ಶಾರುಖ್ ಅತಿ ಹೆಚ್ಚು ತೆರಿಗೆ ಪಾವತಿದಾರ
ಮುಂಬಯಿ, ಸೋಮವಾರ, 14 ಜನವರಿ 2008( 13:55 IST )
ಬಾಲಿವುಡ್‌ನಲ್ಲೀಗ ಹಣದ ಮಳೆಯೇ ಸುರಿಯುತ್ತಿದೆ. ಆದರೆ,ಬಾಲಿವುಡ್ ಉದ್ಯಮದಲ್ಲಿ ಪ್ರಸಿದ್ಧ ನಟರು ಎಷ್ಟು ಗಳಿಸುತ್ತಾರೆ ಎಂಬುದು ಮುಖ್ಯವಲ್ಲ ಬದಲಾಗಿ ಅವರು ಎಷ್ಟು ತೆರಿಗೆ ಪಾವತಿಸುತ್ತಾರೆ ಎಂಬುದು ಮುಖ್ಯವಾಗಿದೆ.
ಮೂಲಗಳು ಪ್ರಕಾರ, ಡಿಸೆಂಬರ್ 2007ರಲ್ಲಿ 27 ಕೋಟಿ ಮುಂಗಡ ತೆರಿಗೆ ಪಾವತಿ ಮಾಡುವ ಮೂಲಕ, ಶಾರುಖ್ ಖಾನ್ ಅತಿ ಹೆಚ್ಚು ತೆರಿಗೆ ಪಾವತಿಸುವ ನಟ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.ಪಾವತಿಸಿರುವ ತೆರಿಗೆಯು ಕಳೆದ ವರ್ಷಕ್ಕಿಂತ 9 ಕೋಟಿ ಹೆಚ್ಚಳವಾಗಿದೆ.
ಶಾರುಖ್ ನಂತರ, ಅತಿ ಹೆಚ್ಚು ತೆರಿಗೆ ಪಾವತಿಸುವ ನಟರ ಪಟ್ಟಿಯಲ್ಲಿ, ಅಕ್ಷಯ್ ಕುಮಾರ್ ಎರಡನೇ ಸ್ಥಾನದಲ್ಲಿದ್ದಾರೆ. ಅಕ್ಷಯ್ ಪಾವತಿ ಮಾಡಿದ ಮುಂಗಡ ತೆರಿಗೆ ಏಳು ಕೋಟಿ.
ಬಚ್ಚನ್ ತ್ರಯರಾದ ಅಮಿತಾಬ್, ಅಭಿಷೇಕ್ ಮತ್ತು ಐಶ್ವರ್ಯಾ ಬಚ್ಚನ್, ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದು, ಬಿಗ್ ಬಿ 1.8 ಕೋಟಿ ತೆರಿಗೆ ಪಾವತಿಸಿದ್ದರೆ, ಅಭಿಷೇಕ್ 3.7 ಕೋಟಿ ಅಂತೆಯೇ ಐಶ್ವರ್ಯಾ ಬಚ್ಚನ್ 1.6 ಕೋಟಿ ತೆರಿಗೆ ಪಾವತಿಸಿದ್ದಾರೆ.
ಬಾಲಿವುಡ್‌ನ ಹಿಮೇಶ್ ರೇಶಾಮಿಯಾ ಕೂಡಾ 2.5 ಕೋಟಿ ಮುಂಗಡ ತೆರಿಗೆ ಪಾವತಿಸಿದ್ದಾರೆ.