ಜೋಧಾ ಅಕ್ಬರ್ ಚಿತ್ರ ನಿಷೇಧ ರದ್ದು
ಭೂಪಾಲ್ , ಶನಿವಾರ, 1 ಮಾರ್ಚ್ 2008( 13:22 IST )
ಯುಟಿವಿ ಮೋಶನ್ ನಿರ್ಮಾಪಕರು ನ್ಯಾಯಾಲಯದಲ್ಲಿ ಜೋಧಾ ಅಕ್ಬರ್ ತಡೆ ನೀಡಿದ ಸರಕಾರದ ಕ್ರಮವನ್ನು ಪ್ರಶ್ನಿಸಿದ ಪ್ರಕರಣದಲ್ಲಿ ಗೆಲುವು ಸಾಧಿಸಿದ್ದರಿಂದ ಅಶುತೋಷ್ ನಿರ್ದೇಶನದ ಐತಿಹಾಸಿಕ ಚಿತ್ರಜೋಧಾ ಅಕ್ಬರ್ ತಡೆಯನ್ನು ರದ್ದುಗೊಳಿಸಲಾಗಿದ್ದು ಪ್ರದರ್ಶನಕ್ಕೆ ಅನುಮತಿ ನೀಡಿದೆ.
ಕಳೆದ ರಾತ್ರಿಯಿಂದ ಮಧ್ಯಪ್ರದೇಶದಲ್ಲಿ ಜೋಧಾ ಅಕ್ಬರ್ ಚಿತ್ರ ಪ್ರದರ್ಶನವಾಗುತ್ತಿದ್ದು,ಪ್ರದರ್ಶನಕ್ಕಾಗಿ ನ್ಯಾಯಾಲಯದ ಮೆಟ್ಟಿಲು ಎರಬೇಕಾಗಿ ಬಂದಿರುವುದು ದುರದೃಷ್ಟಕರ ಎಂದು ಯುಟಿವಿ ಸಿಇಓ ರೊನ್ನೈ ತಿಳಿಸಿದ್ದಾರೆ.
ಮಧ್ಯಪ್ರದೇಶದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದು ಎಂದು ಜೋಧಾ ಅಕ್ಬರ್ ಚಿತ್ರವನ್ನು ವಾರದ ಪ್ರದರ್ಶನದ ನಂತರ ರದ್ದು ಮಾಡಿ ಆದೇಶ ಹೊರಡಿಸಿತ್ತು.
ಫಿಲ್ಮ್ ಸೆನ್ಸಾರ್ ಬೋರ್ಡ್ ಚಿತ್ರದಲ್ಲಿ ಯಾವುದೇ ತಡೆನೀಡುವ ಸಂಗತಿಗಳಿಲ್ಲ ಎಂದು ಪ್ರದರ್ಶನಕ್ಕೆ ಬಿಡುಗಡೆ ಮಾಡಿತ್ತು. ರಜಪೂತರು ಕೂಡಾ ಚಿತ್ರದಲ್ಲಿನ ಕಥಾವಸ್ತುವನ್ನು ನೋಡಿ ಸತ್ಯಸಂಗತಿಗಳನ್ನು ಅರಿಯಬೇಕು ಎಂದು ಅಶುತೋಷ್ ಮನವಿ ಮಾಡಿದರು.