ಅಶುತೋಷ್ ಗೌರಿಕರ್ ನಿರ್ದೇಶನದ ಐತಿಹಾಸಿಕ ಹಿನ್ನಲೆಯುಳ್ಳ ಜೋಧಾ-ಅಕ್ಬರ್ ಚಿತ್ರಕ್ಕೆ ಎಂದಿನಂತೆ ಪ್ರಾರಂಭಿಕ ವಿಘ್ನ ಬಂದಿದೆ. ರಾಜ್ಯದಲ್ಲಿ ಜೋಧಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ರಾಜಸ್ತಾನದಲ್ಲಿ ರಜಪೂತ ಸಮುದಾಯ ಬೆದರಿಕೆ ಹಾಕಿದೆ.
ಫೆಬ್ರವರಿ 15 ರಂದು ಬಿಡುಗಡೆಯಾಗಲಿರುವ ಜೋಧಾ ಚಿತ್ರದಲ್ಲಿ ಗೌರಿಕರ್ ಇತಿಹಾಸವನ್ನು ತಿರುಚಿ ಚಿತ್ರ ನಿರ್ಮಿಸಿದ್ದಾರೆ ಎಂದು ರಜಪೂತ್ ಸಭಾದ ನರೇಂದ್ರ ಸಿಂಗ್ ರಾಜವತ್ ಆಪಾದಿಸಿದ್ದು, ಚಿತ್ರದಲ್ಲಿ ಜೋಧಾಬಾಯಿಯನ್ನು ಮೊಘಲ್ ಚಕ್ರವರ್ತಿ ಜಲಾಲುದ್ದಿನ್ ಅಕ್ಬರ್‌ನ ಪತ್ನಿ ಎಂದು ಹೇಳಲಾಗಿದ್ದು ವಾಸ್ತವಿಕವಾಗಿ ಇದು ತಪ್ಪು. ಜೋಧಾಬಾಯಿ ಅಂಬರ್‌ನ ಮಹಾರಾಜ ಭರ್ಮಲ್ ಮಗಳಲ್ಲ. ವಾಸ್ತವಿಕವಾಗಿ ಜೋಧಾಬಾಯಿ ಮಾರವಾರ್‌ನ ಮೋಟಾರಾಜ ಉದಯಸಿಂಗ್‌ನ ಪುತ್ರಿ ಎಂದು ವಾದಿಸಿದ್ದಾರೆ.
ಮೊಟರಾಜಾ ಉದಯ ಸಿಂಗ್‌ನ ಪುತ್ರಿಯಾದ ಜೋಧಾಬಾಯಿಯನ್ನು ಚಕ್ರವರ್ತಿ ಅಕ್ಬರ್‌ನ ಮಗ ಸಲೀಂ ಅಲಿಯಾಸ ಜಹಾಂಗೀರ್‌ಗೆ ಮದುವೆ ಮಾಡಿಕೊಡಲಾಗಿತ್ತು. ಶಹಾಜಹಾನ್; ಜೋಧಾಬಾಯಿಯ ಮಗ ಎಂದು ರಾಜಾವತ್ ಆಪಾದಿಸಿದ್ದಾರೆ.
ಈ ರೀತಿ ಐತಿಹಾಸಿಕ ವಾಸ್ತವಿಕತೆಗಳನ್ನು ತಿರುಚುವುದರಿಂದ ರಜಪೂತ ಸಮುದಾಯದ ಭಾವನೆಗಳಿಗೆ ದಕ್ಕೆಯುಂಟಾಗುತ್ತದೆ. ಆದ್ದರಿಂದ ನ್ಯಾಯಾಲಯ ಇತಿಹಾಸವನ್ನು ತಿರುಚಿದ ಗೌರಿಕರ್ ಚಿತ್ರದ ಪ್ರದರ್ಶನವನ್ನು ನ್ಯಾಯಾಲಯ ತಡೆಯಬೇಕು ಎಂದು ಅವರು ಹೇಳಿದರು.