ರಾಕ್‌ಬ್ಯಾಂಡ್ 'ಪರಿಕರ್ಮ'ದಲ್ಲಿ ಸೈಫ್
ಮುಂಬಯಿ, ಬುಧವಾರ, 16 ಜನವರಿ 2008( 13:38 IST )
ಕೆಲವೇ ಸಮಯಗಳ ಹಿಂದೆ ಬಾಲಿವುಡ್ ನಟ ಸೈಫ್ ಅಲಿಕಾನ್ ತನ್ನ ಪ್ರೇಮ ಜೀವನದ ಕುರಿತಾಗಿ ಸುದ್ದಿಯಲ್ಲಿದ್ದರು. ಆದರೆ ಈಗ ಈ ನಿರಾಡಂಬರ ನಟ, ತಾನು ಪ್ರಖ್ಯಾತಿಯ ನಟನಾಗಬಲ್ಲೆ ಎಂಬುದನ್ನು ಸಾಧಿಸಲು ಸಿದ್ಧರಾಗಿದ್ದಾರೆ.
ರೇಸ್ ಚಿತ್ರದಲ್ಲಿ ತನ್ನ ನಯವಾದ ಮತ್ತು ಸೆಕ್ಸೀ ಲುಕ್‌ನಿಂದ ಎಲ್ಲರ ಗಮನಸೆಳೆದಿದ್ದ ಸೈಫ್. ಈ ವಾರಾಂತ್ಯದಲ್ಲಿ ರಾಕ್ ಬ್ಯಾಂಡ್ ಪರಿಕರ್ಮದಲ್ಲಿ ನಿರ್ವಹಣೆ ಮಾಡಲಿದ್ದಾರೆ.
ಪರಿಕರ್ಮದಲ್ಲಿ ಸೈಫ್ ಈ ಮೊದಲು ಕೂಡಾ ನಿರ್ವಹಣೆ ಮಾಡಿದ್ದರು. ಈ ಪ್ರದರ್ಶನವು ಅನೇಕ ಕ್ಲಾಸಿಕ್ ರಾಕ್‌ಗಳನ್ನು ಹೊಂದಿವೆ.
ಪರಿಕರ್ಮದಲ್ಲಿ ಹೊಸ ಅವತಾರದೊಂದಿಗೆ ಸೈಫ್ ಅಲಿಕಾನ್ ಖಂಡಿತವಾಗಿಯೂ ಅಂತರಾಷ್ಟ್ರೀಯ ಕಲಾವಿದರಿಗೆ ಕಠಿಣ ಪರಿಸ್ಥಿತಿಯನ್ನು ನೀಡುವ ಸಾಧ್ಯತೆಯಿದೆ.