ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಪದ್ಮಶ್ರೀ ಪ್ರಶಸ್ತಿ ಅದ್ಭುತ, ಅಚ್ಚರಿ: ಮಾಧುರಿ ಹರ್ಷ
ಸುದ್ದಿ/ಗಾಸಿಪ್
Feedback Print Bookmark and Share
 
ಪದ್ಮಶ್ರೀ ಗೌರವಕ್ಕೆ ವಿನೀತಳಾಗಿದ್ದೇನೆ ಎಂದು ತಿಳಿಸಿರುವ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್, ಈ ಘೋಷಣೆಯು ಅದ್ಭುತ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದ್ದಾರೆ.

ವಿವಾಹದ ಬಳಿಕ ವಾಸವಾಗಿರುವ ಅಮೆರಿಕದ ಡೇನ್ವರ್‌ನಿಂದ ಕಳುಹಿಸಿದ ಹೇಳಿಕೆಯಲ್ಲಿ ಮಾಧುರಿ, ಹಲವಾರು ವರ್ಷಗಳಿಂದ ನನ್ನ ಯಶಸ್ಸಿಗೆ ಕಾರಣರಾದ ಎಲ್ಲರಿಗೂ ನಾನು ಅಭಿನಂದಿಸಲು ಬಯಸುತ್ತೇನೆ. ಅವರ ಪ್ರಯತ್ನದ ಪ್ರತಿಬಿಂಬವೇ ಈ ಪ್ರಶಸ್ತಿ ಎಂದು ಹೇಳಿದ್ದಾರೆ.

ಈ ಗೌರವಕ್ಕೆ ನನ್ನನ್ನು ಅರ್ಹಳೆಂದು ಆರಿಸಿದ ಭಾರತ ಸರಕಾರವನ್ನು ಹಾಗೂ ವಿಶ್ವಾದ್ಯಂತ ಕಲೆ ಮತ್ತು ಸಿನಿಮಾವನ್ನು ಪೋಷಿಸುತ್ತಿರುವವರನ್ನು ನಾನು ಅಭಿನಂದಿಸುತ್ತೇನೆ. ಈ ಅವಕಾಶ ನೀಡಿದ್ದಕ್ಕೆ ನಾನು ತಾಯ್ನಾಡಿಗೆ ಋಣಿಯಾಗಿದ್ದೇನೆ ಎಂದು ಆಕೆ ಹೇಳಿದ್ದಾರೆ.