ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಕರೀನಾ ಜತೆ ವಿವಾಹ ನಡೆದಿಲ್ಲ: ಸೈಫ್ ಸ್ಪಷ್ಟನೆ
ಸುದ್ದಿ/ಗಾಸಿಪ್
Feedback Print Bookmark and Share
 
ತಾವು ಹಾಗೂ ಕರೀನಾ ಕಪೂರ್ ಬುಧವಾರ ಮದುವೆಯಾಗಿರುವ ಕುರಿತ ಮಾಧ್ಯಮ ವರದಿಗಳನ್ನು ಬಾಲಿವುಡ್ ನಟ ಸೈಫ್ ಅಲಿ ಖಾನ್ ತಳ್ಳಿ ಹಾಕಿದ್ದಾರೆ.

ಈಗಾಗಲೈ ಸೈಫ್-ಕರೀನಾ ಪ್ರೇಮ ಪ್ರಕರಣವು ಬಾಲಿವುಡ್ ಜಗತ್ತಿನಲ್ಲಿ ಸರ್ವ ವಿದಿತವಾಗಿದ್ದು, ಅವರಿಬ್ಬರೂ ಬುಧವಾರ ಮಧ್ಯಾಹ್ನ ಚುಪ್ ಚಾಪ್ ಆಗಿ ನಡೆದ ಸಮಾರಂಭವೊಂದರಲ್ಲಿ ವಿವಾಹವಾದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಸೈಫ್ ಇದನ್ನು ನಿರಾಕರಿಸಿರುವುದಾಗಿ ಟಿವಿ ಚಾನೆಲ್ ವರದಿ ಮಾಡಿದೆ.

ಬಾಂದ್ರಾದಲ್ಲಿರುವ ಸೈಫ್ ನಿವಾಸ ಲೇವ್ಯೂ ಪಾಟ್ನಿಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಸರಳ ಕಾರ್ಯಕ್ರಮದಲ್ಲಿ ಸೈಫ್-ಕರೀನಾ ನಿಕಾಹ್ ನಡೆಯಿತು. ಈ ಶುಭ ಕ್ಷಣಗಳ ಸವಿನೆನಪಿಗಾಗಿ ಸೈಫ್ ತನ್ನ ಹೊಸ ಪತ್ನಿಗೆ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ವಿವಾಹ ಸಮಾರಂಭದ ವರದಿಗಳನ್ನು ನಿರಾಕರಿಸಿರುವ ಸೈಫ್, ತನ್ನ ಕುಟುಂಬಿಕರಿಗೂ ಈ ಸಂಗತಿ ತಿಳಿದಿಲ್ಲ ಎಂದಿದ್ದಾರೆ.

ಇಂಥ ಸಮಾರಂಭ ನಡೆದೇ ಇಲ್ಲ, ಈ ರೀತಿಯ ಗಾಳಿ ಸುದ್ದಿಗಳನ್ನು ಪ್ರೋತ್ಸಾಹಿಸಬಾರದು. ಯಾಕೆಂದರೆ ಇದು ಎರಡೂ ಕುಟುಂಬಗಳ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂದು ಸೈಫ್ ಅವರು ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ.

ಕರೀನಾ ಮತ್ತು ಶಹೀದ್ ಕಪೂರ್ ನಡುವಣ ಪ್ರೇಮ ಸಂಬಂಧ ಮುರಿದು ಬಿದ್ದ ಬಳಿಕ ಕರೀನಾ-ಸೈಫ್ ಪರಸ್ಪರ ಹತ್ತಿರವಾಗಿದ್ದರು. ಅಂದಿನಿಂದ ಅವರಿಬ್ಬರೂ ಜತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು.