ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ಜೋಧಾ ಅಕ್ಬರ್; ಸೆನ್ಸಾರ್ ವಿರುದ್ದ ಕ್ರಿಮಿನಲ್ ಮೂಕದ್ದಮೆ
ಸುದ್ದಿ/ಗಾಸಿಪ್
Feedback Print Bookmark and Share
 
ವಿವಾದಕ್ಕೆ ಗುರಿಯಾದ ಜೋಧಾ ಅಕ್ಬರ್‌ ಚಿತ್ರ ಬಿಡುಗಡೆಗೆ ಕಾರಣಿಭೂತವಾದ ಸೆನ್ಸಾರ್ ಮಂಡಳಿಯ ವಿರುದ್ದ ಠಾಕೂರ್ ಸಮುದಾಯದವರು ಚಂಡೀಗಢನಲ್ಲಿ ಕ್ರಿಮಿನಲ್ ಮೂಕದ್ದಮೆ ಹೂಡಿದ್ದಾರೆ.

ಸೆನ್ಸಾರ್ ಮಂಡಳಿಯ ಅಧ್ಯಕ್ಷೆಯಾದ ಶರ್ಮಿಲಾ ಟ್ಯಾಗೊರ್, ನಿರ್ಮಾಪಕರಾದ ರೊನೆ ಸ್ಕ್ರೇವಾಲಾಮತ್ತು ಅಶುತೋಷ್ ಗೌರಿಕರ, ಅಖಿಲ್ ಭಾರತೀಯ ರಾಜ್‌ಪುತ್ ಅಭಿವ್ಯಕ್ತಾ ಸಂಘದ ಅಧ್ಯಕ್ಷ ಅರವಿಂದ್ ಠಾಕೂರ್, ಪಂಜಾಬ್ ಹಿಂದೂ ಪರಿಷದ್ ವಕ್ತಾರ್ ವಿಜಯ್‌ಸಿಂಗ್, ಭಾರದ್ವಜ್ ಮತ್ತು ಅಂತಾರಾಷ್ಟ್ರೀಯ ಹಿಂದೂ ಸಂರಕ್ಷಕ ಪರಿಷದ್ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿಯಾದವ್ ಅವರ ವಿರುದ್ದ ಕ್ರಿಮಿನಲ್ ಮೂಕದ್ದಮೆ ಹೂಡಲಾಗಿದೆ.

ಚಂಡೀಗಢದ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೂಕದ್ದಮೆ ದಾಖಲಿಸಲಾಗಿದ್ದು ನಾಳೆ ವಿಚಾರಣೆಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ರಾಜ್ಯದಲ್ಲಿ ಹಿಂದೂಗಳ ಹಾಗೂ ರಾಜ್‌ಪುತ್‌ರ ನಡುವೆ ಜೋಧಾ ಅಕ್ಬರ್ ಚಿತ್ರ ಬಿಡುಗಡೆಯಿಂದಾಗಿ ವಿವಾದ ಉಲ್ಬಣವಾಗಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾದ ಹಿನ್ನೆಲೆಯಲ್ಲಿ ಅಂತಹವರ ವಿರುದ್ದ ಸೂಕ್ತ ಕ್ರಮಕೈಗೊಳ್ಳಬೇಕೆಂದುಪ್ರಕರಣ ದಾಖಲಿಸಿದ ಠಾಕೂರರು ಒತ್ತಾಯಿಸಿದ್ದಾರೆ.

ಫೆಬ್ರವರಿ 15 ರಂದು ಜೋಧಾ ಅಕ್ಬರ್ ಚಿತ್ರ ಬಿಡುಗಡೆಯಾದಾಗಿನಿಂದ ವ್ಯಾಪಕ ಪ್ರತಿಭಟನೆಗಳು ನಡೆದ ಹಿನ್ನೆಲೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದವರ ವಿರುದ್ದ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ.