ಸುಂದರಾಂಗ ಸಲ್ಮಾನ್ ಖಾನ್ ಜತೆ ನಟಿಸುವ ಅವಕಾಶ ಲಭಿಸಿದ್ದರಿಂದ ಅನಂದ ತುಂದಿಲಳಾಗಿರುವ ಕರಿನಾ ಕಪೂರ್ಗೆ ಸಂತಸದ ಉದ್ವಿಗ್ನಿತೆ. ನಟನೆಯಲ್ಲಿ ಆ ಪಾಟಿ ಅನುಭವ ಇದ್ದರೂ ಸಹ, ಕರೀನಾಮ್ಮಗೆ ಸಲ್ಲು ಜೊತೆ ಅಭಿನಯಿಸುವ ವೇಳೆ ಪ್ರಥಮ ಬಾರಿ ಕ್ಯಾಮರಾ ಮುಂದೆ ನಿಂತ ಪೋರಿಯಂತೆ ಮೈಯೊಳಗೆಲ್ಲ ಒಂಥರಾ ನಡುಕವಂತೆ!
ಈ ಹಿಂದೆ ಪ್ರಿಯದರ್ಶನ್ ಅವರ ಕ್ಯೂನ್ ಕಿಯಲ್ಲಿ ಈ ಹಿಂದೆ ನಟಿಸಿದ್ದರೂ ಸಲ್ಮಾನ್ ಜತೆ ನಟಿಸುವಾಗಿ ನರ್ವಸ್ ಅಗುತ್ತೆ ಅಂತ ಕರಿನಾ ಹೇಳಿಕೊಂಡಿದ್ದಾರೆ. ನಾವಿಬ್ಬರು ಜತೆಯಾಗಿ ನಟಿಸುವುದಕ್ಕೆ ತುಂಬಾ ಮುಂಚೆ ಸಲ್ಮಾನ್ ನನ್ನ ಅಕ್ಕನ ಹೀರೋ ಆಗಿದ್ದರು. ಇದೀಗ ತಾನು ಅವರೊಂದಿಗೆ ನಟಿಸುತ್ತಿದ್ದೇನೆ ಎಂಬುದು ಕರಿನಾ ಎಕ್ಸೈಟ್ ಆಗಲು ಕಾರಣ.
ಇವರ ನಟನೆಯ ಜಬ್ ವಿ ಮೆಟ್ ಕೊನೆಗೂ ಮುಂಬೈ ಹೊರವಲಯದಲ್ಲಿ ಚಿತ್ರೀಕರಣ ಆರಂಭಿಸಿದೆ.
ಈ ಇಬ್ಬರು ಸಂಜಯ್ ಲೀಲಾ ಬನ್ಸಾಲಿಯವರ ಬಾಜಿರಾವ್ ಮಸ್ತಾನಿಯಲ್ಲಿ ಒಟ್ಟಿಗೆ ನಟಿಸಬೇಕಿತ್ತು. ಆದರೆ ಸಿನಿಮಾ ನಿಜವಾಗಲಿಲ್ಲ. ಇದಲ್ಲದೆ ಸಲ್ಮಾನ್ ಅವರ ಗೃಹ ನಿರ್ಮಾಣದ ಮೈ ಪಂಜಾಬಿ ನಿಖಾದಲ್ಲೂ ಕರಿನಾ ನಟಿಸಬೇಕಿತ್ತು. ಇದೂ ಸಹ ಮೇಲೇಳಲಿಲ್ಲ.
"ನಮ್ಮ ಹೊಸ ಸಿನಿಮಾ ಮೈ ಔರ್ ಮಿಸೆಸ್ ಖನ್ನಾ ಒಂದು ಅದ್ಭುತ ರೊಮಾಂಟಿಕ್ ಸಿನಿಮಾ. ಇಂತಹ ಒಂದು ಪವಿತ್ರ ಪ್ರೇಮಕತೆಯಲ್ಲಿ ಸಲ್ಮಾನ್ ಈ ಹಿಂದೆ ನಟಿಸಿದ್ದಾರೆ ಎಂದು ನನಗನಿಸುವುದಿಲ್ಲ. ನಾನೂ ಸಹ ಇಂತಹ ಒಂದು ಮಜಬೂತಾದ ಸಿನಿಮಾದಲ್ಲಿ ಇದುವರೆಗೆ ನಟಿಸಿಯೇ ಇಲ್ಲ. ಸೊಹೈಲ್ ಕೂಡ ಇದರಲ್ಲಿ ನಟಿಸುತ್ತಾರೆ" ಎಂದು ಕರಿನಾ ಕಣ್ಣು ಮಿಟುಕಿಸುತ್ತಾರೆ.
ಕರೀನ ತನ್ನ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಅನನುಭವಿ ನಿರ್ದೇಶಕನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಿರ್ದೇಶಕ ಪ್ರೇಮ್ ಸೋನಿಗೆ ಇದು ಚೊಚ್ಚಲ ಸಿನಿಮಾ. ಸೋನಿ ಒಬ್ಬ ಪ್ರತಿಭಾವಂತ. ಒಂದೊಮ್ಮೆ ಆತ ಪ್ರತಿಭಾವಂತನಾಗಿರದಿದ್ದರೂ ಏನಿಲ್ಲ. ನಾನು ಈ ಸಿನಿಮಾದಲ್ಲಿ ನಟಿಸುತ್ತಿರುವುದು ಸಲ್ಮಾನ್ಗಾಗಿ ಎಂಬುದಾಗಿ ಕರಿನಾ ಷರಾ ಬರೆದಿದ್ದಾರೆ! ಕಪೂರ್ಗೆ ಖಾನ್ ಮೇಲಿ ಈ ಪರಿಯ ಅಭಿಮಾನ!!