ನಟನೆಗೆ ಅಗತ್ಯವಿದ್ದಲ್ಲಿ ಬಟ್ಟೆ ಕಳಚಲು ಸಿದ್ದ -ನೇಹಾ
ಮುಂಬೈ, ಸೋಮವಾರ, 4 ಫೆಬ್ರವರಿ 2008( 15:32 IST )
ಮಿಥ್ಯ ಚಿತ್ರದಲ್ಲಿ ಭೂಗತ ಲೋಕದ ದೊರೆಯ ಪತ್ನಿಯಾಗಿ ನಟಿಸುತ್ತಿರುವ ನೇಹಾ ಧೂಪಿಯಾ ನಟನೆಗೆ ಅಗತ್ಯವಾದಲ್ಲಿ ಬಟ್ಟೆ ಕಳಚಲು ಸಿದ್ದ ಎಂದು ಘೋಷಿಸಿದ್ದಾರೆ.
ನಟನೆಗೆ ಅಗತ್ಯವಾದಲ್ಲಿ ಅಭಿನಯಕ್ಕೆ ನ್ಯಾಯ ದೊರೆಯುವುದಾದಲ್ಲಿ ಖಚಿತವಾಗಿ ಬಟ್ಟೆಯನ್ನು ಕಳಚುವುದಕ್ಕೆ ನಾನು ಸಿದ್ದ ಎನ್ನುವ ಹೇಳಿಕೆ ನೀಡಿದ್ದಾರೆ.
ಆದರೆ ಇದನ್ನು ಭಾರತೀಯರು ಹೇಗೆ ಸ್ವೀಕರಿಸುತ್ತಾರೆ ಎನ್ನುವುದು ನನಗೆ ಗೊತ್ತಿಲ್ಲ. ಬ್ರೆಜಿಲ್ ಅಥವಾ ಅಮೆರಿಕ ಇದೊಂದು ಸಾಮಾನ್ಯ ಸಂಗತಿಯಾಗಿದೆ. ದೇಹಪ್ರದರ್ಶನ ಸಮರ್ಪಕವಾಗಿರದಿದ್ದಲ್ಲಿ ತಪ್ಪುಮಾಹಿತಿ ರವಾನಿಸಬಹುದು ಎಂದು ನೇಹಾ ವಿವರಣೆ ನೀಡಿದ್ದಾಳೆ.
ಆತ್ಮಿಯರ ಬಳಗದಲ್ಲಿ ಛೋಟು ಎಂದು ಕರೆಯಲ್ಪಡುವ ನೇಹಾ ಧೂಪಿಯಾ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ನಾಸಿರುದ್ದಿನ್ ಶಾಹ್, ರಣವೀರ್ ಶೋರೆ ಮತ್ತು ವಿನಯ್ ಪಾಠಕ್ ಅಭಿನಯದ ಮಿಥ್ಯ ಚಿತ್ರದ ಬಗ್ಗೆ ಭಾರಿ ಭರವಸೆಯನ್ನು ಇಟ್ಟುಕೊಂಡಿದ್ದಾರೆ.
ನಾಸಿರುದ್ದಿನ್ ಶಾಹ್, ರಣವೀರ್ ಶೋರೆ ಮತ್ತು ವಿನಯ್ ಪಾಠಕ್ ಅವರಂತಹ ನಟರೊಂದಿಗೆ ಅಭಿನಯಿಸಿರುವುದು ಹೊಸ ಅನುಭವ ನೀಡಿದೆ. ಚಿತ್ರದಲ್ಲಿ ಶಕ್ತಿಶಾಲಿಯಾದ ಅಭಿನಯ ನೀಡಿದ್ದಾರೆ ಎಂದು ನೇಹಾ ಸಂತಸ ವ್ಯಕ್ತಪಡಿಸಿದ್ದಾರೆ.
ಸೆಕ್ಸ್ ಮತ್ತು ಶಾಹರೂಖ್ಖಾನ್ಗೆ ಮಾತ್ರ ಬಾಲಿವುಡ್ನಲ್ಲಿ ಬೆಲೆಯಿದೆ ಎನ್ನುವ ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿದ್ದ ನೇಹಾ ಉತ್ತಮ ಚಿತ್ರಕಥೆ, ನಿರೂಪಣೆ ಉತ್ತಮವಾಗಿದ್ದಲ್ಲಿ ಚಿತ್ರ ಗೆಲ್ಲಬಹುದು ಎಂದು ಹೇಳಿದ್ದಾರೆ.
ಇಂದು ಉತ್ತಮ ಚಿತ್ರಕಥೆಮತ್ತು ಕಲಾವಿದರ ಅದ್ಭುತ ಅಭಿನಯದಿಂದ ಚಿತ್ರವನ್ನು ಗೆಲ್ಲುವಂತೆ ಮಾಡಬಹುದೇ ಹೊರತು ಕೇವಲ ಸೆಕ್ಸ್ನಿಂದ ಸಾಧ್ಯವಿಲ್ಲ.ಜ್ಯೂಲಿಯ ಚಿತ್ರದ ನಂತರ ಅನೇಕ ಸೆಕ್ಸ್ ಆಧಾರಿತ ಚಿತ್ರಗಳು ತೆರೆಗೆ ಬಂದರೂ ಪ್ರೇಕ್ಷಕರಿಗೆ ಬೋರ್ ಹೊಡೆಸಿದ್ದರಿಂದ ಗಲ್ಲಾಪೆಟ್ಟಿಗೆಯನ್ನು ದೋಚುವಲ್ಲಿ ವಿಫಲವಾದವು ಎಂದು ನೇಹಾ ಹೇಳಿದ್ದಾರೆ.