'ಗೋಲ್ಡನ್ ಹಾರ್ಟ್' ಹುಡುಗಿಯ ಸತ್ಕಾರ ಕೂಟ
ಮುಂಬಯಿ, ಸೋಮವಾರ, 7 ಜನವರಿ 2008( 13:35 IST )
ಬಾಲಿವುಡ್ ನಟಿ ಮಲ್ಲಿಕಾ ಶೆರಾವತ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ.
ತನ್ನ 2008ರ ಮೊದಲ ಸಿನಿಮಾ 'ಮಾನ್ ಗಯೇ ಮುಗಾಲ್ ಎ ಅಜಮ್' ಈ ವರ್ಷದ ಮಧ್ಯದಲ್ಲಿ ಬಿಡುಗಡೆಗೊಳ್ಳಲು ಸಿದ್ಧವಾಗಿ ನಿಂತಿದೆ. ಯಾವುದೇ ವಿವಾದಗಳಿಲ್ಲದೆ ಉತ್ತಮವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತಿದ್ದರೂ ಕೂಡಾ ಮಲ್ಲಿಕಾ ಬಗ್ಗೆ ಮಾಧ್ಯಮಗಳು ಏನಾದರೊಂದು ಸುದ್ದಿ ಮಾಡುತ್ತಿರುತ್ತವೆ.
'ಮಾನ್ ಗಯೇ ಮುಗಾಲ್ ಎ ಅಜಮ್' ಚಿತ್ರದ ಕೊನೆಯ ಭಾಗದ ಚಿತ್ರೀಕರಣ ಪೂರ್ಣಗೊಂಡ ನಂತರ ಚಿತ್ರದ ಎಲ್ಲಾ ತಂಡದವರನ್ನು ಒಳಗೊಂಡು ಸುಮಾರು 120 ಮಂದಿಗೆ ಮಲ್ಲಿಕಾ ಸತ್ಕಾರ ಕೂಟವನ್ನು ನೀಡಿದ್ದರು.
ತಂಡದಲ್ಲಿ ಎಲ್ಲರೊಂದಿಗೆ ಕೆಲಸ ಮಾಡಿದ್ದು ತನಗೆ ಖುಷಿ ನೀಡಿದ್ದು, ಮತ್ತು ಇದಕ್ಕಾಗಿ ಎಲ್ಲರಿಗೂ ಧನ್ಯವಾದವನ್ನು ಹೇಳಲು ಇಚ್ಚಿಸುತ್ತೇನೆ. ಈ ಸಂತೋಷವನ್ನು ಸಂಭ್ರಮಿಸುವುದಕ್ಕಾಗಿಯೇ ಸತ್ಕಾರ ಕೂಟವನ್ನು ಆಯೋಜಿಸಿದ್ದೇನೆ ಎಂದು ಮಲ್ಲಿಕಾ ಖುಷಿಯಿಂದ ಹೇಳುತ್ತಾರೆ.ಇದರಿಂದ ನಿಜವಾಗಿಯೂ ತಿಳಿಯುತ್ತದೆ ಮಲ್ಲಿಕಾ 'ಗೋಲ್ಡನ್ ಹಾರ್ಟ್' ಹುಡುಗಿ ಎಂದು.
ಸತ್ಕಾರಕೂಟ ನೀಡುವ ಮೂಲಕ ಮಲ್ಲಿಕಾ ತಂಡದ ಎಲ್ಲರನ್ನೂ ಖುಷಿಗೊಳಿಸಿದ್ದಾರೆ. ಅದೊಂದು ಉತ್ತಮ ಕೂಟವಾಗಿದ್ದು, ನಾವೆಲ್ಲರೂ ತುಂಬಾ ಸಂತೋಷಗೊಂಡಿದ್ದೆವು ಎಂದು ಇದರ ಕುರಿತಾಗಿ ಚಿತ್ರ ನಿರ್ಮಾಪಕ ರತನ್ ಜಿನ್ ಹೇಳುತ್ತಾರೆ.