ಸ್ಟಂಟ್ ಪಾತ್ರಗಳಿಂದ ದೂರವಿರುತ್ತೇನೆ:ಹೃತಿಕ್
ಮುಂಬಯಿ, ಸೋಮವಾರ, 14 ಜನವರಿ 2008( 13:59 IST )
ಗಂಭೀರ ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಬಾಲಿವುಡ್ ನಟ ಹೃತಿಕ್ ರೋಶನ್, ತಾನು ಸ್ಟಂಟ್ ಪಾತ್ರಗಳಿಂದ ಸದ್ಯಕ್ಕೆ ದೂರವಿರುತ್ತೇನೆ ಎಂದು ಹೇಳಿದ್ದಾರೆ.
ನಾನು ಸ್ವಲ್ಪ ಸಮಯ ಜಾಗ್ರತೆಯಿಂದಿರಬೇಕಾಗುತ್ತದೆ. ಆಕ್ಷನ್ ದೃಶ್ಯಗಳನ್ನು ಮತ್ತು ಸ್ಟಂಟ್ ಪಾತ್ರಗಳಿಂದ ಸ್ವಲ್ಪ ಸಮಯ ದೂರವಿರುತ್ತೇನೆ. ಈ ಬಗ್ಗೆ ನನ್ನ ದೇಹವು ಮುನ್ನೆಚ್ಚರಿಕೆ ನೀಡಿದೆ ಎಂದು ಕಳೆದವಾರ 34ನೇ ವರ್ಷಕ್ಕೆ ಕಾಲಿಟ್ಟ ಹೃತಿಕ್ ಹೇಳುತ್ತಾರೆ.
ತನ್ನ ಹುಟ್ಟುಹಬ್ಬಕ್ಕೆ ಅನೇಕ ಶುಭಾಶಯ ಪತ್ರಗಳು ಬಂದಿದ್ದು, ಅನೇಕ ಅಭಿಮಾನಿಗಳ ಶುಭಾಶಯಗಳಿಂದ ಆ ದಿನವೆಲ್ಲ ನಾನು ಭಾವಪರವಶನಾಗಿದ್ದೆ ಎಂದು ಹೃತಿಕ್ ನಾಚಿಕೊಳ್ಳುತ್ತಾ ಹೇಳುತ್ತಾರೆ.
ಕಳೆದ ವರ್ಷ ಹುಟ್ಟುಹಬ್ಬದ ದಿನ ನನ್ನ ಕುಟುಂಬದವರೊಂದಿಗೆ ಸೇರಲು ನನಗೆ ಸಮಯ ಸಿಕ್ಕಿರಲಿಲ್ಲ. ಈ ವರ್ಷ ಗಾಯದಿಂದಾಗಿ ನನ್ನ ಪತ್ನಿ ಮತ್ತು ಮಗನ ಜೊತೆ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಲು ಅವಕಾಶ ದೊರೆತಿದೆ ಎಂದಿದ್ದಾರೆ ಹೃತಿಕ್.