಕಾಗುತ್ತದೆ. ಒಂದು ದೃಶ್ಯದಲ್ಲಿ ಸೈಫ್ 22 ಅಂತಸ್ತಿನ ಮಹಡಿಯಿದ ಜಿಗಿಯುತ್ತಾರೆ. ಈ ಚಿತ್ರವನ್ನು ಸ್ವತಃ ತಾನೇ ಮಾಡಲು ಸೈಫ್ ಇಚ್ಛಿಸುತ್ತಾರೆ ಎಂದು ಚಿತ್ರವನ್ನು ನಿರ್ದೇಶಿಸುತ್ತಿರುವ ಅಬ್ಬಾಸ್ ಮುಸ್ತಾನ್ ಹೇಳುತ್ತಾರೆ.
ಸೈಫ್ ಇಂತಹ ಸ್ಟಂಟ್ಗಳನ್ನು ಮಾಡುತ್ತಿರುವುದು ನಮಗೆ ಅತ್ಯಂತ ಸಂತೋಷವನ್ನು ನೀಡಿದೆ. ಇಂತಹ ದೃಶ್ಯಗಳನ್ನು ಮಾಡುವಾಗಿ ಸೆಟ್ನಲ್ಲಿರುವ ಎಲ್ಲರೂ ಅತ್ಯಂತ ಭಯಭೀತರಾಗುತ್ತಾರೆ ಎಂದು ನಿರ್ಮಾಪಕ ರಮೇಶ್ ತೌರಾನಿ ಹೇಳುತ್ತಾರೆ.
ಏನೇ ಆದರೂ ಚಿತ್ರೀಕರಣದ ಸಂದರ್ಭದಲ್ಲಿ ನಿರ್ಮಾಪಕರು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರು ಮತ್ತು ಆಂಬುಲೆನ್ಸ್ಗಳು ಸೆಟ್ನಲ್ಲಿ ಸಿದ್ಧವಿದೆ.