ಬಾಲಿವುಡ್ನಲ್ಲಿ ಎರಡನೇ ಸ್ಥಾನ ದೊರೆತಲ್ಲಿ ಸಂತೋಷ-ಶಾರೂಕ್
ಮುಂಬೈ, ಗುರುವಾರ, 13 ಮಾರ್ಚ್ 2008( 19:12 IST )
ಬಾಲಿವುಡ್ನಲ್ಲಿ ಎರಡನೇಯ ಸ್ಥಾನದಲ್ಲಿರುವುದು ಹೇಗನ್ನಿಸುತ್ತದೆ ಎಂದು ಶಾರೂಕ್ ಕುರಿತಂತೆ ಅಮಿರ್ ಖಾನ್ ನೀಡಿದ ಹೇಳಿಕೆಗೆ ಪ್ರತಿಕ್ರಯಿಸಿದ ಶಾರೂಕ್ ತುಂಬಾ ಸಂತೋಷವಾಗುತ್ತದೆ ಎಂದು ಪ್ರತ್ಯುತ್ತರ ನೀಡಿದ್ದಾರೆ.
ಬಾಲಿವುಡ್ ನಟ ಅಮಿರ್ಖಾನ್ ಇತ್ತೀಚೆಗೆ ಹೇಳಿಕೆ ನೀಡಿ ತಾವು ನಂಬರ್ ಒನ್ ಸ್ಥಾನದಲ್ಲಿದ್ದು ಶಾರೂಕ್ ಎರಡನೇಯ ಸ್ಥಾನದಲ್ಲಿದ್ದಾರೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೆ ಪ್ರತಿಕ್ರಿಯೇ ನೀಡಿದ ಶಾರೂಕ್ ಖಾನ್ ಅಮಿರ್ ನನ್ನ ಆತ್ಮಿಯ ಗೆಳೆಯರಾಗಿದ್ದು, ನಾನು ಎರಡನೇಯ ಸ್ಥಾನದಲ್ಲಿದ್ದೇನೆ ಎಂದು ಪ್ರತಿಭಾನ್ವಿತ ನಟ ಹೇಳಿಕೆ ನೀಡಿರುವುದು ನನಗೆ ಸಂದ ದೊಡ್ಡ ಗೌರವವಾಗಿದೆ ಎಂದು ಹೇಳಿದ್ದಾರೆ.
ನಾವು ಪರಸ್ಪರರು ಗೌರವಿಸುತ್ತೇವೆ. ನಿಜವಾಗಿ ಅಮಿರ್ಖಾನ್ ಶೇ 100ರಷ್ಟು ನಂಬರ್ ಒನ್ ನಟ ಎಂದು ಐಪಿಎಲ್ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಅಮಿರ್ಖಾನ್ ನಟಿಸಿದ ತಾರೆ ಜಮೀನ್ ಪರ್ ಚಿತ್ರ ಶಾರೂಕ್ ಖಾನ್ ನಟನೆಯ ಓಂ ಶಾಂತಿ ಓಂ ಚಿತ್ರವನ್ನು ಹಿಂದಕ್ಕೆ ತಳ್ಳಿದ ಆಮಿರ್ ಮೇಧಾವಿ ಮತ್ತು ಬುದ್ದಿವಂತ ವ್ಯಕ್ತಿ ಎಂದು ಶಾರೂಕ್ ಹೊಗಳಿದ್ದಾರೆ.
ಖಾನ್ ಹೆಸರೊಂದು ಹೊರತುಪಡಿಸಿ ನಾವು ಎಲ್ಲದರಲ್ಲೂ ಎದುರಾಳಿಗಳು. ಅಮಿರ್ ಸಹಜತೆಯಿಂದ ನಟಿಸುವ ಉತ್ತಮ ಕಲಾವಿದರಾಗಿದ್ದಾರೆ ಎಂದು ಶಾರೂಕ್ ಹೇಳಿದ್ದಾರೆ.
ಒಂದು ವೇಳೆ ಶಾರುಕ್ಗೆ ಸಂದರ್ಶನ ಮಾಡುವ ಅವಕಾಶ ಬಂದಾಗ ನಿಮ್ಮ ಮೊದಲ ಪ್ರಶ್ನೆ ಎನಿರಬಹುದು ಎಂದು ಪತ್ರಕರ್ತರು ಅಮಿರ್ಖಾನ್ರನ್ನು ಕೇಳಿದಾಗ ಇದೊಂದು ತುಂಟತನದ ಪ್ರಶ್ನೆಯಾಗಿದ್ದು, ನನ್ನ ನಂತರದ ಎರಡನೇಯ ಸ್ಥಾನ ನಿಮಗೇ ಹೇಗನ್ನಿಸುತ್ತದೆ ಎಂದು ಶಾರೂಕ್ರನ್ನು ಕೇಳುತ್ತೇನೆ ಎಂದು ಹೇಳಿದ್ದರು.
ಅಮಿರ್ ಸರಳತೆಯಿಂದ, ತಮಾಷೆಗಾಗಿ ಈ ರೀತಿ ಹೇಳಿರಬಹುದು. ಎಂದು ಬಾಲಿವುಡ್ ಬಾದಶಾಹ ಶಾರೂಕ್ ಖಾನ್ ಹೇಳಿದ್ದಾರೆ