ರಾಣಿ ಜೊತೆ ಅಭಿನಯಿಸಲಿರುವ ಶಾಹಿದ್
ಮುಂಬೈ, ಶನಿವಾರ, 5 ಜನವರಿ 2008( 12:07 IST )
ಬಾಲಿವುಡ್ ನಟಿ ರಾಣಿ ಮುಖರ್ಜಿ ಕೈಯಲ್ಲಿ ಸದ್ಯಕ್ಕೆ ಕುನಾಲ್ ಕೋಹ್ಲಿ ನಿರ್ದೇಶನದ ಒಂದು ಚಿತ್ರ ಮಾತ್ರವೇ ಇದೆ. ಆದರೆ ರಾಣಿ ಇನ್ನೊಂದು ಚಿತ್ರ ಮಾಡಲಿದ್ದಾರೆ ಎಂದು ರಹಸ್ಯ ಮಾಧ್ಯಮಗಳಿಂದ ತಿಳಿದುಬಂದಿದೆ.
ಅನುರಾಗ್ ಸಿಂಗ್ ನಿರ್ದೇಶನದ ಚಿತ್ರದಲ್ಲಿ ಶಾಹಿದ್ ಕಪೂರ್ ಅವರೊಂದಿಗೆ ಜೊತೆಯಾಗಿ ರಾಣಿ ನಟಿಸಲಿದ್ದು, ಈ ಚಿತ್ರವು ಮಾರ್ಚ್‌ನಲ್ಲಿ ಸೆಟ್ಟೇರಲಿದೆ.
ವರ್ಷಗಳ ಹಿಂದೆ ಈ ಜೋಡಿಗಳಿಬ್ಬರ ಪೆಪ್ಸಿ ಜಾಹೀರಾತಿನ ನಂತರ ಮೊದಲ ಬಾರಿಗೆ ರಾಣಿ, ಶಾಹಿದ್ ಕಪೂರ್‌ನೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಳ್ಳಲಿದೆ. ಜಾಹೀರಾತಿನಲ್ಲಿ ಸ್ಟಾರ್ ಸಟ್ಕ್ ಆಗಿ ಅಭಿನಯಿಸುತ್ತಿದ್ದ ಶಾಹಿದ್ ಆ ಸಮಯದಲ್ಲಿ ಚಿತ್ರರಂಗಕ್ಕೆ ಬರಲು ಹೆಣಗಾಡುತ್ತಿದ್ದ ಹೊಸಬರಲ್ಲಿ ಒಬ್ಬರಾಗಿದ್ದರು. ಒಂದುವೇಳೆ ಈ ಯೋಜನೆಯು ಯಶಸ್ವಿಯಾದಲ್ಲಿ ಶಾಹಿದ್ ಜೀವನ ಶೈಲಿಯನ್ನೇ ಬದಲಾಯಿಸಲಿದೆ.
ತನ್ನ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ರಾಣಿ ಮತ್ತು ಶಾಹಿದ್ ಮುಖ್ಯಪಾತ್ರದಲ್ಲಿ ಜೊತೆಯಾಗಿ ನಟಿಸುವುದನ್ನು ಅನುರಾಗ್ ಖಚಿತಪಡಿಸಿದ್ದಾರೆ ಎಂದು ಹೇಳಿದರು.ನಾನು ಅನುರಾಗ್ ಯಶಸ್ಸಿನ ಬಗ್ಗೆ ಅತ್ಯಂತ ಸಂತೋಷಗೊಂಡಿದ್ದೇನೆ, ಚಿತ್ರ ಯಾವಾಗ ಸೆಟ್ಟೇರಲಿದೆ ಎಂದು ನನಗೆ ಗೊತ್ತಿಲ್ಲ ಅದರೆ ಬಗೆಗ ಅವರನ್ನೇ ಕೇಳಬೇಕು ಎಂದು ಮ್ ತೋ ಮೊಹಾಬತ್ ಕರೇಗಾ, ಜರ್ಮ್ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಹಿರಿಯ ನಿರ್ಮಾಪಕ ಅನುರಾಗ್ ಸಿಂಗ್ ತಂದೆ ಕೆ.ಪಿ.ಸಿಂಗ್ ಹೇಳಿದರು.
ರಾಕೇಶ್ ರೋಶನ್ ಅವರೊಂದಿಗೆ ಅನುರಾಗ್ ಸಿಂಗ್ ಕೆಲವು ವರ್ಷ ಕೆಲಸ ಮಾಡಿದ್ದರು. ನಂತರ ಧೂಮ್ 2ನಲ್ಲಿ ಸಹಾಯಕ ನಿರ್ದೇಶಕನಾಹಿಯೂ ಕಾರ್ಯನಿರ್ವಹಿಸಿದ್ದರು.