ಈ ಬೇಸಗೆಯಲ್ಲಿ ಕ್ರಿಕೆಟ್ ತನ್ನ ಉತ್ತುಂಗವನ್ನು ಕಾಣಲಿದೆ. ಇದೇನಿದು ಸಿನಿಮಾ ವಿಭಾಗದಲ್ಲಿ ಕ್ರಿಕೆಟ್ ಎಂಬ ಯೋಚನೆಬೇಡ. ಬಾಲಿವುಡ್ನಲ್ಲಿ ಕ್ರಿಕೆಟ್, ಕ್ರಿಕೆಟ್ನಲ್ಲಿ ಬಾಲಿವುಡ್ ಮಿಳಿತವಾಗಿದೆ.
ಬೆಂಗಳೂರು ರಾಯಲ್ ಚಾಲೆಂಜರ್ಸ್ನ ಐಪಿಎನ್ ತಂಡವು ತನ್ನ ಜಾಹೀರಾತು ಮತ್ತು ಪ್ರಮೋಶನಲ್ ವೀಡಿಯೋ ಸಿದ್ಧತೆ ನಡೆಸುತ್ತಿದೆ. ಇದರಲ್ಲಿ ರಾಹುಲ್ ದ್ರಾವಿಡ್ ಬಾಲಿವುಡ್ ಮಿಂಚುಳ್ಳಿಗಳಾದ ಕತ್ರಿನಾ ಕೈಫ್ ಹಾಗೂ ಕರ್ನಾಟಕದ ಹುಡುಗಿಯಾಗಿರುವ ದೀಪಿಕಾ ಪಡುಕೋಣೆಯೊಂದಿಗೆ ಮಿಂಚಲಿದ್ದಾರೆ.
ಹೆಂಡದ ದೊರೆ ವಿಜಯ್ ಮಲ್ಯಾ ರಾಯಲ್ ಚಾಲೆಂಜರ್ಸ್ ಐಪಿಎಲ್ ತಂಡದ ಒಡೆಯ. ಬೆಂಗಳೂರು ಹುಡುಗ, ಟೀಮ್ ಇಂಡಿಯಾದ ಗೋಡೆಯಾಗಿದ್ದ ರಾಹುಲ್ ದ್ರಾವಿಡ್ ತಂಡದ ನಾಯಕ.
ಏನೇ ಮಾಡಿದರೂ ವಿಭಿನ್ನವಾಗಿ ಮಾಡುವ ಮಲ್ಯ, ತನ್ನ ತಂಡದ ಜಾಹೀರಾತಿನ ಜವಾಬ್ದಾರಿಗೆ ಸಂಜಯ್ ಗುಪ್ತಾರನ್ನು ನೇಮಿಸಿದ್ದಾರೆ. ಆಕ್ಷನ್ ನಿರ್ದೇಶಕ ಅಲ್ಲನ್ ಅಮೀನ್ ಆಕ್ಷನ್ ನಿರ್ದೇಶಕರಾಗಲಿದ್ದಾರೆ. ತನ್ನ ತಂಡಕ್ಕಾಗಿ ಪ್ರಮೋಶನಲ್ ಸಂಗೀತ ವಿಡೀಯೋವನ್ನೂ ಹೊರತರಲಿರುವ ಅವರು ಇದಕ್ಕಾಗಿ ಸಂದೀಪ್ ಚೌಟಾರನ್ನು ಗೊತ್ತು ಮಾಡಿದ್ದಾರೆ.
ಹೀಗೆ ಬಾಲಿವುಡ್ ಚೆಲವೆಯರು ಕ್ರಿಕೆಟಿಗರೊಂದಿಗೆ ಕಾಣಿಸಿಕೊಳ್ಳಲಿದ್ದು ವೀಕ್ಷಕರಿಗೆ ಮನರಂಜನೆ ನೀಡಲಿದ್ದಾರೆ.