ಸುದ್ದಿ/ಗಾಸಿಪ್ | ಸಿನಿಮಾ ಮುನ್ನೋಟ | ಸಿನಿಮಾ ವಿಮರ್ಶೆ | ತಾರಾ ಪರಿಚಯ | ಸಂದರ್ಶನ | ಹಾಲಿವುಡ್ | ಕಿರುತೆರೆ
ಮುಖ್ಯ ಪುಟ ಮನರಂಜನೆ » ಬಾಲಿವುಡ್‌ » ಸುದ್ದಿ/ಗಾಸಿಪ್ » ದೀಪಿಕಾಳೊಂದಿಗೆ ಡೇಟಿಂಗ್ ನಿಜ - ರಣಬೀರ್
ಸುದ್ದಿ/ಗಾಸಿಪ್
Feedback Print Bookmark and Share
 
ದೀಪಿಕಾ ಪಡುಕೋಣೆಯೊಂದಿಗೆ ಡೇಟಿಂಗ್ ಮಾಡುತ್ತಿದ್ದು ಅವಳ ಜೀವನ ಸಂಗಾತಿಯಾಗುವುದು ಸಂತಸದ ಸಂಗತಿ ಎಂದು ಸಾವರಿಯಾ ಚಿತ್ರದಿಂದ ಬಾಲಿವುಡ್‌ಗೆ ಲಗ್ಗೆ ಹಾಕಿದ ರಣಬೀರ್ ಕಪೂರ್ ಹೇಳಿದ್ದಾರೆ.

ಕಳೆದ ಕೆಲ ವಾರಗಳಿಂದ ಡೇಟಿಂಗ್ ನಡೆಸುತ್ತಿದ್ದು, ದೀಪಿಕಾ ತುಂಬಾ ಸರಳ ನಮ್ಮ ಕುಟುಂಬವನ್ನು ಗೌರವಿಸುತ್ತಾಳೆ. ಅದು ನನಗೆ ಇಷ್ಟವಾಗಿದೆ ಎಂದು ಬಾಲಿವುಡ್‌ನ ಖ್ಯಾತ ನಟ ರಿಷಿಕಪೂರ್ ಹಾಗೂ ನೀತುಸಿಂಗ್ ಪುತ್ರನಾದ ರಣಬೀರ್ ಕಪೂರ್ ಹೇಳಿದ್ದಾರೆ.

ಕೇವಲ 22ರ ಹರೆಯದಲ್ಲಿ ಸ್ವತಂತ್ರವಾಗಿ ತನ್ನ ಜೀವನವನ್ನು ರೂಪಿಸಿಕೊಂಡಿರುವುದು ನಾನು ದೀಪಿಕಾಳಲ್ಲಿ ಮೆಚ್ಚಿದ ಪ್ರಮುಖ ಅಂಶವಾಗಿದೆ. ಕೇವಲ ಅಲ್ಪಾವಧಿಯಲ್ಲಿ ಸೂಪರ್ ಮಾಡೆಲ್ ಪಟ್ಟಕ್ಕೆ ಏರಿದ ದೀಪಿಕಾಳ ಜೀವನ ಸಂಗಾತಿಯಾಗುವುದು ನನಗೆ ಸಂತೋಷದ ಸಂಗತಿಯಾಗಿದೆ. ಆದರೆ ಮದುವೆ ವಿಚಾರ ಇನ್ನು ಸಧ್ಯಕ್ಕಿಲ್ಲ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಒಂದು ತಿಂಗಳ ಕಾಲ ನಡೆದ "ಬಚನಾ ಏ ಹಸೀನೋ" ಚಿತ್ರದ ಶೂಟಿಂಗ್‌ನಲ್ಲಿ ಪರಸ್ಪರರನ್ನು ಅರಿಯಲು ಸಹಾಯಕವಾಗಿದೆ.ನಂತರ ಮುಂಬೈನಲ್ಲಿ ಪೆಪ್ಸಿ ಜಾಹೀರಾತಿನಲ್ಲಿ ಜೊತೆಯಾಗಿ ನಟಿಸಿದ್ದೇವೆ ಎಂದು ನಟ ರಣಬೀರ್ ವಿವರಣೆ ನೀಡಿದ್ದಾರೆ.