ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಆಜಾ ನಾಚ್‌ಲೇ ಹಾಡಿಗೆ ಕ್ಷಮೆ ಕೇಳಿದ ಸೆನ್ಸಾರ್ ಮಂಡಳಿ
ಸುದ್ದಿ/ಗಾಸಿಪ್
Feedback Print Bookmark and Share
 
ಒಂದು ಜಾತಿ ಸಮುದಾಯಕ್ಕೆ ನೋವುಂಟುಮಾಡುವ ಶಬ್ದಗಳಿವೆ ಎಂದು ಆರೋಪಿಸಲಾದ ಮಾಧುರಿ ದೀಕ್ಷಿತ್ ನಟನೆಯ 'ಆಜಾ ನಾಚ್ ಲೇ' ಚಿತ್ರಕ್ಕೆ ಸಮ್ಮತಿ ನೀಡಿದ್ದಕ್ಕಾಗಿ ಸೆನ್ಸಾರ್ ಮಂಡಳಿಯು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (ಎನ್‌ಸಿಎಸ್‌ಸಿ) ಕ್ಷಮೆ ಯಾಚಿಸಿದೆ.

ಆಕ್ಷೇಪಾರ್ಹ ಪದಗಳಿರುವ ಹಾಡು ಇರುವ ಚಿತ್ರಕ್ಕೆ ಹಸಿರು ನಿಶಾನೆ ತೋರಿರುವಲ್ಲಿ ತಪ್ಪಾಗಿದೆ ಎಂದು ಸೆನ್ಸಾರ್ ಮಂಡಳಿಯ ಅಫಿದವಿತ್ ನಮ್ಮ ಬಳಿ ತಲುಪಿದೆ ಎಂದು ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೊಹಲ್ಲೇ ಮೇ ಕೈಸೀ ಮಾರಾ ಮಾರ್ ಹೈ, ಬೋಲೇ ಮೋಚಿ ಭೀ ಖುದ್ ಕೋ ಸೊನಾರ್ ಹೈ (ಮೊಹಲ್ಲಾದಲ್ಲಿ ನನ್ನನ್ನು ನೋಡಲು ಮಾರಾ ಮಾರಿಯಾಗುತ್ತಿದೆ, ಚಪ್ಪಲಿ ಹೊಲಿಯುವವರು ಕೂಡ ತಮ್ಮನ್ನು ಚಿನ್ನದ ಕೆಲಸಗಾರರೂಂತ ಕರೆದುಕೊಳ್ಳುತ್ತಾರೆ) ಎಂಬ ಹಾಡಿನಿಂದಾಗಿ ಚಿತ್ರವನ್ನು ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್ ರಾಜ್ಯಗಳಲ್ಲಿ ನಿಷೇಧಿಸಲಾಗಿತ್ತು. ಈ ಹಿಂದೆ, ಸೆನ್ಸಾರ್ ಮಂಡಳಿ ಅಧ್ಯಕ್ಷೆ ಶರ್ಮಿಳಾ ಠಾಗೋರ್ ಅವರು ಆಯೋಗದ ಎದುರು ಹಾಜರಾಗಿ, ಮೋಚಿ ಅನ್ನೋ ಶಬ್ದವು ಪರಿಶಿಷ್ಟ ಜಾತಿಗೆ ಸಂಬಂಧಿಸಿದ್ದಲ್ಲ, ಅದು ವೃತ್ತಿಗೆ ಸಂಬಂಧಿಸಿದ್ದು ಎಂದು ಭಾವಿಸಿದ್ದರಿಂದ ಅನುಮತಿ ನೀಡಲಾಗಿತ್ತು ಎಂದು ಹೇಳಿದ್ದರು.

ಸೆನ್ಸಾರ್ ಮಂಡಳಿಯ ವಿವರಣೆಯನ್ನು ಸ್ವೀಕರಿಸಿದ್ದ ಆಯೋಗದ ಅಧ್ಯಕ್ಷ ಬೂಟಾ ಸಿಂಗ್, ಭವಿಷ್ಯದಲ್ಲಿ ಎಚ್ಚರಿಕೆ ವಹಿಸುವಂತೆಯೂ, ಲಿಖಿತ ಅಫಿದವಿತ್ ಸಲ್ಲಿಸುವಂತೆಯೂ ಸೂಚಿಸಿದ್ದರು.