ಬಿಟ್ಟರೂ ಬಿಡದೀ ಮಾಯೆ ಎಂಬುದು, ಬಾಲಿವುಡ್ನ ಖ್ಯಾತ ನಿರ್ದೇಶಕ ರಾಂಗೋಪಾಲ್ ವರ್ಮಾಗೆ ಸರಿಯಾಗಿ ಅನ್ವಯಿಸುತ್ತದೆ. ಅದ್ಯಾಕೋ ಅವರು ಬಿಟ್ಟರೂ ಅವರನ್ನು ವಿವಾದಗಳು ಬಿಡುವ ಲಕ್ಷಣಗಳು ಕಾಣುತ್ತಿಲ್ಲ. ಒಂದಿಲ್ಲ ಒಂದು ವಿವಾದ ಅವರನ್ನು ಸುತ್ತುವರಿಯುತ್ತಲೇ ಇದೆ. ಇದೀಗ ಸಂಗೀತ ಕ್ಷೇತ್ರದ ದೈತ್ಯ ಟಿ-ಸೀರಿಸ್ ಸರದಿ. ಟಿ-ಸೀರಿಸ್ ವರ್ಮಾ ವಿರುದ್ದ ದೂರು ನೀಡಿದೆ.
ನವದೆಹಲಿಯ ನೋಯ್ಡಾ ಪೊಲೀಸ್ ಠಾಣೆಯಲ್ಲಿ ವರ್ಮಾ ವಿರುದ್ಧ ಪ್ರಥಮ ಮಾಹಿತಿ ವರದಿ ದಾಖಲಾಗಿದೆ. ವಂಚನೆ, ಫಿತೂರಿ, ಮೋಸ, ನಂಬಿಕೆ ದ್ರೋಹ, ಸುಲಿಗೆಯ ಆರೋಪಗಳನ್ನು ವರ್ಮಾ ವಿರುದ್ಧ ಹೊರಿಸಲಾಗಿದೆ.
ಅದ್ಯಾಕೋ, ಶರ್ಮಾ ಅವರು ಇತ್ತೀಚಿನ ದಿನಗಳಲ್ಲಿ ಕಷ್ಟದ ಹಾದಿ ಸವೆಸುತ್ತಿದ್ದಾರೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ರಾಮು ಅವರಿಗೆ ಸಮಯ ಸರಿ ಇದ್ದಂತೆ ತೋರುತ್ತಿಲ್ಲ. ಹಿಂಗಾದ್ರೆ ಸರ್ಕಾರ್ 2ನ ಗತಿ ಏನು ಎಂಬುದು ಚಿತ್ರಪ್ರೇಮಿಗಳ ಪ್ರಶ್ನೆ