ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಅಭಿಯೊಂದಿಗಿನ ಪ್ರತಿದಿನವೂ ವ್ಯಾಲೆಂಟೈನ್ ಡೇ-ಐಶ್ವರ್ಯರೈ
ಸುದ್ದಿ/ಗಾಸಿಪ್
Feedback Print Bookmark and Share
 
ಅಭಿಯೊಂದಿಗಿನ ಪ್ರತಿದಿನವೂ ವ್ಯಾಲೆಂಟೈನ್ ದಿನವೆಂದು ಬಾಲಿವುಡ್‌ನ ಖ್ಯಾತ ತಾರೆ ಐಶ್ವರ್ಯರೈ ಬಚ್ಚನ್ ತಿಳಿಸಿದ್ದಾರೆ.

ಜೋಧಾ ಅಕ್ಬರ್ ಪ್ರೇಮಿಯರ್‌ನ ಸಂಜೆ ಆರಂಭವಾದ ಶೋ ಸಂದರ್ಭದಲ್ಲಿ ಅಮಿತಾಭ್ ಹಾಗೂ ಜಯಾ ಬಚ್ಚನ್ ಮಾತ್ರ ಉಪಸ್ಥಿತರಿದ್ದು ಅಭಿಷೇಕ್ ಕಾಣದಿರುವುದು ಹಲವರ ಹುಬ್ಬೇರಿಸಿತ್ತು.ಆದರೆ ವಿಳಂಬವಾಗಿ ಮಧ್ಯರಾತ್ರಿಗೆ ಆಗಮಿಸಿದ ಅಭಿಷೇಕ್ ಬಚ್ಚನ್ ಎಲ್ಲ ಉಹಾಪೋಹಗಳಿಗೆ ತೆರೆ ಎಳೆದರು.

ಮುಂಬೈಗೆ ಆಗಮಿಸಲು ಬೇಗನೆ ಅಭಿಷೇಕ್ ಹೊರಟಿದ್ದರಾದರೂ ವಿಮಾನ ಹೊರಡುವಲ್ಲಿ ಆದ ವಿಳಂಬದಿಂದಾಗಿ ಮಧ್ಯರಾತ್ರಿಗೆ ಅಭಿ ಮುಂಬೈ ಸೇರಬೇಕಾಗಿ ಬಂತು.ಎಲ್ಲ ವ್ಯಾಲೆಂಟೈನ್ ಯೋಜನೆಗಳು ತಲೆಕೆಳಗಾಗಿದ್ದವು.ಆದರೆ ಈ ಕುರಿತು ಮಾತನಾಡಲು ಇಚ್ಚಿಸದ ಐಶ್ವರ್ಯ ನಮಗೆ ಪ್ರತಿದಿನವೂ ವ್ಯಾಲೆಂಟೈನ್ ಡೇ ಎಂದರು.

ನಮಗೆ ಸಮಯದೇ ಸಮಸ್ಯೆಯಾಗಿದೆ. ಉಭಯರ ಷೆಡ್ಯೂಲ್‌ಗಳು ತುಂಬಾ ಬಿಜಿಯಾಗಿರುವುದರಿಂದ ಪರಸ್ಪರರನ್ನು ಭೇಟಿ ಮಾಡಲು ಸಮಯವೇ ದೊರೆಯುತ್ತಿಲ್ಲ. ಆದರೆ ಸಮಯ ದೊರೆತಲ್ಲಿ ನಾವು ತುಂಬಾ ಸಂತೋಷವಾಗಿ ಇರುತ್ತೇವೆ.ಸಂತೋಷವಾಗಿ ಇರುವುದು ಅಥವಾ ದುಖಃದಲ್ಲಿ ಇರುವುದು ನಮ್ಮ ಕೈಯಲ್ಲಿ ಇದೆ ಎಂದು ಮೋಹಕ ನಗೆ ನಗುತ್ತಾರೆ ಐಶ್ವರ್ಯರೈ ಬಚ್ಚನ್.