ಶಾಹಿದ್ ಕರೀನಾ ಜೋಡಿಯ ಜಬ್ ವೀ ಮೆಟ್ ಚಿತ್ರವನ್ನು ಇಷ್ಟಪಡದವರು ಯಾರಿಲ್ಲ? 2007ರಲ್ಲಿನ ಅತ್ಯುತ್ತಮ ಚಿತ್ರವಾಗಿದ್ದ ಜಬ್ ವಿ ಮೆಟ್ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಈ ನಾಲ್ಕು ಭಾಷೆಗಳಲ್ಲಿ ಮೋಸರ್ ಬೇರ್‌ನಿಂದ ಪುನರ್‌ನಿರ್ಮಾಣಗೊಳ್ಳಲಿದೆ.
ವಾಸ್ತವವಾಗಿ ಮೋಸರ್ ಬೇರ್ ಮತ್ತು ಜಬ್ ವಿ ಮೆಟ್ ನಿರ್ಮಾಪಕರಾದ ಅಷ್ಟ ವಿನಾಯಕ ಸಿವಿಶನ್ ಈಗಾಗಲೇ ಕೈಜೋಡಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದೆ.ನಾಲ್ಕು ಆವೃತ್ತಿಯಲ್ಲಿ ಕಲಾವಿದರು ಮತ್ತು ನಿರ್ದೇಶಕರು ಯಾರೆಂದು ಇನ್ನೂ ತೀರ್ಮಾನವಾಗಿಲ್ಲ.
ಏತನ್ಮಧ್ಯೆ, ಮೋಸರ್ ಬೇರ್ 2008ರ ಹಿಂದಿ ಚಿತ್ರದಲ್ಲಿ ತನ್ನ ಮೊದಲ ಹೆಜ್ಜೆ ಇಡಲು ಸಿದ್ಧವಾಗಿ ನಿಂತಿದೆ. ಮೋಸರ್ ಬೇರ್‌ನ ಮೊದಲ ನಿರ್ಮಾಣದ, ಸಮರ್ ಖಾನ್ ನಿರ್ದೇಶಿಸುತ್ತಿರುವ, ಶೌರ್ಯ ಚಿತ್ರವು ಎಪ್ರಿಲ್ 4ರಂದು ತೆರೆ ಮೇಲೆ ಮೂಡಲಿದೆ. ಅಂತೆಯೇ ಪಂಕಜ್ ಅಡ್ವಾಣಿ ನಿರ್ದೇಶನದ ಶಂಕರ್ ಸಿಟಿ ಚಿತ್ರವು ಮೇ ಅಥವಾ ಜೂನ್‌ನಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ.
ಈ ಚಿತ್ರವು, ಶಂಕರ್ ಸಿಟಿ ರಿಮಿ ಸೇನ್, ಅನುಪಮ್ ಖೇರ್, ಚಂಕೀ ಪಾಂಡೆ ಮುಂತಾದ ತಾರಾಗಣವನ್ನೊಳಗೊಂಡ ನಿರಂತರ ಎರಡು ಗಂಟೆಗಳ ಚಿತ್ರವಾಗಿದ್ದು, ಅನುಭವ್ ಸಿನ್ಹಾ ನಡುವಿನ ಜಂಟಿ ಲಾಭ ನಿರ್ಮಾಣದ ಚಿತ್ರವಾಗಿದೆ.