ನಟಿ ಜಯಪ್ರಧಾ ಮಾಲೀಕತ್ವದ ಥೀಯೆಟರ್ ಜಪ್ತಿ
ಚೆನ್ನೈ, ಶುಕ್ರವಾರ, 22 ಫೆಬ್ರವರಿ 2008( 13:32 IST )
ಚೆನ್ನೈ ಕಾರ್ಪೋರೇಶನ್‌ಗೆ ಪಾವತಿಸಬೇಕಾದ 20 ಲಕ್ಷರೂ.ಗಳ ಆಸ್ತಿ ತೆರಿಗೆಯನ್ನು ಪಾವತಿಸದ ಹಿನ್ನಲೆಯಲ್ಲಿ ಸಮಾಜವಾದಿ ಪಕ್ಷದ ಧುರೀಣೆ ಹಾಗೂ ಖ್ಯಾತ ಚಲನಚಿತ್ರ ನಟಿ ಜಯಪ್ರದಾ ಅವರ ಮಾಲೀಕತ್ವಕ್ಕೆ ಸೇರಿದ ಎರಡು ಥೀಯೇಟರ್‌ಗಳನ್ನು ಜಪ್ತಿ ಮಾಡುವಂತೆ ಸಿವಿಲ್ ನ್ಯಾಯಾಲಯ ಆದೇಶಿಸಿದೆ.
ಜಯಪ್ರಧಾ ಮತ್ತು ರಾಜ್ ಹೆಸರಿನಲ್ಲಿರುವ ಚಿತ್ರಮಂದಿರಗಳ ಮಾಲೀಕರು ಪಡೆದಿದ್ದ ತಡೆಯಾಜ್ಞೆಯ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಕಾರ್ಪೋರೇಶನ್ ಆದಾಯ ತೆರಿಗೆ ಅಧಿಕಾರಿಗಳು ದಾಖಲಿಸಿದ ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡ ನ್ಯಾಯಾಲಯ ಎರಡು ಥೀಯೇಟರ್‌ಗಳನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿತು.
ಕಾರ್ಪೋರೇಶನ್ ಅಧಿಕಾರಿಗಳು ವಾರೆಂಟ್ ಜಾರಿ ಮಾಡಲು ತೆರಳಿದಾಗ ಸಂಬಂಧಿತರು ಲಭ್ಯವಿಲ್ಲದ ಕಾರಣ ನಿವಾಸದ ಗೋಡೆಗಳಿಗೆ ವಾರೆಂಟ್ ಲಗತ್ತಿಸಿ ವಾಪಸಾದರು ಎಂದು ಕಾರ್ಪೋರೇಶನ್ ಮೂಲಗಳು ತಿಳಿಸಿವೆ.