ಮುಂಬಯಿ ಫೆಸ್ಟ್ ಚಾಲನೆಗೆ ಹೇಮಾ 'ಗಣೇಶ ವಂದನೆ'
ಮುಂಬಯಿ, ಶನಿವಾರ, 19 ಜನವರಿ 2008( 11:00 IST )
ಬಾಲಿವುಡ್ ನಟಿ ಮತ್ತು ಭರತನಾಟ್ಯ ವಿದುಷಿ ಹೇಮಾ ಮಾಲಿನಿ ಅವರ ಗಣೇಶ ವಂದನೆ ನೃತ್ಯ ಕಾರ್ಯಕ್ರಮದ ಮೂಲಕ ಮುಂಬಯಿ ಉತ್ಸವಕ್ಕೆ ಶುಕ್ರವಾರ ರಾತ್ರಿ ಅದ್ದೂರಿಯ ಚಾಲನೆ ದೊರೆಯಿತು.
ನಾಲ್ಕನೇ ವರ್ಷದ ಮುಂಬಯಿ ಉತ್ಸವವು ಫೆಬ್ರವರಿ 3ರವರೆಗೆ ಮುಂದುವರಿಯಲಿದ್ದು, ಜಪಾನ್, ಜರ್ಮನಿ, ಆಸ್ಟ್ರೇಲಿಯಾ, ಅಮೆರಿಕ ಮತ್ತು ಸ್ಕಾಟ್ಲೆಂಡ್ ಮುಂತಾದ ರಾಷ್ಟ್ರಗಳ ಕಲಾವಿದರು ಭಾಗವಹಿಸಲಿದ್ದಾರೆ.
ಟೂರಿಸಂ ಕೋಆಪರೇಟಿವ್ ಮೂಲಕ ಆಯೋಜಿಸಲಾಗುತ್ತಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಂಸ್ಥೆಗಳು ಭಾಗವಹಿಸುತ್ತಿದ್ದು, ವಿಶ್ವದರ್ಜೆಯ ಕಾರ್ಯಕ್ರಮವಾಗಿ ಇದು ಮೂಡಿಬರುತ್ತಿದೆ.