ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಸಂಜು ಪತ್ನಿ ಮಾನ್ಯತಾಗೆ ಶೋಕಾಸ್ ನೋಟೀಸ್
ಸುದ್ದಿ/ಗಾಸಿಪ್
Feedback Print Bookmark and Share
 
PTI
ಬಾಲಿವುಡ್ ತಾರೆ ಸಂಜಯ ದತ್ ಅವರನ್ನು ಇತ್ತೀಚೆಗೆ ವಿವಾಹವಾಗಿರುವ ಮಾನ್ಯತಾ ಅವರಿಗೆ ನೋಟೀಸ್ ಕಳುಹಿಸಿರುವ ಗೋವಾ ಜಿಲ್ಲಾಡಳಿತೆಯು, ಅವರ ನೋಂದಣಿ ವಿವಾಹಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ವಾಸ್ತವ್ಯ ದೃಢಪತ್ರಿಕೆಯನ್ನು ಯಾಕೆ ರದ್ದುಪಡಿಸಬಾರದು ಎಂಬುದಾಗಿ ಕಾರಣ ಕೇಳಿದೆ.

ದಕ್ಷಿಣ ಗೋವಾದ ಮರ್ಗೋವ ಪಟ್ಟಣದ ಅಕ್ವೆಂನಲ್ಲಿ ವಾಸ್ತವ್ಯ ಹೊಂದಿರುವ ದೃಢಪತ್ರಿಕೆಯನ್ನು ಮಾನ್ಯತಾ, ಸಂಜಯ ದತ್ ಅವರನ್ನು ವಿವಾಹವಾದಾಗ ಸಲ್ಲಿಸಿದ್ದರು. ಸಬ್ ರಿಜಿಸ್ಟ್ರಾರ್ ಮುಂದೆ ಫೆ.7ರಂದು ತಮ್ಮ ವಿವಾಹವನ್ನು ಘೋಷಣೆ ವೇಳೆ ಅವರು ಈ ದೃಢಪತ್ರಿಕೆಯನ್ನು ಬಳಸಿದ್ದರು.

ಮರ್ಗೋವಾದ ಮಮ್ಲತ್‌ದಾರ್(ಹಿರಿಯ ಸರಕಾರಿ ಅಧಿಕಾರಿ) ಪರೇಶ್ ಫಾಲ್ದೇಸಾಯ್ ಅವರು ಮಂಗಳವಾರದ ತನಕ ನೋಟೀಸಿಗೆ ಉತ್ತರ ನೀಡಲು ಸಮಯಾವಕಾಶ ನೀಡಿದ್ದಾರೆ.

ನೀವು ನೀಡಿರುವ ವಿಳಾಸದಲ್ಲಿ ನೀವು ವಾಸ್ತವ್ಯ ಹೊಂದಿರಲಿಲ್ಲ ಎಂಹಬುದಾಗಿ ತಿಳಿದು ಬಂದಿದ್ದು, ನಿಮ್ಮ ವಾಸ್ತವ್ಯ ದೃಢಪತ್ರಿಕೆಯನ್ನು ಯಾಕೆ ರದ್ದು ಪಡಿಸಬಾರದು ಎಂದು ಕಾರಣ ಕೇಳಿರುವ ಈ ನೋಟೀಸನ್ನು ಅವರ ಗೋವಾದ ವಿಳಾಸಕ್ಕೆ ವೃತ್ತ ನಿರೀಕ್ಷರ ಮೂಲಕ ಕಳುಹಿಸಲಾಗಿದೆ.

ಸರ್ಟಿಫಿಕೇಟ್ ಕುರಿತ ವಿವಾದವು ಇದೀಗ ಅವರ ವಿವಾಹದ ಸಿಂಧುತ್ವದ ಪ್ರಶ್ನೆಯನ್ನು ಎತ್ತಿದೆ. ಒಂದೊಮ್ಮೆ ಅವರು ಸಲ್ಲಿಸಿರುವ ವಿಳಾಸ ದೃಢೀಕರಣ ದೃಢಪತ್ರಿಕೆ ರದ್ದಾದಲ್ಲಿ ವಿವಾಹ ಅಸಿಂಧುವಾಗುತ್ತದೆ.

ಯಾಕೋ, ದತ್‌ಗೆ ಹೋದಲೆಲ್ಲ ಸಮಸ್ಯೆಯೇ ಎದುರಾಗುತ್ತದಪ್ಪ!