ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸಂಜು-ಮಾನ್ಯತಾ ಮದುವೆ 'ಅಮಾನ್ಯ'!
ಸುದ್ದಿ/ಗಾಸಿಪ್
Feedback Print Bookmark and Share
 
ಬಾಲಿವುಡ್‌ನ ಸಂಜು ಮಾಮು ಮತ್ತು ಮಾನ್ಯತಾ ಅವರ ವಿವಾಹಗಳ ಕುರಿತು ಗುಸು ಗುಸು ಏಳುತ್ತಿದ್ದು, ಅವರ ಮದುವೆ ಅಸಿಂಧು ಆಗುವ ಸಾಧ್ಯತೆಗಳಿವೆ.

ಗೋವಾದ ಮಡಂಗಾವ್‌ ನ್ಯಾಯಾಲಯದ ಉಪ ನೊಂದಾವಣಾ ಅಧಿಕಾರಿಯೋರ್ವರು, ಸಂಜಯ್ ಮತ್ತು ಮಾನ್ಯತಾ ಅವರು ಮದುವೆ ಸಂದರ್ಭದಲ್ಲಿ ನೀಡಿದ ದಾಖಲೆಗಳು ನಕಲಿಯಾಗಿದ್ದು, ಅದನ್ನು ಮರುಪರಿಶೀಲನೆಗಾಗಿ ಕಾನೂನು ವಿಭಾಗಕ್ಕೆ ಕಳುಹಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ವರಿದಿಗಳ ಪ್ರಕಾರ, ಸಂಜಯ್ ವಿವಾಹ ಕಾನೂನುಬಾಹಿರ ಮತ್ತು ಅನೂರ್ಜಿತವಾಗಿದ್ದು, ಮಾನ್ಯತಾ ಇನ್ನೂ ತನ್ನ ಮೊದಲ ಗಂಡನಿಂದ ವಿಚ್ಛೇದನ ಪಡೆದಿರುವುದಿಲ್ಲ.

ಇದಕ್ಕೆ ಪೂರಕವಾಗಿ ಮಾನ್ಯತಾ ಅವರ ಮೊದಲ ಪತಿ ಎಂದು ಹೇಳಿಕೊಳ್ಳುವ ಮೆಹರಾಜ್ ಉಲ್ ರೆಹಮಾನ್ ಅವರು 'ನಾನು ಮತ್ತು ಮಾನ್ಯತಾ 2003ರಲ್ಲಿ ಮದುವೆಯಾಗಿದ್ದು, ನಾವಿನ್ನೂ ವಿಚ್ಚೇದನ ಪಡೆದಿಲ್ಲ' ಎಂದು ಹೇಳಿಕೊಂಡಿದ್ದಾರೆ.

ಅದೇ ರೀತಿ ಮಾನ್ಯತಾ ಅವರ ಕುರಿತು ಇನ್ನೂಂದು ವದಂತಿಯಿದ್ದು, ಅವರಿಗೆ ಸಂಜಯ್ ಜೊತೆಯದು ನಾಲ್ಕನೇ ಮದುವೆಯಂತೆ. ಅದರಲ್ಲೂ ಮೆಹರಾಜ್ ಜೊತೆ ಒಂದು ಮಗುವನ್ನೂ ಪಡೆದಿದ್ದು, ಅದೀಗ ದುಬೈಯಲ್ಲಿ ಮಾನ್ಯತಾ ಸಂಬಂಧಿಕರ ಮನೆಯಲ್ಲಿದೆ.

ಮೆಹರಾಜ್ ಕೂಡಾ ಸಿನೆಮಾ ಕ್ಷೇತ್ರದ ಬರಹಗಾರನಾಗಿದ್ದು, ಸದ್ಯಕ್ಕೀಗ ನಟೀ ಮಣಿಗಳಿಗೆ ಅಶ್ಲೀಲ ಎಸ್ಎಂಎಂಎಸ್ ಬರೆದು ಸಿಕ್ಕಿಹಾಕಿ ಜೈಲಿನಲ್ಲಿದ್ದಾರೆ. ಅವರೀಗ ಮಾನ್ಯತಾ ಜೊತೆಗಿನ ಮದುವೆ, ಮಧುಚಂದ್ರಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ಗರ್ಭಧಾರಣೆ ಕುರಿತ ವೈದ್ಯಕೀಯ ವರದಿ ಹಿಡಿದು, 'ನಾನು ಮತ್ತು ಮಾನ್ಯತಾ ಮದುವೆಯಾದದ್ದು ಸತ್ಯ. ಮಗುವನ್ನು ನನಗೆ ಕೊಟ್ಟುಬಿಡಿ' ಎಂದು ವಾದಿಸುತ್ತಿದ್ದಾರೆ